ಮೈಸೂರು– ಆರ್ ಎಸ್ ಎಸ್‌ನವ್ರು ಜನಸಂಘ, ಬಜರಂಗದಳದ ಯಾರಾದ್ರೂ ಒಬ್ರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರ ?ಹೇಳಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಇಂದು ನಡೆದ ಬಿಜೆಪಿ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶ ಭಕ್ತಿಯನ್ನು ಇವರಿಂದ ಕಲಿಯಬೇಕಾ. ದೇಶಕ್ಕಾಗಿ ಹೋರಾಡಿ ಆಸ್ತಿಪಾಸ್ತಿ ಕಳೆದುಕೊಂಡವರು ಕಾಂಗ್ರೆಸ್‌ನವರು. ಗಾಂದಿ ಜೊತೆ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪಾಲ್ಗೊಂಡವರನ್ನು ಜೈಲಿಗಟ್ಟಿ ಅಂತ ಬ್ರಿಟೀಷರಿಗೆ ಹೇಳಿದ್ದು ಇದೇ ಆರ್‌ಎಸ್‌ಎಸ್‌ನವರು. ನಿಮ್ಮಿಂದ ದೇಶ ಭಕ್ತಿ ಕಲಿಯಬೇಕಿಲ್ಲ ಆರ್‌ಎಸ್‌ಎಸ್ ಬಿಜೆಪಿಯವ್ರೇ. ದೇಶಭಕ್ತಿ ಅನ್ನೋದು ಕಾಂಗ್ರೆಸ್‌ನ ಹುಟ್ಟುಗುಣ ಎಂದು ಸಿದ್ದರಾಮಯ್ಯ ಗುಡುಗಿದರು.