ಸಂಗ್ರಹಗಳು
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬಂಡವಾಳ ಇಲ್ಲದ ಬಡಾಯಿಗಳು..
    ಬೆಂಗಳೂರು

    ಬಂಡವಾಳ ಇಲ್ಲದ ಬಡಾಯಿಗಳು..

    vartha chakraBy vartha chakraಮೇ 6, 202419 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು 5 May, 2024: ಬರಗಾಲದ ಪರಿಹಾರದ ವಿಚಾರದಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರ ಇನ್ನೂ ಕುಂಭಕರ್ಣ ನಿದ್ರೆಯಲ್ಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟೀಕಿಸಿದರು.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಬಂದು ಕ್ಷಣದಲ್ಲಿ ರೈತರಿಗೆ ನೀಡುವುದಾಗಿ ಹೇಳಿದ್ದರು. ಕ್ಷಣಗಳು ಹೋಗಿ ಗಂಟೆಗಳಾಗಿ, ಈಗ ದಿನಗಳೇ ಕಳೆದಿವೆ. ರೈತರು ಈ ಬಿಸಿಲಿನ ಬೇಗೆಯಿಂದ ಹಾಹಾಕಾರ ಪಡುತ್ತಿದ್ದಾರೆ. ರಾಜ್ಯ ಸರಕಾರವು ಬೇರೆ ರಾಜಕಾರಣ ಮಾಡುತ್ತಿದೆ. ರೈತರ ಕಷ್ಟಕ್ಕೆ ಸ್ಪಂದಿಸದ ಕಟುಕ- ಕರುಣೆ ಇಲ್ಲದ ರಾಜ್ಯ ಸರಕಾರ ಇದು ಎಂದು ಆರೋಪಿಸಿದರು.

    ಮೇವು ಇಲ್ಲದೆ ದನಕರುಗಳನ್ನು ಕಟುಕರಿಗೆ ಮಾರಾಟ ಮಾಡುವ ಸ್ಥಿತಿಗೆ ರೈತರು ಬರುತ್ತಿರುವುದು ಬೇಸರದ ಸಂಗತಿ. ಈ ಸರಕಾರ ಒಂಥರ ಬೂಟಾಟಿಕೆ ಮಾಡುತ್ತಿದೆ. ಜಾಹೀರಾತುಗಳನ್ನು ಕೊಡುತ್ತಿದೆ. ಆದರೆ, ರೈತರ ಸಂಕಷ್ಟಕ್ಕೆ ಸ್ಪಂದಿಸುವ ಗಂಭೀರತೆ ಎಲ್ಲೂ ಕಾಣಿಸುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕಳೆದ ಮುಂಗಾರು, ಹಿಂಗಾರು ಮಳೆ ಕೈಕೊಟ್ಟಿತ್ತು. ಇಂಥ ಸಂದರ್ಭದಲ್ಲಿ ಉರಿಯುವ ಮನೆಯಲ್ಲಿ ಗಳ ಹಿಡಿಯುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ. ಇವರ ಯೋಗ್ಯತೆಗೆ ಇದುವರೆಗೆ ಒಂದು ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಬರಪೀಡಿತ ಪ್ರದೇಶ ಘೋಷಣೆಯನ್ನೂ ವಿಳಂಬ ಮಾಡುತ್ತ ಹೋಗಿದ್ದರು. ಮೂರೂವರೆ ತಿಂಗಳ ಬಳಿಕ ಬರ ಪರಿಹಾರ ಘೋಷಿಸಿದ್ದಾರೆ ಎಂದು ದೂರಿದರು.

    ಈಗ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಿದರೂ ಕೂಡ ರೈತರಿಗೆ ಕೊಟ್ಟಿಲ್ಲ. ಖಜಾನೆ ಬರಿದಾಗಿದೆ. ಈ ಹಣವನ್ನು ಗ್ಯಾರಂಟಿಗೆ ಬಳಸಿಕೊಳ್ಳುವಂತಿದೆ. 2 ಸಾವಿರವನ್ನು 2-3 ತಿಂಗಳಿನಿಂದ ಕೊಟ್ಟಿಲ್ಲ. ಒಂದೇ ಸಾರಿ ಬಿಡುಗಡೆ ಮಾಡಿ ರಾಜಕಾರಣ ಮಾಡುವ ದೃಷ್ಟಿಯಿಂದ ಈ ಹಣವನ್ನು ಉಪಯೋಗಿಸುವ ಅನಿವಾರ್ಯತೆ ಕಾಂಗ್ರೆಸ್ಸಿಗೆ ಇದೆ. ಇವರೊಂಥರ ಬಂಡವಾಳ ಇಲ್ಲದ ಬಡಾಯಿಗಳು ಎಂದು ಆರ್. ಅಶೋಕ್ ಅವರು ಟೀಕಿಸಿದರು. ರಾಜ್ಯದಲ್ಲಿ ಸಾಲ ಮಾಡಿ ಬೆಳೆ ಕೈಸೇರದೆ 900ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಸರಕಾರ ತನ್ನ ಪರಿಹಾರ ನೀಡುವ ಜವಾಬ್ದಾರಿಯನ್ನು ನಿಭಾಯಿಸಿಲ್ಲ ಎಂದು ಆಕ್ಷೇಪಿಸಿದರು.

