ಚಿಕ್ಕಮಗಳೂರು: ಕರ್ನಾಟಕ ಸೇರಿದಂತೆ ಕೇರಳ, ಆಂಧ್ರಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಎನಿಸಿರುವ ಆರು ಮಂದಿ ನಕ್ಸಲರು ಜಿಲ್ಲಾಡಳಿತ ಮುಂದೆ ಶರಣಾಗತಿಗೆ ನಿರ್ಧರಿಸಿದ್ದಾರೆ.
ಕರ್ನಾಟಕ ನಕ್ಸಲ್ ತುಂಗಾ ದಳದ ನಾಯಕಿ ಮುಂಡಗಾರು ಲತಾ, ಸುಂದರಿ, ವನಜಾಕ್ಷಿ, ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ನಕ್ಸಲ್ ಜೀಶ, ಆಂಧ್ರ ಪ್ರದೇಶದ ಕೆ.ವಸಂತ, ಮಾರೆಪ್ಪ ಅರೋಲಿ ಶರಣಾಗತಿಗೆ ಮುಂದಾಗಿದ್ದಾರೆ.
ಶರಣಾಗತಿಗೆ ಮುಂದಾಗಿರುವುದನ್ನು 6 ಮಂದಿ ನಕ್ಸಲರು ಶಾಂತಿಗಾಗಿ ನಾಗರಿಕ ವೇದಿಕೆಗೆ ಪತ್ರ ಬರೆದಿದ್ದಾರೆ.ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ನಾಗರಿಕ ವೇದಿಕೆಯ ಸದಸ್ಯರು ಚರ್ಚಿಸಿದ್ದಾರೆ. ಕಳೆದ 3 ತಿಂಗಳಿನಿಂದ ಚಿಕ್ಕಮಗಳೂರು, ಉಡುಪಿ ಭಾಗದಲ್ಲಿ ನಕ್ಸಲ್ ಚಟುವಟಿಕೆಗಳು ಕಂಡುಬಂದಿದ್ದವು.
ಶರಣಾಗತಿ ಮುಂದಾಗಿರುವ ನಕ್ಸಲರು 7 ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟಿದ್ದಾರೆ.
ನಕ್ಸಲರು ಮುಖ್ಯವಾಹಿನಿಗೆ ಬರುವ ಪ್ರಕ್ರಿಯೆಯು ಘನತೆಯುತವಾಗಿ ನಡೆಯಬೇಕು ಹಾಗೂ ಅವರ ಆತ್ಮಗೌರವಕ್ಕೆ ಯಾವುದೇ ಧಕ್ಕೆಯಾಗಬಾರದು. ಹೋರಾಟದ ಮಾರ್ಗವನ್ನು ಬದಲಾಯಿಸಿ, ಪ್ರಜಾತಾಂತ್ರಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯಾವುದೇ ರೀತಿಯ ತಡೆಯಾಗದಂತೆ ಬಯಸಿದ್ದಾರೆಂದು ತಿಳಿಸಿದ್ದಾರೆ
ನಕ್ಸಲೀಯರು ಹೊರಬಂದ ನಂತರ ಜೈಲುಗಳಲ್ಲಿ ಕೊಳೆಯುವ ಸ್ಥಿತಿ ಎದುರಾಗಬಾರದು,ಯಾವುದೇ ಸಂಬಂಧವಿಲ್ಲದ ಕೆಲ ಪ್ರಕರಣಗಳಲ್ಲಿ ಅವರ ಹೆಸರುಗಳನ್ನು ಸೇರಿಸಿದ್ದು, ಈ ಪ್ರಕರಣಗಳ ಜಾಲದಿಂದ ಮುಕ್ತಿಸಿಗಬೇಕು ಹಾಗೂ ಮುಖ್ಯವಾಹಿನಿಗೆ ಬಂದ ಬಳಿಕ ಶೀಘ್ರ ಜಾಮೀನಿನ ಮೇಲೆ ಹೊರಬರಲು ಸಹಕರಿಸುವಂತೆ ಬೇಡಿಕೆ ಇಡಲಾಗಿದೆ.
ಎಲ್ಲ ಮೊಕದ್ದಮೆಗಳನ್ನು ಒಂದೇ ನ್ಯಾಯಾಲಯದಡಿಯಲ್ಲಿ ತಂದು ತ್ವರಿತ ವಿಚಾರಣೆ ಮಾಡುವಂತೆ ಕೋರಿದ್ದಾರೆ.
ಅವರಿಗೆ ಆರ್ಥಿಕ ನೆರವು ಒದಗಿಸುವ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಹಾಗೂ ಹೊರಬಂದ ನಂತರ ಅವರ ಜೀವನಕ್ಕೆ ದಾರಿ ಏನು ಎಂಬ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ.
ಈಗಾಗಲೇ ಮುಖ್ಯವಾಹಿನಿಗೆ ಬಂದಂತಹ ಹಲವರ ಬದುಕು ಅತಂತ್ರವಾಗಿದೆ. ಅವರ ಕೇಸ್ಗಳ ಇತ್ಯರ್ಥಕ್ಕೆ ಹಾಗೂ ಬದುಕಿನ ಭದ್ರತೆಗೆ ತಕ್ಷಣ ಕ್ರಮಕೈಗೊಳ್ಳಬೇಕು ಹಾಗೂ ಬೇರೆ ಬೇರೆ ಜೈಲುಗಳಲ್ಲಿರುವ ಸಂಗಾತಿಗಳಿಗೆ ಕೂಡ ಈ ಪ್ಯಾಕೇಜ್ ಅನ್ವಯವಾಗುವಂತೆ ಮಾಡಿ. ಅವರ ಬಿಡುಗಡೆಗೆ ಸಹಕರಿಸುವಂತೆ ಬೇಡಿಕೆ ಇಡಲಾಗಿದೆ.
