ಬೆಂಗಳೂರು,ಜು.30-ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ನಗರದಲ್ಲಿ ಅಡಗಿ ತಯಾರಿ ನಡೆಸುತ್ತಿದ್ದ ಅಲ್ ಖೈದಾ ಭಯೋತ್ಪಾದಕ ಘಟಕದ ನಾಯಕಿಯನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ ಖೈದಾ ಭಯೋತ್ಪಾದಕ ಘಟಕದ ನಾಯಕಿ ಶಮಾ ಪರ್ವೀನ್(30) ಬಂಧಿತ ಆರೋಪಿಯಾಗಿದ್ದು,ಆಕೆಯನ್ನು ತೀವ್ರ ವಿಚಾರಣೆ ನಡೆಸಲಾಗಿದೆ.
ಬಂಧಿತ ಶಮಾ ಪರ್ವೀನ್ ಎಕ್ಯೂಐಎಸ್-ಸಂಬಂಧಿತ ಭಯೋತ್ಪಾದಕ ಘಟಕವನ್ನು ನಡೆಸುತ್ತಿದ್ದ ಮಾಹಿತಿ ಲಭ್ಯವಾಗಿದೆ, ಕೆಲ ದಿನಗಳ ಹಿಂದೆ ಇತರ ನಾಲ್ವರನ್ನು ಗುಜರಾತ್, ನೋಯ್ಡಾ ಮತ್ತು ದೆಹಲಿಯಲ್ಲಿ ಬಂಧಿಸಲಾಗಿತ್ತು.
ಪರ್ವೀನ್ ಇಡೀ ಮಾಡ್ಯೂಲ್ ಅನ್ನು ನಡೆಸುತ್ತಿದ್ದರು ಮತ್ತು ಕರ್ನಾಟಕದಿಂದ ಕಾರ್ಯಾಚರಣೆಗಳನ್ನು ಸಂಘಟಿಸುವ ಮುಖ್ಯ ನಿರ್ವಾಹಕರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಕಳೆದ ಜುಲೈ 23 ರಂದು 20 ರಿಂದ 25 ವರ್ಷ ವಯಸ್ಸಿನ ನಾಲ್ವರು ಭಯೋತ್ಪಾದಕ ಶಂಕಿತರನ್ನು ಗುಜರಾತ್, ದೆಹಲಿ ಮತ್ತು ನೋಯ್ಡಾದಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೆಂಗಳೂರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಅಡಗಿದ್ದ ಪರ್ವೀನ್ ನ ಮಾಹಿತಿ ನೀಡಿದ್ದರು.
ಬಂಧಿತ ಮೊಹಮ್ಮದ್ ಫರ್ದೀನ್, ಸೆಫುಲ್ಲಾ ಕುರೇಶಿ, ಜೀಶನ್ ಅಲಿ ಮತ್ತು ಮೊಹಮ್ಮದ್ ಫೈಕ್ ಎಂದು ಗುರುತಿಸಲಾಗಿರುವ ಶಂಕಿತರು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು ಮತ್ತು ಭಾರತದಾದ್ಯಂತ ಉನ್ನತ ಮಟ್ಟದ ಗುರಿಗಳನ್ನು ನಿಯೋಜಿಸಲಾಗಿತ್ತು.
ಈ ಮಾಹಿತಿಯನ್ನು ಆಧರಿಸಿ ಅಲ್ ಖೈದಾ ಭಯೋತ್ಪಾದಕ ಘಟಕದ ನಾಯಕಿ ಶಮಾ ಪರ್ವೀನ್ ಳನ್ನು ಬಂಧಿಸಲಾಗಿದೆ ಎಂದು ಎಟಿಎಸ್ ಮೂಲಗಳು ತಿಳಿಸಿವೆ.
Previous Articleಆಲ್ ಖೈದಾ ಲೇಡಿಯ ಭಯಾನಕ ನಂಟು.
Next Article ಬೆಂಗಳೂರಿನ PUB ಮತ್ತು Bar ಗಳ ಲೈಸೆನ್ಸ್ ರದ್ದಾಗಲಿದೆಯಾ.?