    ಬರ ಪರಿಹಾರದ ಮೊತ್ತ ಕೇಳಿದರೆ, ಕಾಂಗ್ರೆಸ್ ಸಚಿವರು ಮತ್ತು ಶಾಸಕರು ‘ನಿಮ್ಮ ಹೆಂಗಸ್ರಿಗೆ 2 ಸಾವಿರ ಕೊಟ್ಟಿಲ್ವ’ ಎಂದು ಧಮ್ಕಿ ಹಾಕುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಎಷ್ಟು ದಿನ ಗ್ಯಾರಂಟಿ ಹೆಸರಿನಲ್ಲಿ ರೈತರು, ಜನರಿಗೆ ಮೋಸ ಮಾಡುತ್ತೀರಿ ಎಂದು ಅವರು ಪ್ರಶ್ನಿಸಿದರು. ಕೇಂದ್ರದ ಹಣವನ್ನು ಸದ್ಬಳಕೆ ಮಾಡುವಂತೆ ಒತ್ತಾಯಿಸಿ ನಾನು ಇವತ್ತೇ ಸಿದ್ದರಾಮಯ್ಯನವರಿಗೆ ಒಂದು ಪತ್ರ ಬರೆಯುತ್ತೇನೆ ಎಂದು ಅವರು ಹೇಳಿದರು.

    ತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಬೇಕು. ಶಾಸಕರ ನೇತೃತ್ವದ ಟಾಸ್ಕ್ ಫೋರ್ಸ್ ಕೂಡಲೇ ಕಾರ್ಯಪ್ರವೃತ್ತ ಆಗುವಂತೆ ಆದೇಶ ಹೊರಡಿಸಿ; ರಾಜ್ಯಾದ್ಯಂತ ಮೇವಿನ ಕೊರತೆ ಕಾಡುತ್ತಿದೆ. ಹುಲ್ಲು ಬೆಳೆಯಲೂ ಸಾಧ್ಯವಾಗುತ್ತಿಲ್ಲ. ಹಲವಾರು ಬೋರ್‍ವೆಲ್‍ಗಳು ಒಣಗಿ ಹೋಗಿವೆ. ಕರೆಂಟಿಲ್ಲದೆ ಕೊಳವೆಬಾವಿಯಿಂದ ನೀರೆತ್ತಲಾಗದ ದುಸ್ಥಿತಿ ಇದೆ. ಈ ಗಂಭೀರತೆಯನ್ನು ರಾಜ್ಯ ಸರಕಾರ ಅರ್ಥ ಮಾಡಿಕೊಳ್ಳಬೇಕು. ಗೋಶಾಲೆಗಳನ್ನು ಕೂಡಲೇ ತೆರೆಯಿರಿ ಎಂದು ಅವರು ಆಗ್ರಹಿಸಿದರು. ಎಷ್ಟು ಗೋಶಾಲೆ ತೆರೆಯಲಾಗಿದೆ ಎಂದು ರಾಜ್ಯದ ಜನತೆಗೆ ಲೆಕ್ಕ ಕೊಡಿ ಎಂದು ಒತ್ತಾಯಿಸಿದರು.

    Verbattle
    Verbattle
    Verbattle
    Bangalore BJP Government m Politics Varthachakra ಕಾಂಗ್ರೆಸ್ ಚುನಾವಣೆ ಶಾಲೆ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleನಾನವಳಲ್ಲ ..ನಾನವಳಲ್ಲ.. ಬಿಟ್ಟುಬಿಡಿ
    Next Article ಪ್ರಜ್ವಲ್ ರೇವಣ್ಣ ಮಾನಸಿಕ ಅಸ್ವಸ್ಥ!.?
    vartha chakra
    • Website

    Related Posts

    ಸಕ್ಕರೆ ಕಾರ್ಖಾನೆಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ

    ಮಾರ್ಚ್ 27, 2026

    ವಾಹನ ಸವಾರರೇ ಎಚ್ಚರ!

    ಮಾರ್ಚ್ 27, 2026

    ಹೈಕಮಾಂಡ್ ಗೆ ವಿಧಾನಪರಿಷತ್ ಸದಸ್ಯರ ಮೊರೆ.

    ಮಾರ್ಚ್ 26, 2026

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬಿಗ್ ಅಪ್ಡೇಟ್!

    ಸಕ್ಕರೆ ಕಾರ್ಖಾನೆಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ

    ವಾಹನ ಸವಾರರೇ ಎಚ್ಚರ!

    IPL ಇತಿಹಾಸದಲ್ಲೇ ಮೆಗಾ ಡೀಲ್!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • RalphUnoto ರಲ್ಲಿ Crypto ವಂಚಕ Arrest.
    • Richardroode ರಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಗೆ ಪೊಲೀಸ್ ಹುಡುಕಾಟ
    • Williamdix ರಲ್ಲಿ ಡ್ರಗ್ಸ್ ದಂಧೆ – ಪೊಲೀಸರೇ ಎಚ್ಚರ!
    Latest Kannada News

    ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬಿಗ್ ಅಪ್ಡೇಟ್!

    ಮಾರ್ಚ್ 27, 2026

    ಸಕ್ಕರೆ ಕಾರ್ಖಾನೆಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ

    ಮಾರ್ಚ್ 27, 2026

    ವಾಹನ ಸವಾರರೇ ಎಚ್ಚರ!

    ಮಾರ್ಚ್ 27, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.