ಬೆಂಗಳೂರು,ಜು.15:
ರಾಜ್ಯದ ಪೊಲೀಸ್ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿರುವ ರಾಜ್ಯ ಸರ್ಕಾರ,34 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಬೆಂಗಳೂರು ನಗರದ ಸಂಚಾರ ವಿಭಾಗದ ಪೊಲೀಸ್ ಮುಖ್ಯಸ್ಥರನ್ನಾಗಿ ಕಾರ್ತಿಕ್ ರೆಡ್ಡಿ ಅವರನ್ನು ನೇಮಿಸಿರುವ ರಾಜ್ಯ ಸರ್ಕಾರ, ಅಪರಾಧ ವಿಭಾಗ, ಸಂಚಾರ ವಿಭಾಗ ಸೇರಿದಂತೆ ಬೆಂಗಳೂರಿನ ವಿವಿಧ ವಿಭಾಗಗಳಲ್ಲಿರುವ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂಬ ಪ್ರತಿಪಕ್ಷಗಳ ಆರೋಪ ಒಂದೆಡೆಯಾದರೆ, ಮತ್ತೊಂದೆಡೆ ಜೈಲುಗಳಲ್ಲಿ ನಡೆಯುತ್ತಿರುವ ವಿಪರೀತ ಅಕ್ರಮಗಳ ಬಗ್ಗೆ ಸರಣಿ ವರದಿಗಳಾಗುತ್ತಿರುವ ಸಂದರ್ಭದಲ್ಲೇ ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದೆ. ಅಪರಾಧ ವಿಭಾಗ, ಸಂಚಾರ ವಿಭಾಗ ಸೇರಿದಂತೆ ಬೆಂಗಳೂರಿನ ವಿವಿಧ ವಿಭಾಗಗಳಲ್ಲಿಯೂ ಸರ್ಜರಿ ಮಾಡಲಾಗಿದೆ.
ಹಲವಾರು ಕಾರಣಗಳಿಂದ ಸೇವೆಗೆ ಅಧಿಕಾರಿಗಳಿಗೂ ಈ ವರ್ಗಾವಣೆಯಲ್ಲಿ ಕೆಲಸದ ಸ್ಥಳ ತೋರಿಸಲಾಗಿದೆ ಹಾಗೂ ಬೆಂಗಳೂರಿನಲ್ಲಿ ಹೊಸದಾಗಿ ರಚನೆಯಾದ ಪೊಲೀಸ್ ಉಪ ವಿಭಾಗಗಳಿಗೆ ನೂತನ ಡಿಸಿಪಿಗಳನ್ನು ನೇಮಿಸಲಾಗಿದೆ.
ವರ್ಗಾವಣೆ ಪಟ್ಟಿ:
ಜಿತೇಂದ್ರ ಕುಮಾರ್ – ಡಿಸಿಪಿ ಕಾನೂನು ಸುವ್ಯವಸ್ಥೆ, ಮಂಗಳೂರು ನಗರ
ಅಕ್ಷಯ್ ಮಚೀಂದ್ರ – ಡಿಸಿಪಿ, ಬೆಂಗಳೂರೂ ಕೇಂದ್ರ ವಿಭಾಗ
ಅಜಯ್ ಹಿಲೋರಿ – ಜಂಟಿ ಪೊಲೀಸ್ ಆಯುಕ್ತ, ಅಪರಾಧ ವಿಭಾಗ
ಪರಶುರಾಮ್ – ಡಿಸಿಪಿ, ವೈಟ್ ಫೀಲ್ಡ್ ವಿಭಾಗ
ಕಾರ್ತಿಕ್ ರೆಡ್ಡಿ – ಜಂಟಿ ಪೊಲೀಸ್ ಆಯುಕ್ತ, ಸಂಚಾರ ವಿಭಾಗ
ಅನೂಪ್ ಶೆಟ್ಟಿ – ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ, ಸಂಚಾರ
ಶಿವಪ್ರಕಾಶ್ ದೇವರಾಜು – ಲೋಕಾಯುಕ್ತ ಎಸ್ಪಿ, ಬೆಂಗಳೂರು
