ಬೆಂಗಳೂರು,ಆ.4-
ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದಾಗಿ ತಪ್ಪೊಪ್ಪಿಗೆ ಪ್ರಕರಣಕ್ಕೆ ಸಂಬಂಧ 15 ವರ್ಷಗಳ ಹಿಂದೆ 15 ವರ್ಷದ ಬಾಲಕಿಯ ಶವ ಹೂತು ಹಾಕಿರುವ ಕುರಿತು ಸಾಮಾಜಿಕ ಹೋರಾಟಗಾರ ಟಿ. ಜಯಂತ್ ಅವರು
ಎಸ್ ಐಟಿಗೆ ದೂರು ನೀಡಿದ್ದಾರೆ.
15 ವರ್ಷದ ಬಾಲಕಿಯ ಶವ ಹೂತಿದ್ದನ್ನು ನಾನು ನೋಡಿದ್ದೇನೆ. ಎಂದು ಅದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬೆಳಗ್ಗೆ 10 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬೆಳ್ತಂಗಡಿಯಲ್ಲಿರುವ ಎಸ್ ಐಟಿ ಕಚೇರಿಗೆ ಭೇಟಿ ನೀಡಿ ಸಾಮಾಜಿಕ ಹೋರಾಟಗಾರ ಟಿ. ಜಯಂತ್ ಅವರು ದೂರು ನೀಡಿದರು.
ಪ್ರಕರಣ ದಾಖಲು ಮಾಡದೆ ಶವ ಹೂತು ಹಾಕಲಾಗಿದೆ. ಶವ ಹೂತು ಹಾಕಿದ ಜಾಗ ಗೊತ್ತಿದೆ. ನಾನೇ ಅದಕ್ಕೆ ಪ್ರತ್ಯಕ್ಷ ದರ್ಶಿ ಈಗಲೂ ಎಸ್ಐಟಿ ಅಧಿಕಾರಿಗಳಿಗೆ ಆ ಜಾಗವನ್ನು ತೋರಿಸುತ್ತೇನೆ ಎಂದು ಮತ್ತೊಬ್ಬ ದೂರುದಾರ ಜಯಂತ್ ಹೇಳಿಕೆ ನೀಡಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಇಚೀಲಂಪಾಡಿ ನಿವಾಸಿ ಜಯನ್ ಎಂಬ ಸಾಕ್ಷಿದಾರ ಹದಿನೈದು ವರ್ಷಗಳ ಹಿಂದೆ ಬಾಲಕಿ ಒಬ್ಬಳ ಮೃತ ದೇಹ ನೋಡಿದೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಬಾಲಕಿಯ ನೋಡಿದ್ದೆ 15 ವರ್ಷದ ಬಾಲಕಿಯ ಶವವನ್ನು ಹೂತು ಹಾಕಲಾಗಿದೆ.ಈ ಪ್ರಕರಣವನ್ನು ಪೊಲೀಸರು ದಾಖಲು ಮಾಡದೆ ಶವನ್ ಹಾಕಲಾಗಿದೆ.
ಹೂತು ಹಾಕಿದ ಜಾಗ ನನಗೆ ಗೊತ್ತಿದೆ. ಎಂದು ಎಸ್ಐಟಿ ಅಧಿಕಾರಿಗಳ ಕಚೇರಿಗೆ ಬಂದು ಹೇಳಿಕೆ ನೀಡಿದ್ದರು.
ಅಧಿಕಾರಿಗಳು ಆತನಿಗೆ ಸೋಮವಾರ ಬರುವಂತೆ ತಿಳಿಸಿದ್ದರು. ಹಾಗಾಗಿ ಟಿ ಜಯಂತ್ ಕಚೇರಿಗೆ ಬಂದು ದೂರು ನೀಡಿದ್ದಾರೆ.
Previous Articleಇತಿಹಾಸ ನಿರ್ಮಿಸಿದ ಬೆಂಗಳೂರು ಮೆಟ್ರೋ
Next Article ರಮ್ಯಾಗೆ ಸಂದೇಶ ಕಳುಹಿಸಿದವರಿಗೆ ಪೊಲೀಸ್ ಶೋಧ !