ಬೆಂಗಳೂರು,ಜ.1- ಹೊಸ ವರ್ಷದ ಶುಭಾಶಯ ಕೋರಲು ಕಚೇರಿಗೆ ಹೂಗುಚ್ಛ, ಸಿಹಿ ತಿನಿಸುಗಳನ್ನು ತರದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿ ಮಾದರಿಯಾಗಿದ್ದಾರೆ.
ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಳೆದ ವರ್ಷವೂ ಸಹ ಹೊಸ ವರ್ಷಾಚರಣೆಗೆ ಶುಭ ಕೋರಲು ಹೂಗುಚ್ಛ, ಸಿಹಿ ತಿನಿಸುಗಳನ್ನು ತರದಂತೆ ಸೂಚಿಸಿದ್ದ ಅವರು, ಅದಕ್ಕಾಗಿ ವ್ಯಯಿಸುವ ಹಣದಲ್ಲಿ ನಿಮ್ಮ ವ್ಯಾಪ್ತಿಯ ಅನಾಥಾಶ್ರಮಳಿಗೆ ದಿನಸಿ, ಸಿಹಿ ತಿನಿಸು ಅಥವಾ ಊಟದ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಅಲ್ಲದೆ ತಾವೂ ಸಹ ಅದನ್ನು ಅನುಸರಿಸುವ ಮೂಲಕ ಮಾದರಿಯಾಗಿದ್ದರು.
ಈ ಬಾರಿಯೂ ಸಹ ಅಧಿಕಾರಿಗಳು, ಸಿಬ್ಬಂದಿಗೆ ತಮ್ಮ ವ್ಯಾಪ್ತಿಯಲ್ಲಿರುವ ಅನಾಥಾಶ್ರಮ ವೃದ್ಧಾಶ್ರಮ, ವಿಕಲಚೇತನರ ಶಾಲೆ ಮತ್ತಿತರ ಕಡೆಗಳಿಗೆ ಅವರ ಕೈಲಾದ ಸಹಾಯ ಮಾಡುವಂತೆ ಸೂಚಿಸಿರುವ ಆಯುಕ್ತರು, ಖುದ್ದು ತಾವೇ ಅನಾಥಶ್ರಮದ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ವರ್ಷಾಚರಣೆಯ ಸಂಭ್ರಮ ಹಂಚಿಕೊಂಡಿದ್ದಾರೆ
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಮಾದರಿ ನಡೆ
Previous Articleಪತ್ನಿ ಕಿರುಕುಳಕ್ಕೆ ಬಲಿಯಾದ ಪತಿ
Next Article ಪ್ರಿಯಾಂಕ ಖರ್ಗೆ ಬೆಂಬಲಕ್ಕೆ ನಿಂತ ಸಿದ್ದರಾಮಯ್ಯ