ಬೆಂಗಳೂರು,ಸೆ.25- ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಕ್ಕಳ ಅಶ್ಲೀಲ ವಿಡಿಯೋ ಡೌನ್‌ಲೋಡ್ ಪ್ರಕರಣ ಸಂಬಂಧ ಸಿಬಿಐ ಹಾಗೂ ಕೇಂದ್ರದ ಇತರೆ ತನಿಖಾ ಸಂಸ್ಥೆಗಳು ನಗರವಲ್ಲದೇ
ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ದಾಳಿ ನಡೆಸಿ ಮಾಹಿತಿ ಸಂಗ್ರಹಿಸಿವೆ.
ನಗರದ 4 ಕಡೆ, ರಾಮನಗರ, ಕೋಲಾರ, ಕೊಡಗು ಜಿಲ್ಲೆಗಳಲ್ಲಿ ಸಿಬಿಐ ಹಾಗೂ ಕೇಂದ್ರದ ಇತರೆ ತನಿಖಾ ಸಂಸ್ಥೆಗಳ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಇತ್ತೀಚೆಗೆ ಮಕ್ಕಳಿಗೆ ಸಂಬಂಧಿಸಿ ಲೈಂಗಿಕ ಪ್ರಚೋದನಿಯ ವಿಡಿಯೋಗಳನ್ನು ಕೆಲವರು ಡೌನ್‌ಲೋಡ್ ಮಾಡಿಕೊಂಡು ವೀಕ್ಷಣೆ ಮತ್ತು ಅವುಗಳನ್ನು ವೆಬ್ ಸೈಟ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವ ಕುರಿತು ಕೇಂದ್ರದ ತನಿಖಾ ಸಂಸ್ಥೆಗಳು ನಿಗಾ ವಹಿಸಿದ್ದವು. ಈ ಕುರಿತು ಆಗಾಗ್ಗೆ ರಾಜ್ಯದ ಸಿಐಡಿ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದು, ಈ ಕುರಿತು ಡೌನ್‌ಲೋಡ್ ಅಥವಾ ಅಪ್‌ಲೋಡ್ ಮಾಡಿದ ವ್ಯಕ್ತಿ ವಾಸವಾಗಿರುವ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ (ಟಿಪ್‌ಲೈನ್) ಪ್ರಕರಣಗಳು ದಾಖಲಾಗುತ್ತಿವೆ. ಈ ಬೆನ್ನಲ್ಲೇ ದಾಳಿ ನಡೆಸಲಾಗಿದೆ.
ಕಳೆದ 8 ತಿಂಗಳಲ್ಲಿ ನಗರದಲ್ಲಿ ಸುಮಾರು 60ಕ್ಕೂ ಹೆಚ್ಚು ಟಿಪ್‌ಲೈನ್ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಮಕ್ಕಳ ಅಶ್ಲೀಲ ವಿಡಿಯೋ, ಫೋಟೋಗಳ ವೀಕ್ಷಣೆ, ಅಪ್‌ಲೋಡ್, ಡೌನ್‌ಲೋಡ್ ಮತ್ತು ಹಂಚುವುದು ಹಾಗೂ ಗೂಗಲ್ search engineನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ಬಗ್ಗೆ ಸರ್ಚ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.
ಈ ಹಿನ್ನೆಲೆಯಲ್ಲಿ ಅಂತಹ ಜಾಲತಾಣಗಳಿಗೆ ಭೇಟಿ ಕೊಡುವವರ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತನಿಖಾ ಸಂಸ್ಥೆಗಳು ಹದ್ದಿನ ಕಣ್ಣಿಟ್ಟಿವೆ. ಅಲ್ಲದೆ, ಅವರ ವಿರುದ್ಧ ಐಟಿ ಕಾಯ್ದೆ 67(ಬಿ) ಅಡಿ ಪ್ರಕರಣ ದಾಖಲಾಗುತ್ತದೆ.
Previous ArticlePFI ಬಗ್ಗೆ ಹೊರಬಂದ ಇನ್ನಷ್ಟು ಮಾಹಿತಿ
Next Article ಮದ್ಯಪಾನ ಮಾಡಿಸಿ ಗ್ಯಾಂಗ್ ರೇಪ್