ಬೆಳಗಾವಿ.
ಪಂಚಮಸಾಲಿ ಮೀಸಲಾತಿ
ಹೋರಾಟ ಬೆಳಗಾವಿಯಲ್ಲಿ ಭಾರಿ ಸಂಘರ್ಷಕ್ಕೆ ದಾರಿ ಮಾಡಿತು.
ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರ ಜೊತೆ ಪೊಲೀಸರು ನಡೆಸಿದ ಸಂಧಾನ ಯಶಸ್ವಿಯಾಗದೆ ಘರ್ಷಣೆಗಿಳಿದ ಪರಿಣಾಮ
ಪೊಲೀಸರು ಹಿಗ್ಗಾಮುಗ್ಗಾ ಲಾಠಿ ಬೀಸಿದರು.
ರೊಚ್ಚಿಗೆದ್ದ ಹೋರಾಟಗಾರರು ಪೊಲೀಸರ ಮೇಲೆ ಕಲ್ಲು, ಚಪ್ಪಲಿ ತೂರಿದರು.ಇದರಿಂದ ಹಲವಾರು ಮಂದಿ ಗಾಯಗೊಂಡರು.
ಕೆಲವರ ತಲೆ ಒಡೆದು ರಕ್ತ ಚೆಲ್ಲಿತು. ಹಲವರ ಕೈ ಕಾಲುಗಳಿಗೆ ಪೆಟ್ಟುಬಿದ್ದಿತು. ಹಲವರ ಬಟ್ಟೆಗಳು ಹರಿದವು.ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿ ಯುದ್ಧ ಭೂಮಿಯಂತೆ ಆಯಿತು.
ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನಾ ಸಮಾವೇಶ ನಡೆಸಿದ್ದ ಪಂಚಮಸಾಲಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳಕ್ಕೆ ಬಾರದ್ದನ್ನು ಖಂಡಿಸಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದರು. ಮಧ್ಯಾಹ್ನದಿಂದ ಶಾಂತಿಯುತವಾಗಿ ಜನರನ್ನು ತಡೆದು ನಿಲ್ಲಿಸಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಸಂಘರ್ಷ ಯಾತ್ರೆಯನ್ನು ಘೋಷಿಸಿದರು.
ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪೊಲೀಸರು ಮೂರು ಬಾರಿ ಲಾಠಿ ಬೀಸಿದರು. ಕೆಲವರಿಗೆ ತಲೆ ಒಡೆದು ರಕ್ತ ಸೋರಿತು. ಮತ್ತೆ ಕೆಲವರ ಮೈ-ಕಾಲುಗಳಿಗೆ ಗಾಯಗಳಾದವು. ಆದರೂ ಜನ ಹೆದ್ದಾರಿಯಲ್ಲಿ ಓಡಾಡಿದರು. ಪೊಲೀಸರು ಮತ್ತು ಹೋರಾಟಗಾರರ ನಡುವಿನ ಸಂಘರ್ಷ ನಿರಂತರವಾಗಿ ಮುಂದುವರಿಯಿತು.
ಹೆದ್ದಾರಿಯಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಪೊಲೀಸರು ಬ್ಯಾರಿಕೇಡ್ ಅಡ್ಡ ಇಟ್ಟು, ವಾಹನಗಳನ್ನು ನಿಲ್ಲಿಸಿ ಜನರನ್ನು ತಡೆದರು. ಹೆದ್ದಾರಿ ತುಂಬಾ ಜನ ಹರಿದಾಡಿದರು. ನಾಲ್ಕು ಕಡೆ ವಾಹನಗಳ ಸಂಚಾರ ಸಂಪೂರ್ಣ ಬಂದ್ ಮಾಡಿದ್ದರು. ಇದರ ನಡುವೆ ಸ್ವಾಮೀಜಿ ಅವರನ್ನು ಭೇಟಿ ಮಾಡಲು ಹೋದ ಹಿರಿಯ ಅಧಿಕಾರಿಗಳು, ಕೆಲವೇ ಜನರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಆಗುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಒಪ್ಪದ ಸ್ವಾಮೀಜಿ ನಾವು ಶಾಂತಿಯುತವಾಗಿ ಸುವರ್ಣಸೌಧ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ತಿಳಿಸಿದರು.
ಸರ್ಕಾರದ ಪರವಾಗಿ ಸಚಿವರಾದ ಮಹಾದೇವಪ್ಪ, ಲಕ್ಷ್ಮೀ ಹೆಬ್ಬಾಳ್ಕರ್,ಕೆ.ವೆಂಕಟೇಶ್,ಡಿ.ಸುಧಾಕರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನಿಮ್ಮ ಹೋರಾಟದ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ ದಯವಿಟ್ಟು ಧರಣಿ ಕೈ ಬಿಡಬೇಕು ಎಂದು ಮನವಿ ಮಾಡಿದರು.
