ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ರಾಜ್ಯದಲ್ಲಿ ಸೃಷ್ಟಿಸಿರುವ ಅವಾಂತರ ಒಂದೆರಡಲ್ಲ. ರೋಹಿತ್ ಚಕ್ರವರ್ತಿ ನೇತೃತ್ವದ ಸಮಿತಿಯ ಎಡವಟ್ಟುಗಳು ಪ್ರತಿ ಹಂತದಲ್ಲೂ ವಿವಾದವನ್ನೇ ಸೃಷ್ಟಿಸುತ್ತಿವೆ. ಇದಾವುದರ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ ರೋಹಿತ್ ಚಕ್ರವರ್ತಿ ಬೆಂಬಲಕ್ಕೆ ನಿಂತಿದೆ. ಪ್ರಾಥಮಿಕ ಹಾಗು ಪ್ರೌಢಶಾಲೆ ಪಠ್ಯಪುಸ್ತಕ ಪರಿಷ್ಕರಿಸಿದ ಈ ಸಮಿತಿಗೆ ಮತ್ತೊಂದು ಗುರುತರ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆ ನೀಡಿದೆ.
ದ್ವಿತೀಯ ಪಿಯುಸಿಯ ಭಾರತದ ಇತಿಹಾಸ ಪಠ್ಯ ಪರಿಷ್ಕರಣೆ ಮಾಡಲು ಇಲಾಖೆ ನಿರ್ಧರಿಸಿದೆ. ಈ ಜವಾಬ್ದಾರಿಯನ್ನುರೋಹಿತ್ ಚಕ್ರತೀರ್ಥ ಸಮಿತಿಗೆ ವಹಿಸಲು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೂಚನೆ ಕೊಟ್ಟಿದ್ದಾರೆ.
ಇತಿಹಾಸ ಪಠ್ಯದ ಅಧ್ಯಾಯ 4.2ರಲ್ಲಿರುವ ಹೊಸ ಧರ್ಮಗಳ ಉದಯ ಪಠ್ಯಭಾಗವನ್ನು ರೋಹಿತ್ ಚಕ್ರತೀರ್ಥ ಸಮಿತಿಯಿಂದ ಪರಿಷ್ಕರಣೆಯಾಗಲಿದೆ.
ಇತಿಹಾಸ ಪಠ್ಯದ ಈ ಪಾಠದಲ್ಲಿ ನಿರ್ದಿಷ್ಟ ಸಮುದಾಯಗಳ ಭಾವನೆಗೆ ಧಕ್ಕೆಯಾಗುವ ಅಂಶಗಳಿವೆ ಸಮುದಾಯಗಳ ಭಾವನೆಗೆ ಧಕ್ಕೆಯಾಗುವ ವಿಷಯ ತೆಗೆಯಿರಿ ಎಂದು ಸಚಿವರು ಕಳೆದ ಫೆಬ್ರವರಿ 17ಕ್ಕೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಬರೆದಿದ್ದಾರೆ. ಅಲ್ಲದೆ ಈ ಪಾಠ ಪರಿಷ್ಕರಣೆಯ ಜವಾಬ್ದಾರಿಯನ್ನು ರೋಹಿತ್ ಚಕ್ರತೀರ್ಥ ಸಮಿತಿಗೆ ನೀಡುವಂತೆ ಸಲಹೆ ಮಾಡಿದ್ದಾರೆ.
ಸಚಿವರ ಈ ಪತ್ರವನ್ನಾಧರಿಸಿ ಇಲಾಖೆ ಇದೀಗ ರೋಹಿತ್ ಚಕ್ರತೀರ್ಥ ಸಮಿತಿಗೆ ಈ ಜವಾಬ್ದಾರಿ ನೀಡಿದೆ.