ಸಾಮಾಜಿಕ ಸಂತ ಬದಲಾವಣೆಯ ಹರಿಕಾರ ಕಾಯಕಯೋಗಿ ಬಸವಣ್ಣ ಅವರ ತತ್ವ ನಿಷ್ಠೆ ಗಳ ಪ್ರಬಲ ಆರಾಧಕರಂತೆ ಗೋಚರಿಸುವ ಬ್ರಹ್ಮಶ್ರೀ ನಾರಾಯಣ ಗುರುಗಳು ದಕ್ಷಿಣ ಭಾರತದಲ್ಲಿ ದೇವರು ಧರ್ಮದ ಬೆಳಕಿನಿಂದ ವಂಚಿತರಾದ ಜನಕ್ಕೆ ದೇವರನ್ನು ಕೊಟ್ಟ ಮಹಾನ್ ಸಂತ.
1854ರಲ್ಲಿ ಕೇರಳದ ತಿರುವನಂತಪುರ ಸಮೀಪದ ದ ಚೆಂಬಿಳಂತಿ ಎಂಬ ಗ್ರಾಮದಲ್ಲಿನ ತೀರಾ ಹಿಂದುಳಿದ ಈಳವ ಸಮುದಾಯದ ಮಾದನ್ ಆಶಾನ್ ಮತ್ತು ಕುಟ್ಟಿ ಅಮ್ಮಾಳ್ ದಂಪತಿಗೆ ಜನಿಸಿದ ಈ ಮಹಾನ್ ಸಾಧಕನ ಹೆಸರು ನಾರಾಯಣ. ತಂದೆ ತಾಯಿಯರ ಪಾಲಿಗೆ ಪ್ರೀತಿಯ ನಾಣು.ಸತತ ಅಧ್ಯಯನದ ಮೂಲಕ ಪ್ರಕಾಂಡ ಪಂಡಿತರಾದರು
ಅಧ್ಯಾತ್ಮ, ಆಯುರ್ವೇದ ಜ್ಯೋತಿಷ್ಯ ಶಾಸ್ತ್ರ, ವೇದ ಉಪನಿಷತ್ತು,ಕಾವ್ಯ, ಮೀಮಾಂಸೆ, ನಾಟಕ, ವ್ಯಾಕರಣ, ಅಲಂಕಾರ, ತರ್ಕಶಾಸ್ತ್ರ, ವಿದ್ಯೆಗಳನ್ನು ಸಿದ್ಧಿಸಿಕೊಳ್ಳುವ ಮೂಲಕ ‘ನಾಣು ಚಟ್ಟಾಂಬಿ’ ಆಗಿ ಆಧ್ಯಾತ್ಮ ಗುರುವಾದರು. ಸಮಾಜದೊಂದಿಗೆ ಬದುಕಿನ ಪಾಠ ಕಲಿತು ಬ್ರಹ್ಮಜ್ಞಾನವನ್ನು ಪಡೆದು, ನಾರಾಯಣ ಗುರುವಾದರು.
ಇವರುಯಾವುದೋ ಒಂದು ಧರ್ಮದ, ಒಂದು ಜಾತಿಯ ಗುರುವಾಗದೆ ಅಂದಿನ
ಬ್ರಿಟೀಷ್ ಅರಸೊತ್ತಿಗೆಯ ಆಡಂಬರದ ಕಾಲದಲ್ಲಿ. ಮೂಢನಂಬಿಕೆ, ಜಾತೀಯತೆ, ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಬೆತ್ತಲೆಸೇವೆ, ಬಾಲ್ಯವಿವಾಹ, ಗುಲಾಮಗಿರಿ, ಜೀತ ಪದ್ಧತಿ, ಜಮೀನ್ದಾರಿ ಪದ್ಧತಿ ಮೊದಲಾದ ಅನಿಷ್ಟ ಅಮಾನುಷ ಆಚರಣೆಗಳ ವಿರುದ್ಧ ಸಿಡಿದೆದ್ದರು.
Previous Articleಕುಮಾರಸ್ವಾಮಿಗೆ ತೋಡಲಾಗಿದೆ ಖೆಡ್ಡಾ.
Next Article ಜೈಲುಗಳಲ್ಲಿ ಏನೇನು ಸಿಗುತ್ತೆ ಗೊತ್ತಾ.