ಚೆನ್ನೈ(ತಮಿಳುನಾಡು): ಅಂದಿನ ತಿರುವಾಂಕೂರು ಸಾಮ್ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ದೇವಸಹಾಯಂ ಅವರನ್ನು ಸಂತ ಎಂದು ಸೋಮವಾರ(ಮೇ 16) ವ್ಯಾಟಿಕನ್‌ನಲ್ಲಿ ಪೋಪ್ ಫ್ರಾನ್ಸಿಸ್ ಘೋಷಿಸಿದ್ದಾರೆ.
ಲಜಾರಸ್ ಎಂದೂ ಕರೆಸಿಕೊಳ್ಳುವ ದೇವಸಹಾಯಂ, ವ್ಯಾಟಿಕನ್‌ನಲ್ಲಿ ಸಂತತ್ವ ಪಡೆದ ಮೊದಲ ಭಾರತೀಯರೆನಿಸಿದ್ದಾರೆ.
ಜಾತಿ ತಾರತಮ್ಯದ ಹೋರಾಟದಲ್ಲಿ ಅತ್ಯಂತ ಕ್ರೂರವಾಗಿ ಕೊಲ್ಲಲ್ಪಟ್ಟ ದೇವಸಹಾಯಂ ಅವರ ಹುತಾತ್ಮತೆಯನ್ನು ಗುರುತಿಸಿ ಈ ಸಂತ ಪದವಿ ನೀಡಲಾಗಿದೆ. ಏಳನೇ ತಿಂಗಳಲ್ಲಿ ಗರ್ಭಿಣಿಯೊಬ್ಬರು 2013ರಲ್ಲಿ ಪ್ರಾರ್ಥಿಸಿದ ಬಳಿಕ ನಡೆದ ಪವಾಡಕ್ಕೆ ಸಾಕ್ಷಿಯಾದ ದೇವಸಹಾಯಂ ಅವರನ್ನು ಸಂತ ಪದವಿಗೆ ಆಯ್ಕೆ ಮಾಡಲಾಗಿದೆ.
ಇಂದಿನ ಕನ್ಯಾಕುಮಾರಿಯಲ್ಲಿ ಹಿಂದೂ ಮೇಲ್ಜಾತಿ ಕುಟುಂಬದಲ್ಲಿ ನೀಲಕಂದನ್ ಪಿಳ್ಳೈ ಜನಿಸಿದ್ದರು. ತಿರುವಾಂಕೂರ್ ಅರಮನೆಯಲ್ಲಿ ಕೆಲಸ ಮಾಡಿದ್ದ ಅವರು, 1745 ರಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ಬಳಿಕ ದೇವಸಹಾಯಂ ಮತ್ತು ಲಜಾರಸ್ ಎಂದು ಹೆಸರಾಗಿದ್ದರು.
Previous Articleಭಾರತದ ರಫ್ತು ನಿಷೇಧ ಎಫೆಕ್ಟ್: ಯುರೋಪ್‌ನಲ್ಲಿ ಗೋಧಿ ಬೆಲೆ ಗಗನಕ್ಕೆ
Next Article ಗ್ಯಾನ್‌ವಾಪಿ ಮಸೀದಿಯಲ್ಲಿ ನಂದಿ ವಿಗ್ರಹ, ಶಿವಲಿಂಗ ಪತ್ತೆ