ಬೆಂಗಳೂರು,ಡಿ.27-ನಗರದಲ್ಲಿ ಬೀದಿ ನಾಯಿ ಹಾವಳಿ ಮಾತ್ರ ನಿಲ್ಲುತ್ತಿಲ್ಲ.ನಿರ್ಜನ ಪ್ರದೇಶದಲ್ಲಿ ಒಬ್ಬೊಬ್ಬರೇ ತಿರುಗಾಡುವಾಗ ದಿಢೀರ್ ಎದುರಿಗೆ ಬರುವ ಬೀದಿನಾಯಿಗಳು ದಾಳಿ ಮಾಡುತ್ತಿವೆ. ಮಕ್ಕಳ ಮೇಲೆಯೂ ಬೀದಿನಾಯಿಗಳು ದಾಳಿ ಪ್ರಕರಣಗಳು ಹೆಚ್ಚುತ್ತಿದ್ದು, ಲಕ್ಷ್ಮಿದೇವಿ ನಗರದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ದಾಳಿ ನಡೆದಿದೆ.
ತಂದೆ ಜೊತೆ ಕಳೆದ ಡಿ.25ರ ರಾತ್ರಿ
ತೆರಳುತ್ತಿದ್ದ ಮಗು ಮೇಲೆ ದಾಳಿ ನಡೆದಿದೆ. ಮಗಳ ರಕ್ಷಣೆಗೆ ಮುಂದಾದ ತಂದೆಗೂ ನಾಯಿ ಕಚ್ಚಿದೆ.
ದಾಳಿಯಲ್ಲಿ ಮಗುವಿನ ಕತ್ತು ಮತ್ತು ಮುಖದ ಭಾಗದಲ್ಲಿ ಗಾಯಗಳಾಗಿದ್ದು, ಹೊಲಿಗೆಗಳು ಬಿದ್ದಿವೆ. ನಾಯಿ ದಾಳಿಗೆ ಒಳಗಾದ ಬಾಲಕಿಗೆ ಮಗುವಿನ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದೆ. ಮಗುವಿನ ತಂದೆ ಫಕ್ರುದ್ದೀನ್ ಸಹ ಆಂಟಿ ರೇಬಿಸ್ ಇಂಜೆಕ್ಷನ್ ಪಡೆದುಕೊಂಡಿದ್ದಾರೆ.
ಮಗಳ ರಕ್ಷಣೆಗೆ ಮುಂದಾದ ತಂದೆಗೂ ಕಚ್ಚಿದ ನಾಯಿನಾಯಿ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಶಿಂಧೆ,ಲಕ್ಷ್ಮಿದೇವಿ ನಗರದಲ್ಲಿ ಫಕ್ರುದ್ದೀನ್ ಎಂಬವರು ಮಗಳ ಜೊತೆ ಹೋಗುತ್ತಿದ್ದರು. ಈ ವೇಳೆ ಮಗುವಿನ ಮೇಲೆ ನಾಯಿ ದಾಳಿಗೆ ಮುಂದಾದಾಗ ಫಕ್ರುದ್ದೀನ್ ಮಗಳ ರಕ್ಷಣೆಗೆ ಮುಂದಾಗಿದ್ದರು. ಈ ಸಮಯದಲ್ಲಿ ಅವರಿಗೂ ಸಹ ನಾಯಿ ಕಚ್ಚಿದೆ ಎಂದು ಹೇಳಿದ್ದಾರೆ.
ಮಗುವಿಗೆ ಕತ್ತು ಮತ್ತು ಮುಖದ ಭಾಗಕ್ಕೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬಿಬಿಎಂಪಿ ಇಬ್ಬರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಪಾವತಿಸಲಿದೆ. ಪರಿಹಾರವಾಗಿ 10 ಸಾವಿರ ರೂಪಾಯಿ ನೀಡಲಾಗುವುದು ಎಂದು ಮಂಜುನಾಥ್ ಶಿಂಧೆ ಹೇಳಿದ್ದಾರೆ.
Previous Articleಬೆಳಗಾವಿಯಲ್ಲಿ ಡಬಲ್ Murder
Next Article Mixie Blast : ಹಾಸನದಲ್ಲಿ ಕಟ್ಟೆಚ್ಚರ.