ಬೆಂಗಳೂರು,ಜ.11:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವಿಗೆ ಓಗೊಟ್ಟು, ಹಿಂಸಾ ಮಾರ್ಗದ ನಕ್ಸಲೀಯ ಚಳುವಳಿ ಬಿಟ್ಟು ಸಮಾಜದ ಮುಖ್ಯ ವಾಹಿನಿ ಪ್ರವೇಶಿಸುವ ಉದ್ದೇಶದೊಂದಿಗೆ ಶರಣಾದ ನಕ್ಸಲರ ಆಯುಧಗಳ ಬಗ್ಗೆ ಎದ್ದಿದ್ದ ವಿವಾದ ತಣ್ಣಗಾಗಿದೆ.
ನಕ್ಸಲ್ ಚಳವಳಿಯಲ್ಲಿ ಸಕ್ರಿಯ ರಾಗಿದ್ದು ಶರಣಾದ ಆರು ಮಂದಿ ನಕ್ಸಲರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚಿ ಅವುಗಳನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ
ಕೊಪ್ಪ ತಾಲೂಕಿನ ಮೇಗೂರು ಅರಣ್ಯದಲ್ಲಿ ಹೂತು ಇಡಲಾಗಿದ್ದ AK 56 ಗನ್, ರಿವಾಲ್ವಾರ್, ಬಂದೂಕು ಸೇರಿದಂತೆ 6 ಶಸ್ತ್ರಾಸ್ತ್ರಗಳನ್ನು ಚಿಕ್ಕಮಗಳೂರು ಪೊಲೀಸರು ಜಪ್ತಿ ಮಾಡಿದ್ದಾರೆ.
ನಕ್ಸಲರು ಶರಣಾಗತಿಗೂ ಮುನ್ನ ಮೇಗೂರು ಅರಣ್ಯದಲ್ಲಿ ಅಡಗಿದ್ದರು. ಶರಣಾಗುವ ದಿನ ಮೇಗೂರು ಅರಣ್ಯದಲ್ಲೇ ಕೊನೆಯಬಾರಿಗೆ ಸಭೆ ನಡೆಸಿದ್ದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಶರಣಾಗಿದ್ದರು.
ಶರಣಾಗತಿ ವೇಳೆ ಶಸ್ತ್ರಾಸ್ತ್ರ ಹಸ್ತಾಂತರವಾಗ ಬಗ್ಗೆ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೊಪ್ಪ ಠಾಣೆ ಇನ್ಸ್ ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಕಳೆದ ಎರಡು ದಿನಗಳಿಂದ ಹುಡುಕಾಟ ನಡೆಸಿ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿದೆ.
ನಕ್ಸಲರು ಕೊನೆಯಬಾರಿಗೆ ಸಭೆ ನಡೆಸಿದ್ದ ಸ್ಥಳದಲ್ಲೇ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ. ಈ ಬಗ್ಗೆ ಶರಣಾದ ನಕ್ಸಲರು ಕೂಡ ಪೊಲೀಸರಿಗೆ ಮಾಹಿತಿ ನೀಡಿದ್ದರು
ಇದರ ಆಧಾರದಲ್ಲಿ ಪೊಲೀಸರು ಒಂದು AK 56, ಮೂರು 303 ರೈಫಲ್, ಒಂದು 12 bore SBBL, ಒಂದು ಕಂಟ್ರಿ ಮೇಡ್ ಪಿಸ್ತೂಲ್ ಸೇರಿಂದತೆ ಒಟ್ಟು 6 ಬಂದೂಕು ಪತ್ತೆಯಾಗಿವೆ. ಜೊತೆಗೆ ಹನ್ನೊಂದು 7.62ಎಂಎಂ AK ammunitions, 303 ಬಂದೂಕಿನ 133 ಗುಂಡುಗಳು ಸೇರಿದಂತೆ 176 ಜೀವಂತ ಗುಂಡುಗಳು ಪತ್ತೆಯಾಗಿವೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ 25(1ಬಿ), 7 ಮತ್ತು 25(1ಎ) ಶಸ್ತ್ರಾಸ್ತ್ರ ಕಾಯ್ದೆ 1959 ಅಡಿ ಪ್ರಕರಣ ದಾಖಲಾಗಿದೆ.


6 ಪ್ರತಿಕ್ರಿಯೆಗಳು
дайсон стайлер для волос с насадками цена официальный сайт купит… дайсон стайлер для волос с насадками цена официальный сайт купит… .
купить дайсон стайлер для волос с насадками официальный сайт цен… fen-dn-kupit-12.ru .
какой стайлер дайсон лучше купить stajler-dsn-1.ru .
купить дайсон фен в москве у официального дилера fen-dn-kupit-12.ru .
dyson фен оригинал stajler-dsn-1.ru .
пылесос дайсон беспроводной купить в екатеринбурге пылесос дайсон беспроводной купить в екатеринбурге .