ಬೆಂಗಳೂರು,ಆ.28-
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಕ್ಕಸ ನಾಯಿಗಳು ಮತ್ತೊಂದು ಬಲಿ ಪಡೆದಿವೆ. ಬೆಂಗಳೂರಿನಲ್ಲಿ ನೆಲೆಸಿರುವ ಅಳಿಯ-ಮಗಳನ್ನು ಭೇಟಿಯಾಗಲು ಬಿಹಾರದಿಂದ ಬೆಂಗಳೂರಿಗೆ ಬಂದಿದ್ದ ವೃದ್ಧ ಮಹಿಳೆ ನಾಯಿಗಳಿಂದಾಗಿ ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆ.
ಬಿಹಾರ ಮೂಲದ ನಿವೃತ್ತ ಶಿಕ್ಷಕಿ 76 ವರ್ಷ ವಯಸ್ಸಿನ ರಾಜ್ ದುಲ್ಹರಿಸಿಂಹ ಅವರ ಅಳಿಯ ಏರ್ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.ಅವರ ಕುಟುಂಬ ನಗರದ ಜಾಲಹಳ್ಳಿಯ ಏರ್ ಪೋರ್ಸ್ ಕ್ಯಾಂಪಸ್‌ನಲ್ಲಿ ನೆಲೆಸಿದೆ.
ಮಗಳು -ಅಳಿಯನನ್ನು ನೋಡಲು ಬಂದ ಅವರು
ಕ್ಯಾಂಪಸ್‌ನ 7 ನೇ ವಸತಿ ಶಿಬಿರದ ಬಳಿ ಬೆಳಿಗ್ಗೆ 6.30ರ ವೇಳೆ ವಾಯು ವಿಹಾರ ಮಾಡುತ್ತಿದ್ದಾಗ ಏಳೆಂಟು ಬೀದಿ ನಾಯಿಗಳು ಅವರ ಮೇಲೆ ಎರಗಿ ದಾಳಿ ನಡೆಸಿವೆ.
ಇದರಿಂದ ಹೆದರಿ ಅವರು ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಯತ್ನಿಸುವ ವೇಳೆ ಆಯತಪ್ಪಿ ಕೆಳೆಗೆ ಬಿದ್ದಿದ್ದಾರೆ.ಈ ವೇಳೆ ನಾಯಿಗಳು ಅವರು ಮೇಲೆ ಮುಗಿಬಿದ್ದಿವೆ.ಈ ನಾಯಿಗಳ ಗಲಾಟೆ ಕೇಳಿ ದಾರಿಹೋಕರು ಬಂದು ನೋಡಿದಾಗ ಶಿಕ್ಷಕಿಯ ತಲೆ ಹಿಂಭಾಗ, ಮುಖ, ಕೈ ಹಾಗೂ ಕತ್ತಿನ ಭಾಗ ಛಿದ್ರ ಛಿದ್ರಗೊಂಡು ಅಸ್ವಸ್ಥಗೊಂಡಿದ್ದರು.
ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಮಹಿಳೆ ಮೃತದೇಹವನ್ನು ವೈದ್ಯರು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಪ್ರಕರಣ ದಾಖಲಿಸಿರುವ ಗಂಗಮ್ಮನಗುಡಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.
Previous Articleಕುಕ್ಕರ್ ಬಾಂಬ್ ಸ್ಫೋಟಕ್ಕೆ ಸಂಚು.
Next Article ಸಚಿವ ಜಾರ್ಜ್ ಅವರಲ್ಲಿ ಕ್ಷಮೆ ಕೇಳಿ.