ಬೆಂಗಳೂರು,ಏ.2-
ಪೋಲಿಸ್ ಇಲಾಖೆಯಲ್ಲಿ ದಕ್ಷತೆಯಿಂದ ಕೆಲಸ ಮಾಡಿದ ಕಾರಣಕ್ಕಾಗಿ ಪೊಲೀಸ್ ಅಧಿಕಾರಿಗೆ ಮುಖ್ಯಮಂತ್ರಿಗಳ ಪದಕ ಲಭಿಸಿತ್ತು. ಆದರೆ, ಈ ಅಧಿಕಾರಿ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನಾಲ್ಕು ಕೋಟಿ ಬೆಲೆಯ ಮನೆಯೊಂದನ್ನು ಕೇವಲ 60 ಲಕ್ಷಕ್ಕೆ ಖರೀದಿಸಲು ಹೋಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಕುಮಾರ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ತಗಾದೆಯೊಂದರ ನಿಮಿತ್ತ ಗುತ್ತಿಗೆದಾರ ಚೆನ್ನೇಗೌಡ
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಕುಮಾರ್ ಅವರನ್ನು ಸಂಪರ್ಕಿಸಿದ್ದಾರೆ. ಚೆನ್ನೇಗೌಡ ಪತ್ನಿ ಸರ್ಕಾರಿ ಉದ್ಯೋಗದಲ್ಲಿದ್ದಾರೆ.ಇವರ ವಿರುದ್ಧದ ಪ್ರಕರಣವೊಂದರ ತನಿಖೆ ನಡೆಸಿ ಬಿ ರಿಪೋರ್ಟ್ ಹಾಕಿ ಕೊಡುವುದಾಗಿ ಹೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ ಚನ್ನೇಗೌಡರಿಗೆ ಸೇರಿದ ಸುಮಾರು ನಾಲ್ಕು ಕೋಟಿ ಮೌಲ್ಯದ ಮನೆಯೊಂದನ್ನು ತಮ್ಮ ಸಂಬಂಧಿಕರಿಗೆ 60 ಲಕ್ಷ ರೂಪಾಯಿಗೆ ನೋಂದಣಿ ಮಾಡಿಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.
ಆದರೆ ಇದಕ್ಕೆ ಚನ್ನೇಗೌಡರು ಒಪ್ಪಿಲ್ಲ ಇದರಿಂದ ಕೆರಳಿದ ಇನ್ಸ್ ಪೆಕ್ಟರ್ ಕುಮಾರ್ ಕೆಲವು ಗೂಂಡಾಗಳನ್ನು ಕಳುಹಿಸಿ ಚನ್ನೇಗೌಡರು ಮಾರಾಟ ಮಾಡಬೇಕೆಂದಿದ್ದ ಮನೆಯ ಬಳಿ ಗಲಾಟೆ ಮಾಡಿಸಿದ್ದಾರೆ. ಪುಂಡರ ದಾಂಧಲೆಯನ್ನು ಚೆನ್ನೇಗೌಡ ಅವರು ವಿಡಿಯೋ ಮಾಡಿಕೊಂಡಿದ್ದು ಲೋಕಾಯುಕ್ತರ ಮೋರೆ ಹೋಗಿದ್ದಾರೆ.
ಲೋಕಾಯುಕ್ತರು ನೀಡಿದ ಸೂಚನೆಯಂತೆ ಚೆನ್ನೇಗೌಡರು ಪೋಲಿಸ್ ಅಧಿಕಾರಿ ಕುಮಾರ್ ಅವರ ಜೊತೆ ಮನೆ ಮಾರಾಟದ ವಿಚಾರ ಕುರಿತು ಮಾತುಕತೆಗೆ ಕರೆದಿದ್ದಾರೆ.
ಅಲ್ಲದೇ ಮನೆ ನೋಡಿಕೊಂಡು ಬರಲು ಠಾಣೆಯ ಹೆಡ್ ಕಾನ್ಸ್‌ಟೇಬಲ್ ಉಮೇಶ್ ಅವರ ಜೊತೆ ಸಂಬಂಧಿಕರನ್ನು ಕಳುಹಿಸಿದ್ದರು.ಇನ್ಸ್‌ಪೆಕ್ಟರ್ ಸೂಚನೆಯಂತೆ ಇಬ್ಬರು ವ್ಯಕ್ತಿಗಳೊಂದಿಗೆ ಮನೆ ನೋಡಬೇಕೆಂದು ಹೆಡ್ ಕಾನ್ಸ್‌ಟೇಬಲ್ ಉಮೇಶ್ ಅವರು ಚೆನ್ನೇಗೌಡ ಅವರ ಮನೆಗೆ ನುಗ್ಗಿದ್ದರು.
ಮಾ. 18ರಂದು ಸಮಯ 3:25 ನಿಮಿಷಕ್ಕೆ ಕೆಂಪು ಬಣ್ಣದ ಕೆಎ 42 ಪಿ 0919 ನೋಂದಣಿಯ ಬ್ರೀಝಾ ಕಾರಿನಲ್ಲಿ ಮನೆಗೆ ಬಂದಿದ್ದರು. ಈ ಬಗ್ಗೆ ಪ್ರಶ್ನಿಸಿದ ಚೆನ್ನೇಗೌಡ ಅವರು ವಿಡಿಯೋ ಸಹ ಮಾಡಿದ್ದರು.
ಈ ವೇಳೆ ಠಾಣೆಯಿಂದ ಕಾರು ಸಮೇತ ಕರೆದುಕೊಂಡು ಬರುವುದಾಗಿ ಹೇಳಿ ಹೆಡ್ ಕಾನ್ಸ್ ಟೇಬಲ್ ಉಮೇಶ್ ಅವರು ಅಲ್ಲಿಂದ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ.
ಮತ್ತೊಂದಡೆ ನಾಗರಭಾವಿಯ ಖಾಸಗಿ ಹೊಟೇಲ್‌ನಲ್ಲಿ ಡೀಲ್ ಮಾಡುತ್ತಿದ್ದ ವೇಳೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.ಈ ವೇಳೆ ಹೆಡ್ ಕಾನ್ಸ್‌ಟೇಬಲ್ ಉಮೇಶ್, ಅನಂತ್ ಲೋಕಾ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ದಾಳಿ ವಿಚಾರ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾದ ಮನೆಯಲ್ಲೇ ಇಲಾಖೆಯ ಜೀಪ್ ಬಿಟ್ಟು ಪರಾರಿಯಾಗಿದ್ದಾರೆ.ಈಗ,ಅವರ ಪತ್ತೆಗೆ ಶೋಧ ನಡೆಸಲಾಗಿದೆ.
Previous Articleಕರ್ನಾಟಕ ಇತಿಹಾಸದ ಮತ್ತೊಂದು ದಾಖಲೆ
Next Article ಚಿನ್ನದ ಬೆಡಗಿ ರನ್ಯಾಗೆ ಮತ್ತೊಂದು ಹೊಡೆತ