ಬೆಂಗಳೂರು,ಜೂ. 21- ನಾಲ್ಕನೇ ಪತ್ನಿಗೆ ನೀಡಲು ಮೂರನೇ ಪತ್ನಿಯ ಮನೆಯಿಂದ ಚಿನ್ನಾಭರಣಗಳನ್ನು ಕಳವು ಮಾಡಿದ ಸರ್ಕಾರಿ ನೌಕರನೊಬ್ಬ ಮಗನಿಂದಲೇ ಹಲ್ಲೆಗೊಳಗಾದ ಘಟನೆ ದೊಡ್ಡಬಿದರಕಲ್ಲು ಗ್ರಾಮದಲ್ಲಿ ನಡೆದಿದೆ.
ದೊಡ್ಡಬಿದರಕಲ್ಲು ಗ್ರಾಮದ ಭೂಪ ಭಕ್ತವತ್ಸಲ ಎಂಬಾತ ಪದ್ಮಾವತಿ, ಸಾವಿತ್ರಿ, ನಾಗರತ್ನಮ್ಮ,ಕವಿತಾ ಸೇರಿ ಕ್ರಮವಾಗಿ ನಾಲ್ವರನ್ನು ವಿವಾಹವಾಗಿದ್ದಾನೆ.
ಈ ಭಕ್ತವತ್ಸಲ ತನ್ನ 3ನೇ ಪತ್ನಿ ನಾಗರತ್ನಮ್ಮ ಮನೆಯಲ್ಲಿದ್ದ 50 ಗ್ರಾಂಗೂ ಹೆಚ್ಚು ಚಿನ್ನಾಭರಣಗಳನ್ನು ಕಳವು ಮಾಡಿ ನಾಲ್ಕನೇ ಪತ್ನಿ ಕವಿತಾಗೆ ಕೊಟ್ಟಿದ್ದು,ಈ ವಿಚಾರ ಮೂರನೇ ಪತ್ನಿಯ ಮಗ 18 ವರ್ಷದ ಜೀವನ್ಗೆ ಗೊತ್ತಾಗಿದೆ.
ಇದರಿಂದ ಆಕ್ರೋಶಗೊಂಡ ಜೀವನ್ ಕವಿತ ಮನೆಗೆ ತೆರಳಿ ಮಲಗಿದ್ದ ಭಕ್ತವತ್ಸಲ ಮೇಲೆ ದಾಳಿ ನಡೆಸಿದ್ದಾನೆ.
ಪತ್ನಿಯರ ಫೈಟ್:
ಕೃಷ್ಣ ಭಾಗ್ಯ ಜಲ ನಿಗಮದಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ನಾಲ್ಕು ಮದುವೆಯಾಗಿರುವ ಭಕ್ತವತ್ಸಲ ಯಾರೊಬ್ಬರಿಗೂ ವಿಚ್ಛೇದನ ನೀಡಿಲ್ಲ, ನಾಲ್ವರು ಪತ್ನಿಯರಿಂದ ಆತನಿಗೆ 6 ಮಕ್ಕಳಿದ್ದಾರೆ.
ಮೂರನೇ ಪತ್ನಿ ನಾಗರತ್ನಮ್ಮ ಹಾಗೇ ನಾಲ್ಕನೇ ಪತ್ನಿ ಪದ್ಮಾವತಿ ಇಬ್ಬರೂ ಕೂಡ ಪತಿ ನನಗೆ ಬೇಕು ಎಂದು ಪಟ್ಟುಹಿಡಿದಿದ್ದು, ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.