ಕೋಲಾರ: ಹುಬ್ಬಳ್ಳಿಯಲ್ಲಿ ನಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದ ಡಿ ಜೆ ಹಳ್ಳಿˌ ಕೆ ಜೆ ಹಳ್ಳಿಯಲ್ಲಿ ನಡೆದ ಘಟನೆಯಂತೆಯೇ ಪೂರ್ವ ನಿಯೋಜಿತವೆಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಮುನಿರತ್ನ ಯಾವುದೇ ಹಲ್ಲೆ ಪ್ರಕರಣ ಮಾಡಬೇಕು ಅಂದ್ರೆ ಅದು ಪೂರ್ವ ನಿಯೋಜಿತವಿಲ್ಲದೇ ಸಾಧ್ಯವೇ ಇಲ್ಲ. ಏಕಾಏಕಿ ಗಲಭೆ ನಡೆಯಬೇಕು ಅಂದ್ರೆ ಅದು ಆಕಸ್ಮಿಕವಾಗಿರಬೇಕು ಆದರೆ ಇದು ಆ ರೀತಿ ಇಲ್ಲ ಮೊದಲೇ ಫ್ರೀ ಪ್ಲಾನ್ ಘಟನೆಯೆಂದೂ ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸುತ್ತದೆ ಎಂದರು.
ಸಮಾರಂಭದಲ್ಲಿ ಹಾಜರಿದ್ದ ಮಾಜಿ ಶಾಸಕ ವರ್ತೂರು ಪ್ರಕಾಶ್ ಶ್ರೀಘ್ರದಲ್ಲೆ ರಾಷ್ರ್ಟೀಯ ನಾಯಕರೊಂದಿಗೆ ಚರ್ಚಿಸಿ ಬಿ ಜೆ ಪಿ ಪಕ್ಷಕ್ಕೆ ಅಧಿಕೈತವಾಗಿ ಸೇರುವುದು ಖಚಿತವೆಂದರು.