ಬೆಂಗಳೂರು,ಫೆ.06:
ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕುರಿತಂತೆ ಉಂಟಾಗಿರುವ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ.ಪಕ್ಷದ ನಾಯಕರು ಬಿಕ್ಕಟ್ಟು ಬಗೆಹರಿಸಲು ಯತ್ನಿಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ.ಹೀಗಾಗಿ ಬಿಕ್ಕಟ್ಟು ಪರಿಹರಿಸುವ ಹೊಣೆಗಾರಿಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಗಲೇರಿದೆ.
ದೆಹಲಿ ವಿಧಾನಸಭೆ ಫಲಿತಾಂಶದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರಿಗೆ ಗ್ರೀನ್ ಸಿಗ್ನಲ್ ಸಿಗಲಿದೆ. ವಿಜಯೇಂದ್ರ ಮುಂದುವರಿಯಬೇಕಾ? ಅಥವಾ ಬೇಡವೇ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿಯೇ ತೀರ್ಮಾನಿಸಲಿದ್ದಾರೆ.
ರಾಜ್ಯ ಬಿಜೆಪಿ ಬಣಗಳ ರಗಳೆ ಬಿಜೆಪಿ ಹೈಕಮಾಂಡ್‌ಗೆ ತಲೆನೋವು ತಂದಿದ್ದು, ಗೊಂದಲ ಹೆಚ್ಚಾಗಿರುವ ಕಾರಣ ರಾಷ್ಟ್ರೀಯ ಬಿಜೆಪಿ ನಾಯಕರು ಮೋದಿ ತೀರ್ಮಾನಕ್ಕೆ ಬಿಟ್ಟಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮೋದಿ ಮುಂದೆ ರಾಷ್ಟ್ರೀಯ ನಾಯಕರ ತಂಡ ಮೂರು ಆಯ್ಕೆ ಮುಂದಿಟ್ಟಿದ್ದಾರೆ.
ಬಿಜೆಪಿ ಹೈಕಮಾಂಡ್ ಮುಂದೆ ಮೂರು ಆಯ್ಕೆಗಳಿವೆ ಎನ್ನಲಾಗಿದೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮುಂದುವರಿಸುವುದು. ವಿಜಯೇಂದ್ರ ವಿರೋಧಿ ಬಣಕ್ಕೆ ಒಪ್ಪಿತವಾಗುವ ತಟಸ್ಥ ಬಣದವರಲ್ಲಿ ಒಬ್ಬರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವುದು.
ಅಥವಾ ಯಾವ ಬಣವೂ ಬೇಡ ಎಂದು ಆರ್‌ಎಸ್‌ಎಸ್ ನಿಷ್ಠರನ್ನ ಸದ್ಯಕ್ಕೆ ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವುದು ಎಂಬ ಆಯ್ಕೆಗಳು ಮುಂದಿವೆ.
ಈ ನಡುವೆ ಆರ್‌ಎಸ್‌ಎಸ್ ನಾಯಕರಿಂದ ಕೋಟಾ ಶ್ರೀನಿವಾಸ ಪೂಜಾರಿ ಅವರ ಬಗ್ಗೆ ಬಿಜೆಪಿ ಹೈಕಮಾಂಡ್ ವರದಿಯನ್ನು ತರಿಸಿಕೊಂಡಿದ್ದಾರೆ. ಯಾವುದೇ ಬಣದವರಿಗೂ ಮಣೆ ಹಾಕದೆ ಸಂಘ ನಿಷ್ಠರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಬಗ್ಗೆಯೂ ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಗೊತ್ತಾಗಿದೆ.
Previous Articleಹೆಂಡತಿಯನ್ನು ಕೊಂದು ಕತೆ ಕಟ್ಟಿದ.
Next Article ಮಾಲೂರು ಕೃಷ್ಣಯ್ಯಶೆಟ್ಟಿಗೆ ಜೈಲು ಶಿಕ್ಷೆ