ಬೆಳಗಾವಿ, ಡಿ.20:
ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯ ಸಿಟಿ ರವಿ ತಮ್ಮ ವಿರುದ್ಧ ಬಳಸಿದ ಆಕ್ಷೇಪಾರ್ಹ ಶಬ್ದದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ ಸದನದಲ್ಲಿ ಬಿಜೆಪಿಯ ಎಲ್ಲರೂ ಸಿ.ಟಿ. ರವಿ ಅವರ ಪರವಾಗಿ ನಿಂತು ಧೃತರಾಷ್ಟ್ರರಾದರು ಎಂದು ಬೇಸರ ವ್ಯಕ್ತಪಡಿಸಿದರು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ,
ನಾನು ಒಬ್ಬ ತಾಯಿ ಇದ್ದೀನಿ, ಅಕ್ಕ ಇದ್ದೀನಿ. ರಾಜಕಾರಣದಲ್ಲಿ ರೋಷಾವೇಶವಾಗಿ ಮಾತನಾಡಬಹುದು, ನಾನು ಯಾರಿಗೂ ಕಾಟ ಕೊಟ್ಟಿಲ್ಲ. ಆದ್ರೆ ಸಿ.ಟಿ ರವಿ ಅವರು ಹೇಳಿದ ಪದ ಹೇಳೋದಕ್ಕೂ ಅಸಹ್ಯ ಆಗುತ್ತೆ. ಅವರ ಪರವಾಗಿ ನಿಂತು ಎಲ್ಲರೂ ಧೃತರಾಷ್ಟ್ರ ಆದ್ರು. ಡ್ರಗ್ ಅಡಿಕ್ಟ್ ಅಂದಿದ್ದಕ್ಕೆ ನೀವು ಆಕ್ಸಿಡೆಂಟ್ ಮಾಡಿ ಮೂವರ ಕೊಲೆಗಾರ ಎಂದಿದ್ದೆ. ಅದಕ್ಕೆ ಆ ರೀತಿ ಮಾತನಾಡಿದ್ದಾರೆ. ಸದನದಲ್ಲಿ ನ್ಯಾಯ ಸಿಗದ ಬಗ್ಗೆ ನಾನು ಏನೂ ಹೇಳಲ್ಲ. ನನ್ನ ಸೊಸೆ ನನ್ನ ಮಗ ನನಗೆ ಧೈರ್ಯ ತುಂಬಿದ್ದಾರೆಂದು ತಿಳಿಸಿದರು.
ನಮ್ಮ ನಾಯಕ ರಾಹುಲ್ ಗಾಂಧಿ ಅವರನ್ನು ಡ್ರಗ್ ಅಡಿಕ್ಟ್ ಎಂದು ಎಂದು ಕರೆದಾಗ ನಾನು ನೀವು ಕಾರು ಚಲಾಯಿಸಿ ಅಪಘಾತ ಮಾಡಿ ಮೂವರನ್ನು ಕೊಂದಿದ್ದೀರಿ ನೀವು ಕೊಲೆಗಾರ ಎಂದು ಹೇಳಿದ್ದೇನೆ ಇದರಿಂದ ನಾನು ಹಿಂದೆ ಸರಿಯುವುದಿಲ್ಲ ಆದರೆ ಅವರು ನನ್ನನ್ನು ಅತ್ಯಂತ ಕೆಟ್ಟ ಶಬ್ದ ಬಳಸಿ ನಿಂದಿಸಿದರು ಇದು ಎಲ್ಲರ ಕ್ಯಾಮರಾಗಳಲ್ಲಿ ರೆಕಾರ್ಡ್ ಆಗಿದೆ ಆದರೆ ಈಗ ಆ ರೀತಿ ಹೇಳುತ್ತಿಲ್ಲ ಎನ್ನುತ್ತಿದ್ದಾರೆ ಇದು ಆಕ್ಷಮ್ಯ ಎಂದು ಹೇಳಿ ಕಣ್ಣೀರಿಟ್ಟರು.
ರಾಜಕಾರಣದಲ್ಲಿ ಎಲ್ಲರೂ ನನ್ನನ್ನು ಗಟ್ಟಿಗಿತ್ತಿ ಎಂದು ಪ್ರಶಂಸೆ ವ್ಯಕ್ತಪಡಿಸುತ್ತಿದ್ದರು ಅನೇಕ ಮಹಿಳೆಯರು ನನ್ನನ್ನು ನೋಡಿ ರಾಜಕಾರಣ ಪ್ರವೇಶಿಸುವ ಸ್ಫೂರ್ತಿ ಪಡೆಯುತ್ತಿದ್ದರು. ಆದರೆ ಬಿಜೆಪಿಯ ಈ ನಾಯಕ ಮಾಡಿದ ಟೀಕೆ ನನ್ನನ್ನು ಆಧೀರಳನ್ನಾಗಿ ಮಾಡಿದೆ ಎಂದು ಹೇಳಿದರು
Previous Articleಹೊರಟ್ಟಿ ಕೊಟ್ಟ ಸ್ಪೋಟಕ ತಿರುವು.
Next Article ಸಿ.ಟಿ.ರವಿ ಬಿಡುಗಡೆಗೆ ಕೋರ್ಟ್ ಆದೇಶ.