ಬೆಂಗಳೂರು,ಸೆ. 28-
ಬೆಂಗಳೂರು ನಗರದ ಹಲವು ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ.
ಈ ಹಿನ್ನಲೆಯಲ್ಲಿ ನಗರದ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಹೆಣ್ಣೂರು ಜಂಕ್ಷನ್‌ನಿಂದ ಶಿವಾಜಿನಗರ ಹಾಗೂ ಎಂ.ಇ.ಐ ರಸ್ತೆ ,ಕಂಠೀರವ ಸ್ಟುಡಿಯೋ ಮುಖ್ಯರಸ್ತೆಯಿಂದ ತುಮಕೂರು ಮುಖ್ಯರಸ್ತೆಯವರಗೆ ವೈಟ್ ಟಾಪಿಂಗ್ ನಡೆಯುತ್ತಿದೆ. ಹೀಗಾಗಿ ಈ ರಸ್ತೆಯಲ್ಲಿ ಎಲ್ಲ ವಾಹನ ಮಾದರಿಯ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಹೆಣ್ಣೂರು 80 ಅಡಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಹೀಗಾಗಿ, ಹೆಣ್ಣೂರು ಜಂಕ್ಷನ್‌ನಿಂದ ಶಿವಾಜಿನಗರ ಕಡೆಗೆ ಹೋಗುವ ಎಲ್ಲ ಮಾದರಿಯ ವಾಹನ ಸಂಚಾರವನ್ನು ಸೆಪ್ಟೆಂಬರ್ 30 ರಿಂದ ನವೆಂಬರ್ 11ರವರೆಗೆ ನಿರ್ಬಂಧಿಸಲಾಗಿದೆ.ಈ ಅವಧಿಯಲ್ಲಿ
ಹೆಣ್ಣೂರು ಜಂಕ್ಷನ್‌ನಿಂದ ಶಿವಾಜಿನಗರ ಕಡೆಗೆ ಸಂಚರಿಸುವ ವಾಹನ ಸವಾರರು ನ್ಯೂ ಏರ್ ಪೋರ್ಟ್ ರಸ್ತೆಯಲ್ಲಿ ಸಂಚರಿಸಿ ಲಿಂಗರಾಜಪುರಂನ ಚಂದ್ರಿಕಾ ಜಂಕ್ಷನ್ ಮೂಲಕ ಶಿವಾಜಿನಗರ ಕಡೆಗೆ ಸಂಚರಿಸಬಹುದಾಗಿದೆ.
ಅದೇ ರೀತಿಯಲ್ಲಿ ಕಂಠೀರವ ಸ್ಟುಡಿಯೋ ಮುಖ್ಯರಸ್ತೆಯಿಂದ ತುಮಕೂರು ಮುಖ್ಯರಸ್ತೆವರೆಗೂ ವೈಟ್ ಟಾಪಿಂಗ್ ಕಾಮಗಾರಿಯನ್ನು ನಡೆಯಲಿದೆ.
ಎಂಇಐ ರಸ್ತೆಯು ದ್ವಿಮುಖ ಸಂಚಾರದ ರಸ್ತೆಯಾಗಿದೆ ಹೀಗಾಗಿ ಇಲ್ಲಿ ತುಮಕೂರು ರಸ್ತೆಯಿಂದ ಕಂಠೀರವ ಸ್ಟುಡಿಯೋ ಕಡೆಗೆ ಚಲಿಸುವ ವಾಹನಗಳು ಎಂದಿನಂತೆ ರಸ್ತೆಯ ಎಡಭಾಗದಲ್ಲಿ ಸಂಚರಿಸಬಹುದು.
ಆದರೆ, ಕಾಮಗಾರಿ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಎಂಇಐ ರಸ್ತೆಯಲ್ಲಿ ಕಂಠೀರವ ಸ್ಟುಡಿಯೋ ಮುಖ್ಯರಸ್ತೆಯಿಂದ ತುಮಕೂರು ರಸ್ತೆ ಕಡೆಯ ಬಲ ಬದಿಯವ ಮಾರ್ಗದಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ಅಕ್ಟೋಬರ್ 1 ರಿಂದ ಕಾಮಗಾರಿ ಮುಗಿಯುವವರೆಗೂ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಹೀಗಾಗಿ ಕಂಠೀರವ ಸ್ಟುಡಿಯೋ ಮುಖ್ಯ ರಸ್ತೆಯಿಂದ ಎಂಇಐ ರಸ್ತೆಯ ಮೂಲಕ ತುಮಕೂರು ರಸ್ತೆ ಕಡೆಗೆ ಹೊಗುವ ವಾಹನಗಳು ಕಂಠೀರವ ಸ್ಟುಡಿಯೋ ಮುಖ್ಯರಸ್ತೆಯಲ್ಲಿ ಸಾಗಿ ಎಫ್.ಟಿ.ಐ ಜಂಕ್ಷನ್ನಲ್ಲಿ ಬಲ ತಿರುವು ಪಡೆದು ಔಟರ್ ರಿಂಗ್ ರಸ್ತೆಯ ಮೂಲಕ ಸಿ.ಎಂ.ಟಿ.ಐ ಜಂಕ್ಷನ್ ನಲ್ಲಿ ತುಮಕೂರು ರಸ್ತೆಯನ್ನು ಪ್ರವೇಶಿಸಬಹುದಾಗಿದೆ.
ಕಂಠೀರವ ಸ್ಟುಡಿಯೋ ಮುಖ್ಯ ರಸ್ತೆಯಿಂದ ಎಂ.ಇ.ಐ ರಸ್ತೆಯ ಮೂಲಕ ಬೆಂಗಳೂರು ನಗರ ಕಡೆಗೆ ಬರುವ ವಾಹನಗಳು ಕಂಠೀರವ ಸ್ಟುಡಿಯೋ ಮುಖ್ಯರಸ್ತೆ ಮತ್ತು ಶಂಕರನಗರ ಮುಖ್ಯ ರಸ್ತೆಯಲ್ಲಿ ಸಾಗಿ ಮಹಾಲಕ್ಷ್ಮೀ ಲೇಔಟ್ ವಸುಧಾ ಡೆಂಟಲ್ ಕ್ಲೀನಿಕ್ ಬಳಿ ಎಡ ತಿರುವು ಪಡೆದು ಮಹಾಲಕ್ಷ್ಮೀ ಲೇಔಟ್ ಮುಖ್ಯ ರಸ್ತೆ ಮೂಲಕ ವೆಸ್ಟ್ ಆಫ್ ಕಾರ್ಡ್ ರಸ್ತೆ ಪ್ರವೇಶಿಸಬಹುದಾಗಿದೆ.

1 ಟಿಪ್ಪಣಿ
Тяговые аккумуляторные https://ab-resurs.ru батареи для складской техники: погрузчики, ричтраки, электротележки, штабелеры. Новые АКБ с гарантией, помощь в подборе, совместимость с популярными моделями, доставка и сервисное сопровождение.