ಈ ಎಲ್ಲ ವಿಚಾರಗಳಲ್ಲಿ ಕರ್ನಾಟಕ, ಕೇರಳ, ತಮಿಳುನಾಡು 3 ರಾಜ್ಯಗಳ ನಿಲುವು ಒಂದೇಯಾಗಿರುತ್ತದಾ ಎಂದು ಸ್ಪಷ್ಟತೆ ಕೋರಿದ್ದಾರೆ.ವಿಕ್ರಮ್ ಗೌಡರ ಎನ್ ಕೌಂಟರ್ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಕೋರಲಾಗಿದೆ.
ಇತ್ತೀಚೆಗೆ ಉಡುಪಿ ಜಿಲ್ಲೆಯ ಕಬ್ಬಿನಾಲೆ ಅರಣ್ಯದ ಪೀತಬೈಲು ಪ್ರದೇಶದಲ್ಲಿ ಎನ್‌ಕೌಂಟರ್ ಆಗಿತ್ತು. ಎರಡು ದಶಕದಿಂದಲೂ ತಲೆಮರೆಸಿಕೊಂಡು ಓಡಾಡುತ್ತಿದ್ದ ನಕ್ಸಲ್ ನಾಯಕ ವಿಕ್ರಂಗೌಡ ಎನ್‌ಕೌಂಟರ್‌ಗೆ ಬಲಿ ಆಗಿದ್ದ.
ಬಳಿಕ ಸಿಎಂ ಸಿದ್ದರಾಮಯ್ಯ ನಕ್ಸಲೀಯರಿಗೆ ಶರಣಾಗುವಂತೆ ಕರೆ ನೀಡಿ ರಾಜ್ಯದ ಎಲ್ಲಾ ನಕ್ಸಲೀಯರು ಮುಖ್ಯವಾಹಿನಿಗೆ ಬರಲು ನಮ್ಮ ಸರ್ಕಾರವು ಬಯಸುತ್ತದೆ. ನಕ್ಸಲೀಯರು ಪ್ರಜಾತಾಂತ್ರಿಕತೆಯ ಮುಖ್ಯವಾಹಿನಿಗೆ ಬರಬೇಕೆಂದು ಹೇಳಿದ್ದರು.
ಅಲ್ಲದೆ ಶರಣಾದ ನಕ್ಸಲೀಯರಿಗೆ ಹಂತ ಹಂತವಾಗಿ ಆರ್ಥಿಕ ನೆರವು, ಪ್ರೋತ್ಸಾಹ ಧನ, ಕೌಶಲ್ಯ ತರಬೇತಿಗಳು ನೀಡುವುದಲ್ಲದೆ ಅವರ ಪುನರ್ವಸತಿಗೂ ಸಹ ಎಲ್ಲ ಕ್ರಮಗಳನ್ನು ಸಹಾನುಭೂತಿಯಿಂದ ಹಾಗೂ ಆದ್ಯತೆ ಮೇರೆಗೆ ಪರಿಗಣಿಸಲು ಕ್ರಮವಹಿಸಲಾಗುವುದು. ಅವರ ಮೇಲಿನ ಮೊಕದ್ದಮೆ, ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದೆಂದು ಎಂದು ಭರವಸೆ ನೀಡಿದ್ದರು.

6 ಪ್ರತಿಕ್ರಿಯೆಗಳು
Free video chat emerald chat mobile app and a convenient alternative to Omegle. Instant connections, live communication without registration, usernames, or phone numbers. Just click “Start” and meet new people from all over the world, whenever you like and whatever your mood.
Альтернативные точки доступа кракен зеркало работают через автоматическое перенаправление на основной онион адрес с сохранением всех функций безопасности и шифрования соединения.
Uwielbiasz hazard? casino nv: rzetelne oceny kasyn, weryfikacja licencji oraz wybor bonusow i promocji dla nowych i powracajacych graczy. Szczegolowe recenzje, porownanie warunkow i rekomendacje dotyczace odpowiedzialnej gry.
Крупнейший кракен маркет даркнет предлагает тысячи продавцов с высоким рейтингом, проверенной репутацией и круглосуточной модерацией споров покупателей.
This comprehensive platform serves as a guide for film enthusiasts.Each selection features posters, trailers, and direct links to streaming services,and the collections are grouped into intuitive sections.Fresh content is periodically incorporated to enhance the offerings.This approach saves you time by consolidating resources in one place.You can discover new films based on your preferences.
Надежный ресурс марокетплейс аккаунтов встречает арбитражников в своем пространстве цифровых товаров. Главная фишка этого шопа — заключается в наличии приватной образовательной секции, где выложены секретные мануалы по добыче трафика. На сайте доступны акки Facebook, Instagram, TikTok под любые цели: от пустышек до трастовыми кабинетами с историей. Заходите в наше комьюнити, изучайте обучающие материалы, делитесь опытом чтобы делайте профит на наших расходниках уже сегодня.