ಪಾರ್ವತಮ್ಮ ಡಾ.ರಾಜ್‍ಕುಮಾರ್ ಅವರ ಸಹೋದರಿ ನಾಗಮ್ಮ ಬಸವೇಗೌಡ(81) ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಮೃತರು ನಾಲ್ವರು ಗಂಡುಮಕ್ಕಳು, ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದು, ಅವರ ಅಂತ್ಯಕ್ರಿಯೆ ಕೆಸ್ತೂರಿನಲ್ಲಿ ಇಂದು ಸಂಜೆ ನೆರವೇರಲಿದೆ ಅವರ ಕುಟುಂಬದ ಮೂಲಗಳು ತಿಳಿಸಿವೆ.
ಅಪಾರ ಬಂಧುಬಳಗವನ್ನು ಅಗಲಿರುವ ನಾಗಮ್ಮ ಅವರ ನಿಧನಕ್ಕೆ ಡಾ.ರಾಜ್ ಕುಟುಂಬ ವರ್ಗ ಸೇರಿದಂತೆ ಚಲನಚಿತ್ರರಂಗದ ಗಣ್ಯರು, ವಿವಿಧ ಮುಖಂಡರು ಸಂತಾಪ ಸೂಚಿಸಿದ್ದಾರೆ.
ನಾಗಮ್ಮ ಅವರ ಸಹೋದರರಾದ ಎಸ್.ಎ.ಚೆನ್ನಗೌಡ, ಎಸ್.ಎ.ಗೋವಿಂದರಾಜ್, ಶ್ರೀನಿವಾಸ್ ಅವರು ಚಲನಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಸಂಜೆ ನೆರವೇರಲಿರುವ ಅಂತ್ಯಕ್ರಿಯೆಯಲ್ಲಿ ಡಾ.ರಾಜ್‍ಕುಟುಂಬದ ಸದಸ್ಯರು, ವಿವಿಧ ಚಿತ್ರರಂಗದ ಗಣ್ಯರು ಪಾಲ್ಗೊಳ್ಳಲಿದ್ದಾರೆ.