ಬೈಕ್ ತಗುಲಿತು ಎಂಬ ವಿಚಾರಕ್ಕೆ ಸಂಬಂಧಿಸದಂತೆ ಬೆಂಗಳೂರಿನಲ್ಲಿ ನಡೆದ ಯುವಕ ಚಂದ್ರು ಹತ್ಯೆ ಪ್ರಕರಣ ರಾಜ್ಯದಲ್ಲಿ ಬಾರಿ ವಿವಾದವನ್ನೇ ಸೃಷ್ಟಿಸಿದೆ. ಕೊಲೆಗೆ ಕಾರಣವಾದ ಅಂಶದ ಕುರಿತು ಬಿಜೆಪಿ ನಾಯಕರು ನೀಡಿರುವ ಹೇಳಿಕೆಗೆ ಆಪ್ ಮುಖಂಡ ಭಾಸ್ಕರ್ ರಾವ್ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ
ಚಂದ್ರು ಕೊಲೆ ವಿಚಾರದಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಸುಳ್ಳು ಹೇಳಿದ್ದಾರೆ ಎಂದು ಬಿಜೆಪಿ ನಾಯಕರಾದ ಸಿ.ಟಿ.ರವಿ ಹಾಗು ರವಿಕುಮಾರ್ ಮಾಡಿದ್ದ ಆರೋಪ ಹಿನ್ನೆಲೆಯಲ್ಲಿ ಭಾಸ್ಕರ್ ರಾವ್ ಈ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದ್ದಾರೆ.
ಪೊಲೀಸ್ ಆಯುಕ್ತರು, ಬೆಂಗಳೂರಿನ 15 ಮಿಲಿಯನ್ ನಾಗರಿಕರನ್ನು ರಕ್ಷಿಸುತ್ತಿದ್ದಾರೆ. ಆಡಳಿತಾರೂಢ ರಾಜ್ಯ ಸರ್ಕಾರ ಮತ್ತು ಅಧಿಕಾರದಲ್ಲಿರುವ ಪಕ್ಷದ ರಾಜಕಾರಣಿಗಳು ಮಾಧ್ಯಮಗಳಲ್ಲಿ ಆಯುಕ್ತರನ್ನು “ಸುಳ್ಳುಗಾರ” ಎಂದು ಕರೆಯುವುದು ಮುಖ್ಯಮಂತ್ರಿ ಮತ್ತು ಸರಕಾರವನ್ನು ಅವಮಾನಿಸಿದಂತೆ ಎಂದಿದ್ದಾರೆ.
ತಮ್ಮ ಸಹದ್ಯೋಗಿಯಾದ್ದ ಕಮಲ್ ಪಂತ್ ಅವರನ್ನು ಪ್ರಶಂಸಿಸಿರುವ ಭಾಸ್ಕರ್ ರಾವ್, “ಆಶಾದಾಯಕವಾಗಿರುವ ಉತ್ತಮ ಆಡಳಿತವು ಯಾವಾಗಲೂ ಮೇಲುಗೈ ಸಾಧಿಸುತ್ತದೆ” ಎಂದು ಹೇಳಿದ್ದಾರೆ.
Previous Article‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಹೊಸ ಹಾಡು ರಿಲೀಸ್
Next Article ರೋಪ್ ವೇ ದುರಂತ