ಬೆಂಗಳೂರು.ಫೆ,18:
ರಾಜ್ಯ ರಾಜಕಾರಣದಲ್ಲಿ ನೇರ ನಡೆ-ನುಡಿಯ ರಾಜಕಾರಣಕ್ಕೆ ಹೆಸರಾದವರು ಸಹಕಾರ ಸಚಿವ ಕೆ ಎನ್ ರಾಜಣ್ಣ.
ಯಾವುದೇ ಪರಿಸ್ಥಿತಿ ಆದರೂ ಸರಿ ತಮಗೆ ಸರಿ ಅನಿಸಿದ್ದನ್ನು ನೇರವಾಗಿ ಅವರ ಮುಖಕ್ಕೆ ಹೇಳುವ ವ್ಯಕ್ತಿತ್ವ ರೂಡಿಸಿಕೊಂಡಿರುವ ಕೆ.ಎನ್. ರಾಜಣ್ಣ ಅವರದ್ದು ಸಹಕಾರ ಚಳುವಳಿಯಲ್ಲಿ ದೊಡ್ಡ ಹೆಸರು ಹಾಗೆಯೇ ತುಮಕೂರು ಜಿಲ್ಲೆಯ ರಾಜಕಾರಣದಲ್ಲಿ ಅತ್ಯಂತ ಪ್ರಭಾವಿಯಾಗಿರುವ ಈ ನಾಯಕ ವಾಲ್ಮೀಕಿ ಸಮುದಾಯದ ವರ್ಚಸ್ವಿ ಮುಖಂಡ.
ರಾಜ್ಯ ಕಾಂಗ್ರೆಸ್ಸಿನಲ್ಲಿ ಇತ್ತೀಚೆಗೆ ಕೇಳಿ ಬರುತ್ತಿರುವ ನಾಯಕತ್ವ ಬದಲಾವಣೆ ಮತ್ತು ಶೋಷಿತರ ಸಮಾವೇಶದ ವಿವಾದದಲ್ಲಿ ಅತ್ಯಂತ ಹೆಚ್ಚು ಕೇಳಿ ಬರುತ್ತಿರುವ ಹೆಸರು ಕೆ.ಎನ್. ರಾಜಣ್ಣ ಅವರದ್ದಾಗಿದೆ.
ಯಾರೊಂದಿಗೂ ಹೆಚ್ಚು ಕಾಲ ದ್ವೇಷ ಇಟ್ಟುಕೊಳ್ಳದ ಈ ನಾಯಕ ತನಗನಿಸಿದ್ದನ್ನು ನೇರವಾಗಿ ಹೇಳುವ ಸ್ವಭಾವ ಹೊಂದಿರುವುದನ್ನು ಕೆಲವರು ತಮಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿರುವ ರಾಜ್ಯ ಕಾಂಗ್ರೆಸ್ಸಿನ ಕೆಲವು ಪ್ರಮುಖ ನಾಯಕರು ಮತ್ತು ದೆಹಲಿ ಹೈಕಮಾಂಡ್ ನಲ್ಲಿರುವ ಕೆಲವು ನಾಯಕರು ಶಿವಕುಮಾರ್ ವಿರುದ್ಧದ ತಮ್ಮ ಸಮರದಲ್ಲಿ ಕೆಎನ್ ರಾಜಣ್ಣ ಅವರನ್ನು ಅಸ್ತ್ರ ವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ.
ಡಿಕೆ ಶಿವಕುಮಾರ್ ಅವರೊಂದಿಗೆ ದೊಡ್ಡ ಮಟ್ಟದಲ್ಲಿ ಭಿನ್ನಮತ ಹೊಂದಿರುವ ಅನೇಕ ನಾಯಕರು ಆ ಬಗ್ಗೆ ಯಾವುದೇ ವಿಚಾರವನ್ನು ಬಹಿರಂಗವಾಗಿ ಮಾತನಾಡುತ್ತಿಲ್ಲ ಆದರೆ ತಾವು ಮಾತನಾಡಬೇಕಿರುವ ಎಲ್ಲಾ ವಿಷಯವನ್ನು ರಾಜಣ್ಣ ಅವರ ಮೂಲಕ ಹೇಳಿಸುತ್ತಿದ್ದಾರೆ ಎಂದು ಅವರ ಆಪ್ತ ವಲಯ ಆರೋಪಿಸಿದೆ.
ವಾಸ್ತವವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಸಹಕಾರ ಮಂತ್ರಿ ಕೆ ಎನ್ ರಾಜಣ್ಣ ಅತ್ಯಂತ ಆಪ್ತರಾಗಿದ್ದಾರೆ ಬಹುಕಾಲದಿಂದ ಈ ಇಬ್ಬರು ಆತ್ಮೀಯ ಗೆಳೆಯರು ಆದರೆ ಶಿವಕುಮಾರ್ ವಿರೋಧಿ ಬಣ ರಾಜಣ್ಣ ಅವರಿಗೆ ಯಾವುದೋ ದೂರದ ಆಶೆ ತೋರಿಸಿ ಅವರ ಮೂಲಕ ಸಮರ ಸಾರಿದೆ ಎನ್ನುತ್ತಿವೆ ಅವರ ಆಪ್ತವಲಯ.
Previous Articleರೆವೆನ್ಯೂ ಬಡಾವಣೆ ನಿವೇಶನ ದಾರರಿಗೆ ಸಿಹಿ ಸುದ್ದಿ
Next Article ಕಳ್ಳಬೇಟೆಗಾರರ ಬೇಟೆಗೆ Dog squad