ಗದಗ: ರಾಜ್ಯದಲ್ಲಿ 40℅ ವ್ಯವಹಾರದ ಬಗ್ಗೆ ಈಗಾಗಲೇ ಗುತ್ತಿಗೆದಾರರು ಪ್ರಧಾನಿ ಗಮನಕ್ಕೂ ತಂದಿದ್ದಾಯಿತು. ಪರ್ಸೆಂಟೇಜ್ ಕಾರಣಕ್ಕೆ ಗುತ್ತಿಗೆದಾರ ಸಂತೋಷ ಪಾಟೀಲನ ಸಾವು ಆಯಿತು ಎಂಬ ಆರೋಪವೂ ಇದೆ. ಆದ್ರೆ ರಾಜ್ಯದಲ್ಲಿನ ಈ ಪರ್ಸೆಂಟೇಜ್ ವ್ಯವಹಾರದ ಬಗ್ಗೆ ಮಠಾಧೀಶರೊಬ್ಬರ ಹೇಳಿಕೆ ನೀಡಿದ್ದು ಸ್ವತಃ ರಾಜ್ಯ ಸರ್ಕಾರವನ್ನೆ ಮುಜುಗರಕ್ಕೀಡು ಮಾಡಿದಂತಾಗಿತ್ತು. ಆದರೆ ಸ್ವಾಮೀಜಿಗಳೇ ರಾಜ್ಯದಲ್ಲಿ ಪ್ರತಿಯೊಂದು ಕೆಲಸಕ್ಕೂ 30℅ ವ್ಯವಹಾರ ನಡೆದಿದೆ ಎಂದಾಕ್ಷಣ ಸಿಎಂ ಸೇರಿದಂತೆ, ಇರೋ, ಬರೋ ಮಂತ್ರಿಗಳು, ಶಾಸಕರೆಲ್ಲ ಸ್ವಾಮಿಜಿಗಳ ಹೇಳಿಕೆ ವಿರುದ್ಧ ಮುಗಿಬಿದಿದ್ದಾರೆ. ಆರೋಪ ಮಾಡುವ ಸ್ವಾಮಿಜಿ ಬಳಿ ದಾಖಲೆ ಇದ್ರೆ ನೀಡಲಿ ಎಂದು ಪ್ರತಿಕ್ರಿಯಿಸಿದ್ದಾರೆ. ದಾಖಲೆ ಕೇಳಿದವರಿಗೆ ಮತ್ತೆ ಖಡಕ್ ಪ್ರತಿಕ್ರಿಯೇ ನೀಡಿದ ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಶ್ರೀಗಳು, ನಡೆಯುವುದೇ ಬ್ರಷ್ಟಾಚಾರ ಇದಕ್ಕೆ ದಾಖಲೆ ಕೊಡುವುದಕ್ಕೆ ಆಗುತ್ತಾ? ನಿಮ್ಮ ಜನ್ಮಕ್ಕೆ ನಾಚಿಕೆ ಇದೆಯೇ? ಇದು ಒಳಗೆ ನಡೆಯುವ ವ್ಯವಹಾರ. ಹೊರಗೆ ನಡೆಯುವುದಲ್ಲ. ನಾವೇ ಬಾಯಿ ಬಿಟ್ಟು ಹೇಳುತ್ತಿದ್ದೇವೆ. ಲ್ಯಾಂಡ್ ಆರ್ಮಿಯರು 25ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ ಅಂತ. ಇದು ನಿಜವೋ, ಸುಳ್ಳೊ ಅಂತ ಗೊತ್ತಾಗಬೇಕಾದರೆ ಲ್ಯಾಂಡ್ ಆರ್ಮಿ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಆಗ ಅವರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರೋ, ಇಲ್ಲವೋ ಎನ್ನುವುದು ಗೊತ್ತಾಗಲಿದೆ ಎಂದು ದಾಖಲೆ ಕೇಳಿದವರ ವಿರುದ್ಧ ಮತ್ತೆ ದಿಂಗಾಲೇಶ್ವರ ಶ್ರೀ ಹರಿಹಾಯ್ದಿದ್ದಾರೆ. ಇದು ಸರ್ಕಾರವನ್ನು ಮತ್ತಷ್ಟು ಪೇಚಿಗೆ ಸಿಲುಕಿಸುವಂತಹದ್ದಾಗಿದೆ.
ಸರ್ಕಾರ ಸಂಪೂರ್ಣ ಬ್ರಷ್ಟಾಚಾರದಲ್ಲಿ ಮುಳುಗಿದೆ. ಒಂದು ಭೂಮಿ ಪೂಜೆಗೂ ಪರ್ಸೆಂಟೇಜ್, ಎಮ್.ಬಿ ಬರೆಯಬೇಕಂದರೂ ಇಷ್ಟು ಹಣ ಅಂತ ನಿಗದಿ. ವರ್ಗಾವಣೆಗೆ 25-30 ಲಕ್ಷ ಬೇಡಿಕೆ. ಇದು ಯಾರಿಗೂ ಗೊತ್ತಿಲ್ಲ ಅಂತ ಅಂದುಕೊಂಡಿದ್ದೀರಾ? ಎಂದು ಶ್ರೀಗಳು ಸರ್ಕಾರವನ್ನೇ ಪ್ರಶ್ನಿಸಿದ್ದು, ಇದಕ್ಕೆ ಆಡಳಿತರೂಢ ಬಿಜೆಪಿ ಸರ್ಕಾರ ಹೇಗೆ ಪ್ರತಿಕ್ರಿಯಿಸುತ್ತೆ ಅಂತ ಕಾದು ನೋಡಬೇಕಿದೆ.
Previous Articleಡುಪ್ಲೆಸಿಸ್ ರಾಯಲ್ ಆಟಕ್ಕೆ ಲಕ್ನೋ ‘ಫ್ಲಾಪ್’
Next Article ಮತ್ತೆ ಬಂತು ಹುಷಾರ್..