ಆದರೆ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಕೆಲವರು ಈ ಮನವಿಗೆ ಸೊಪ್ಪು ಹಾಕಲಿಲ್ಲ. ಮುಖ್ಯಮಂತ್ರಿ ಸ್ಥಳಕ್ಕೆ ಬರಬೇಕು. ಇಲ್ಲವೇ ನಾವೇ ಸೌಧಕ್ಕೆ ಹೋಗುತ್ತೇವೆ ಎಂದು ಘೋಷಣೆ ಮೊಳಗಿಸಿದರು. ಆಗ ಸೌಧಕ್ಕೆ ಹೋಗೋಣ ನಡೆಯಿರಿ ಎಂದು ಸ್ವಾಮೀಜಿ ಹೇಳುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನ ನಾ ಮುಂದು, ತಾ ಮುಂದು ಎಂದು ಮುನ್ನುಗ್ಗಿದರು. ದಾರಿ, ಹೊಲ, ಸಿಕ್ಕ ಸಿಕ್ಕ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ತಲುಪಿದರು.
ಪರಿಸ್ಥಿತಿ ನಿಭಾಯಿಸಲು ಹೆಣಗಾಡಿದ ಪೊಲೀಸರು ರಸ್ತೆಗೆ ಅಡ್ಡಲಾಗಿ ಬ್ಯಾರಿ ಕೇಡ್ ಗಳನ್ನು ಅಳವಡಿಸಿದರು ಅದನ್ನು ಕಿತ್ತೊಗೆದ ಹೋರಾಟಗಾರರು ವಿಧಾನಸೌಧತ್ತ ಮುನ್ನುಗ್ಗಲು ಯತ್ನಿಸುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ಮಾಡಿದರು.
ವಿಷಯ ತಿಳಿದ, ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೆದ್ದಾರಿಗೆ ಬಂದು ಅಲ್ಲೇ ಧರಣಿ ಕುಳಿತರು. ಪೊಲೀಸರು ಸ್ವಾಮೀಜಿ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ಬಸ್ಸಿನಲ್ಲಿ ಹತ್ತಿಸಿದರು.
ಮುಂದೆ ಧಾವಿಸಿದ ಬಸನಗೌಡ ಪಾಟೀಲ ಯತ್ನಾಳ, ಈರಣ್ಣ ಕಡಾಡಿ, ಅರವಿಂದ ಬೆಲ್ಲದ ಮುಂತಾದವರು ಪೊಲೀಸ್ ವಾಹನಗಳನ್ನು ಬಿಗಿಯಾಗಿ ಹಿಡಿದು ಎದುರಿಗೇ ನಿಂತರು. ಪೊಲೀಸರು ಅನಿವಾರ್ಯವಾಗಿ ಎಲ್ಲರನ್ನೂ ಕೆಳಗೆ ಇಳಿಸಿದರು.
ಸದ್ಯ ಆ ಪ್ರದೇಶದಲ್ಲಿ ಬಿಗುವಿನ ವಾತಾವರಣ ಮುಂದುವರೆದಿದೆ
Previous Articleಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗೆ ಚಪ್ಪಲಿ ಸೇವೆ.
Next Article ಪಂಚಮಸಾಲಿ ಮೀಸಲಾತಿಗೆ ವಿರೋಧ.


5 ಪ್ರತಿಕ್ರಿಯೆಗಳು
Sweet Bonanza is bursting at the seams with vibrant treats and explosive winning opportunities. Bonus pragmatic play sweet bonanza round multipliers can send your winnings soaring. Taste the thrill!
Chumba Casino — more wins, more fun, zero purchase required. Get your free macumba today and spin the reels on top games. Real rewards await!
DraftKings casino West Virginia Casino delivers massive rewards. Get 500 bonus spins after $5 + up to $1K in day-one credits. Your jackpot journey begins!
Opravdovalekarna.cz – protoze zdravi by nemelo bolet penezenku
opravdovalekarna.cz
Join the millions enchanting colossal on fanduel casino Tennessee – the #1 legitimate coins casino app in America.
Get your $1000 OPERATE IT AGAIN hand-out and refashion every twirl, хэнд and roll into bona fide banknotes rewards.
Firm payouts, whopping jackpots, and non-stop activity – download FanDuel Casino again and start playing like a pro today!