ನವದೆಹಲಿ:
ಭಾರತೀಯ ನೌಕಾಪಡೆ ಗೆ ಭೀಮ ಬಲ ಬಂದಿದೆ. ಜಗತ್ತಿನ ಪ್ರತಿಷ್ಠಿತ ಸಮರ ನೌಕೆಗಳಿಗೆ ಸರಿಸಾಟಿಯಾದ ಸಮರ ನೌಕೆಗಳು ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿವೆ.
ಮುಂಬೈನ ನೌಕಾ ಡಾಕ್‌ಯಾರ್ಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ
ಸುಮಾರು ನೌಕೆಗಳಾದ ಐಎನ್‌ಎಸ್ ಸೂರತ್, ಐಎನ್‌ಎಸ್ ನೀಲಗಿರಿ ಮತ್ತು ಐಎನ್‌ಎಸ್ ವಾಘಶೀರ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಐಎನ್‌ಎಸ್ ಸೂರತ್, ಐಎನ್‌ಎಸ್ ನೀಲಗಿರಿ ಮತ್ತು ಐಎನ್‌ಎಸ್ ವಾಘಶೀರ್‌ಗಳು ಭಾರತೀಯ ನೌಕಾಪಡೆಯ ಸಮರ ಸಾಮರ್ಥ್ಯವನ್ನು ಪ್ರಬಲಗೊಳಿಸಿವೆ.
ಅತ್ಯಾಧುನಿಕ ಯುದ್ಧನೌಕೆ ಗಳಿಂದಾಗಿ ರಕ್ಷಣಾ ಉತ್ಪಾದನೆ ಮತ್ತು ಕಡಲ ಭದ್ರತೆಯಲ್ಲಿ ಜಾಗತಿಕ ನಾಯಕನಾಗುವ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಲಾಗಿದೆ.
ಮೂರು ಯುದ್ಧನೌಕೆಗಳು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿವೆ ಮತ್ತು ಭಾರತೀಯ ನೌಕಾಪಡೆಯ ವಿಭಿನ್ನ ಅವಶ್ಯಕತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ.
ಈ ಮೂರರಲ್ಲಿ ಐಎನ್‌ಎಸ್ ಸೂರತ್ ಪಿ15ಬಿ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ಯೋಜನೆಯ ನಾಲ್ಕನೇ ಮತ್ತು ಅಂತಿಮ ಹಡಗಾಗಿದೆ. ಇದು ಅತ್ಯಾಧುನಿಕ ಶಸ್ತ್ರಾಸ್ತ್ರ-ಸೆನ್ಸರ್ ಪ್ಯಾಕೇಜ್‌ಗಳನ್ನು ಹೊಂದಿದೆ.
ಐಎನ್ಎಸ್ ಸೂರತ್ ಪಿ15ಬಿ ಗೈಡೆಡ್ ಮಿಸೈಲ್ ಡೆಸ್ಟ್ರಾಯರ್ ಪ್ರಾಜೆಕ್ಟ್‌ನ ನಾಲ್ಕನೇ ಮತ್ತು ಅಂತಿಮ ಹಡಗು. ಇದು ವಿಶ್ವದ ಅತಿದೊಡ್ಡ ಮತ್ತು ಅತ್ಯಾಧುನಿಕ ಡೆಸ್ಟ್ರಾಯರ್‌ಗಳಲ್ಲಿ ಸ್ಥಾನ ಪಡೆದಿದೆ. ಇದು ಶೇ.75ರಷ್ಟು ಸ್ಥಳೀಯ ಸಾಮರ್ಥ್ಯವನ್ನು ಹೊಂದಿದೆ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರ-ಸಂವೇದಕ ಪ್ಯಾಕೇಜ್‌ಗಳು, ಸುಧಾರಿತ ನೆಟ್‌ವರ್ಕ್-ಕೇಂದ್ರಿತ ಸಾಮರ್ಥ್ಯಗಳನ್ನು ಹೊಂದಿದೆ.
ಐಎನ್ಎಸ್ ನೀಲಗಿರಿ ಯುದ್ಧನೌಕೆ ಪಿ17ಎ ಸ್ಟೆಲ್ತ್ ಫ್ರಿಗೇಟ್ ಪ್ರಾಜೆಕ್ಟ್‌ನ ಮೊದಲ ಹಡಗು. ಇದನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಬ್ಯೂರೋ ವಿನ್ಯಾಸಗೊಳಿಸಿದೆ. ಇದು ಮುಂದಿನ ಪೀಳಿಗೆಯ ಸ್ಥಳೀಯ ಫ್ರಿಗೇಟ್‌ಗಳನ್ನು ಪ್ರತಿಬಿಂಬಿಸುತ್ತದೆ.
ಐಎನ್ಎಸ್ ವಾಘಶೀರ್ ಪಿ75 ಸ್ಕಾರ್ಪೀನ್ ಪ್ರಾಜೆಕ್ಟ್‌ನ ಆರನೇ ಮತ್ತು ಅಂತಿಮ ಜಲಾಂತರ್ಗಾಮಿ. ಇದು ಜಲಾಂತರ್ಗಾಮಿ ನಿರ್ಮಾಣದಲ್ಲಿ ಭಾರತದ ಬೆಳೆಯುತ್ತಿರುವ ಪರಿಣತಿಯನ್ನು ಪ್ರತಿನಿಧಿಸುತ್ತದೆ. ಇದನ್ನು ಫ್ರಾನ್ಸ್‌ನ ನೌಕಾ ಗುಂಪಿನ ಸಹಯೋಗದೊಂದಿಗೆ ನಿರ್ಮಿಸಲಾಗಿದೆ.
Previous Articleಕುಂಭಮೇಳದಲ್ಲಿ ಕಿನ್ನರ ಕಲರವ
Next Article ಮುಡಾ ಹಗರಣ -ಕೋರ್ಟ್ ನಲ್ಲೇನಾಯಿತು ಗೊತ್ತಾ