ಜಯಪ್ರಕಾಶ್ – ಬೆಂಗಳೂರು ಉತ್ತರ ಸಂಚಾರ ವಿಭಾಗ, ಡಿಸಿಪಿ
ಎಂ.ನಾರಾಯಣ್ – ಇಲೆಕ್ಟ್ರಾನಿಕ್ ಸಿಟಿ ವಿಭಾಗ, ಡಿಸಿಪಿ
ಅನಿತಾ ಬಿ. ಹದ್ದಣ್ಣನವರ್ – ಬೆಂಗಳೂರು ಆಗ್ನೇಯ ವಿಭಾಗ ಡಿಸಿಪಿ
ಸೈದುಲ್ ಅಡಾವತ್ – ಸಿಐಡಿ, ಎಸ್ಪಿ
ಬಾಬಾ ಸಾಬ್ ನ್ಯಾಮಗೌಡ – ಬೆಂಗಳೂರು ಉತ್ತರ ವಿಭಾಗ, ಡಿಸಿಪಿ
ನಾಗೇಶ್ – ಬೆಂಗಳೂರು ವಾಯುವ್ಯ ವಿಭಾಗ, ಡಿಸಿಪಿ
ಶ್ರೀಹರಿ ಬಾಬು – ಬೆಂಗಳೂರು ಸಿಸಿಬಿ ಡಿಸಿಪಿ
ಸೌಮ್ಯಲತಾ – ಸಿಎಆರ್ ಹೆಡ್ ಕ್ವಾರ್ಟರ್ಸ್, ಡಿಸಿಪಿ
ಎಂ.ಎನ್.ಅನುಚೇತ್ – ಡಿಐಜಿ ನೇಮಕಾತಿ ವಿಭಾಗ
ವರ್ತಿಕಾ ಕಟೀಯಾರ್ – ಬಳ್ಳಾರಿ ವಲಯ, ಡಿಐಜಿ
ಶಾಂತರಾಜು – ಎಸ್ಪಿ, ಗುಪ್ತಚರ ಇಲಾಖೆ
ಸಿರಿ ಗೌರಿ – ಎಸ್ಪಿ, ರಾಜ್ಯ ಅಪರಾಧ ದಾಖಲೆ ವಿಭಾಗ
ಸುಮನ್ ಡಿ. ಪೆನ್ನೆಕರ್ – ಡಿಸಿಪಿ, ಇಂಟಲಿಜೆನ್ಸ್
ಸಿಮಿ ಮರಿಯ ಜಾರ್ಜ್ – ಡಿಸಿಪಿ, ದಕ್ಷಿಣ ವಿಭಾಗ ಸಂಚಾರ
ವೈ.ಅಮರನಾಥ್ – ಕಮಾಂಡೆಂಟ್ ಫಸ್ಟ್ ಬೆಟಾಲಿಯನ್ KSRP
ಯಶೋದಾ ವಟ್ಟಗೋಡಿ – ಎಸ್ಪಿ, ಹಾವೇರಿ
ಗುಂಜನ್ ಅರ್ಯಾ – ಎಸ್ಪಿ, ಧಾರವಾಡ
ಎಂ.ಗೋಪಾಲ್ – ಜಂಟಿ ನಿರ್ದೇಶಕ, ಎಫ್‌ಎಸ್‌ಎಲ್ ಬೆಂಗಳೂರು
ಸಿದ್ಧಾರ್ಥ ಗೋಯಲ್ – ಎಸ್ಪಿ, ಬಾಗಲಕೋಟೆ
ರೋಹನ್ ಜಗದೀಶ್ – ಎಸ್ಪಿ, ಗದಗ
ಶಿವಾಂಶು ರಜಪೂತ – ಎಸ್ಪಿ, ಕೆಜಿಎಫ್
ಎಂ.ಎನ್.ದೀಪನ್ – ಎಸ್ಪಿ, ಉತ್ತರ ಕನ್ನಡ
ಎಸ್.ಜಾನವಿ – ಎಸ್ಪಿ, ವಿಜಯನಗರ
ಚಂದ್ರಗುಪ್ತ – ಐಜಿಪಿ, ಈಶಾನ್ಯ ಕಲಬುರಗಿ
ಇಡಾ ಮಾರ್ಟಿನ್ ಮಾರ್ಬಾನಿಯಾಂಗ್ – ಡಿಐಜಿ, ಬೆಂಗಳೂರು ಪೊಲೀಸ್ ಹೆಡ್ಕ್ವಾರ್ಟರ್ಸ್
ಕಾರ್ತಿಕ್ ರೆಡ್ಡಿ – ಡಿಐಜಿ, ಜಂಟಿ ಆಯುಕ್ತರು, ಬೆಂಗಳೂರು ಸಂಚಾರ ಪೊಲೀಸ್
Previous Articleಗಾಳಿ ಆಂಜನೇಯ ದೇವಸ್ಥಾನ ವಶಕ್ಕೆ ಇದೇ ಕಾರಣ !
Next Article ಆಟೋ ಪ್ರಯಾಣ ಬಲು ದುಬಾರಿ.