ಹೈದರಾಬಾದ್.
ಕೊಡಗಿನ ಬೆಡಗಿ ಸೌತ್ ಇಂಡಿಯಾ ಸೆನ್ಸೇಷನಲ್ ರಶ್ಮಿಕಾ ಮಂದಣ್ಣ ಮದುವೆ ನಿಶ್ಚಯವಾಗಿದೆ.
ಕನ್ನಡ, ಹಿಂದಿ, ತೆಲುಗು ಸೇರಿದಂತೆ ಎಲ್ಲ ಭಾಷೆಗಳಲ್ಲಿ ನಟಿಸುವ ಮೂಲಕ ಅತ್ಯಂತ ಬೇಡಿಕೆ ಇರುವ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಶ್ಮಿಕಾ ಮಂದಣ್ಣ ತಮ್ಮ ಮದುವೆಯ ಕಾರಣಕ್ಕೆ ಹಲವಾರು ಬಾರಿ ಸುದ್ದಿಯಾಗಿದ್ದಾರೆ.
ರಶ್ಮಿಕಾ ಅವರು ಯಾವಾಗ ಮದುವೆಯಾಗಲಿದ್ದಾರೆ ಯಾರ ಜೊತೆ ಸಪ್ತಪದಿ ತುಳಿಯಲಿದ್ದಾರೆ ಎಂಬ ವಿಷಯ ಬಹುತೇಕ ಎಲ್ಲ ಭಾಷೆಗಳಲ್ಲಿ ದೊಡ್ಡ ಸುದ್ದಿಯಾಗಿದೆ.
ಈ ಎಲ್ಲಾ ಸುದ್ದಿಗಳಿಗೆ ಪೂರ್ಣ ವಿರಾಮ ಹಾಕಿರುವ ಅವರು ಇದೀಗ ತಮ್ಮ ಬಹುಕಾಲದ ಗೆಳೆಯ ತೆಲುಗು ಚಿತ್ರರಂಗದ ಆಂಗ್ರಿ ಯಂಗ್ ಮ್ಯಾನ್ ವಿಜಯ ದೇವರಕೊಂಡ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ.
ವಿಜಯ ದಶಮಿ ದಿನದಂದು ಹೈದರಾಬಾದ್ ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ನಡುವೆ ನಿಶ್ಚಿತಾರ್ಥ ಏರ್ಪಟ್ಟಿದೆ ಎರಡು ಕುಟುಂಬಗಳ ಕೆಲವೇ ಕೆಲವು ಮಂದಿ ಅತ್ಯಾಪ್ತ ಸದಸ್ಯರು ಪಾಲ್ಗೊಂಡಿದ್ದ ನಿಶ್ಚಿತಾರ್ಥ ಸಮಾರಂಭ ಅತ್ಯಂತ ಖಾಸಗಿಯಾಗಿ ಪೂರ್ಣಗೊಂಡಿದೆ.
ಇದಾದ ನಂತರ ಉಭಯ ಕುಟುಂಬಗಳ ಮುಖಂಡರು ಇಬ್ಬರ ಮದುವೆ ಬಗ್ಗೆ ಮಾತನಾಡಿದ್ದು ಫೆಬ್ರವರಿಯಲ್ಲಿ ಅದ್ದೂರಿಯಾಗಿ ತೆಲುಗು ಮತ್ತು ಕೊಡವ ಸಂಪ್ರದಾಯದಂತೆ ಮದುವೆ ನಡೆಯಲಿದೆ ಎಂದು ಹೇಳಿದ್ದಾರೆ ಈ ಮೂಲಕ ರಶ್ಮಿಕಾ ಮಂದಣ್ಣ ಯಾವಾಗ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳಿಗೆ ತೆರೆ ಬಿದ್ದಿದೆ
Previous Articleಹೈಕಮಾಂಡ್ ಮುಂದೆ ಶಿವಕುಮಾರ್ ಗರಂ.
Next Article ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.