ನಿರ್ದೇಶಕ ಅನುಪ್ ಭಂಡಾರಿ ಅವರ ಚೊಚ್ಚಲ ಚಿತ್ರ ರಂಗಿತರಂಗ ಜುಲೈ 3 ರಂದು ಏಳನೇ ವರ್ಷಕ್ಕೆ ಕಾಲಿಡುತ್ತಿದೆ.
‘ನಾನು ಇಂದು ಏನಾಗಿರುವೆನು ಅದಕ್ಕೆಲ್ಲಾ ಏಳು ವರ್ಷಗಳ ಹಿಂದೆ ನೀವು ನಮ್ಮ ಮೇಲೆ ತೋರಿಸಿದ ಪ್ರೀತಿಯಿಂದಾಗಿ’ ಎಂದು ಅನುಪ್ ಭಂಡಾರಿ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ನಿಮ್ಮ ಬೆಂಬಲ ಮತ್ತು ಪ್ರೀತಿಗಾಗಿ ಧನ್ಯವಾದ ಎಂದು ಹೇಳಿದ್ದಾರೆ.
‘ರಂಗಿತರಂಗ’ ಸಿನಿಮಾ ಮಿಸ್ಟ್ರಿ ಎಳೆಯನ್ನು ಇಟ್ಟುಕೊಂಡು ಬಂದು, ತೆರೆಯ ಮೇಲೆ ಜನಕ್ಕೆ ಸರ್ಪ್ರೈಸ್ ಕೊಟ್ಟ ಸಿನಿಮಾ. ಉತ್ತಮ ಸಿನಿಮಾ ಕೊಟ್ಟರೂ ‘ರಂಗಿತರಂಗ’ ಟೀಂ ಹೊಸದು. ಈ ಟೀಂ ಮೊದಲು ಮಾಡಿದ ಸಿನಿಮಾವೇ ಸಾಕಷ್ಟು ಸದ್ದು ಮಾಡಿತು. ದಾಖಲೆಯನ್ನು ಬರೆಯಿತು. ಈಗಿನ ಸುದ್ದಿ ಎಂದರೆ ದೊಡ್ಡ ನಿರ್ಮಾಪಕರೊಬ್ಬರು ರಂಗಿತರಂಗವನ್ನು ಹಿಂದಿಯಲ್ಲಿ ಹೊರತರಲು ಉತ್ಸುಕರಾಗಿದ್ದಾರೆ ಮತ್ತು ಮುಂಬೈನ ಕಾರ್ಪೊರೇಟ್ ಸ್ಟುಡಿಯೋಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಹಿಂದಿ ರೀಮೇಕ್ ನಲ್ಲಿ ಪ್ರಮುಖ ಪಾತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಶಾಹಿದ್ ಕಪೂರ್ ನಟಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
Previous Articleದೇಶದಲ್ಲಿ 13,086 ಜನರಿಗೆ ಕೊರೋನಾ ಸೋಂಕು, 24 ಪ್ರಾಣಹಾನಿ
Next Article ಸರಳ ವಾಸ್ತು ಜ್ಯೋತಿಷಿ ಚಂದ್ರಶೇಖರ್ ಇನ್ನಿಲ್ಲ