Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮುರುಘಾ ಬೃಹನ್ ಮಠದ ಕಥೆ ಏನು?
    ರಾಜ್ಯ

    ಮುರುಘಾ ಬೃಹನ್ ಮಠದ ಕಥೆ ಏನು?

    vartha chakraBy vartha chakraಸೆಪ್ಟೆಂಬರ್ 2, 2022Updated:ಸೆಪ್ಟೆಂಬರ್ 2, 2022ಯಾವುದೇ ಟಿಪ್ಪಣಿಗಳಿಲ್ಲ3 Mins Read
    Facebook Twitter WhatsApp Pinterest LinkedIn Tumblr Email
    Murugha Matha
    Share
    Facebook Twitter LinkedIn Pinterest Email WhatsApp
    Verbattle
    Verbattle

    ಚಿತ್ರದುರ್ಗ,ಸೆ.2-ನಗರದಲ್ಲಿನ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠವು ರಾಜ್ಯದ ಸಾಮಾಜಿಕ ಇತಿಹಾಸದೊಂದಿಗೆ ಬೆಸೆದುಕೊಂಡಿರುವ ಜನಪ್ರಿಯ ಶ್ರದ್ಧಾಕೇಂದ್ರವಾಗಿದೆ.!
    ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಮುರುಘ ಮಠಕ್ಕೆ ಭಕ್ತರಿದ್ದಾರೆ. ಲಿಂಗಾಯತ ಪರಂಪರೆಯ ಮಠವಾದರೂ ವಿವಿಧ ಜಾತಿ ಮತ್ತು ಧರ್ಮಗಳಲ್ಲಿಯೂ ತನ್ನದೇ ಆದ ಪ್ರಭಾವ ಹೊಂದಿದೆ. ಸಮಾಜ ಸುಧಾರಣೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬಹುಕಾಲದಿಂದ ಸಕ್ರಿಯವಾಗಿದ್ದು, ಕರ್ನಾಟಕದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದೆ.
    17ನೇ ಶತಮಾನದಲ್ಲಿ ಚಿತ್ರದುರ್ಗದ ಪಾಳಯಗಾರ ಬಿಚ್ಚುಗತ್ತಿ ಭರಮಣ್ಣ ನಾಯಕನ ಆಳ್ವಿಕೆಯ ಅವಧಿಯಲ್ಲಿ ರಾಜಾಶ್ರಯ ಪಡೆದ ಮಠಕ್ಕೆ ನಂತರದ ದಿನಗಳಲ್ಲಿ ಪ್ರತಿ ಆಡಳಿತಗಾರರು ಗೌರವ ಸಲ್ಲಿಸಿದರು.
    ಸ್ವಾತಂತ್ರ್ಯ ನಂತರ ರಾಜ್ಯ ರಾಜಕಾರಣದಲ್ಲಿ ಯಾವುದೇ ಪಕ್ಷವನ್ನು ಅಧಿಕಾರಕ್ಕೆ ತರುವ ಅಥವಾ ಇಳಿಸುವ ಸಾಮರ್ಥ್ಯವನ್ನು ಎನಿಸಿದ ವೀರಶೈವ ಲಿಂಗಾಯತ ಸಮುದಾಯ ಹಲವು ಬಾರಿ ಪ್ರದರ್ಶಿಸಿದೆ. ಇದೇ ಸಮುದಾಯಕ್ಕೆ ಸೇರಿದ ಮಠವನ್ನು ನಿರ್ಲಕ್ಷಿಸಲು ಅಥವಾ ಮೂಲೆಗುಂಪು ಮಾಡಲು ಯಾವೊಂದು ಪಕ್ಷವೂ ಧೈರ್ಯ ಮಾಡಲಿಲ್ಲ. ಆದರೆ ಮಠವು ರಾಜಕಾರಣಕ್ಕಿಂತಲೂ ಹೆಚ್ಚಾಗಿ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರಿಂದ ಸಹಜವಾಗಿಯೇ ಭಕ್ತಿಯೊಂದಿಗೆ ಜನರು ಗೌರವ, ಪ್ರೀತಿಗಳೂ ದೊರೆತವು.
    ಪೊಕ್ಸೋ ಪ್ರಕರಣದಲ್ಲಿ ಆರೋಪಿಯಾಗಿ ಚಿತ್ರದುರ್ಗ ಜೈಲಿನ ವಿಚಾರಣಾಧೀನ ಕೈದಿ ನಂ 2261 ಆಗಿರುವ ಮುರುಘಾ ಮಠದ ಹಾಲಿ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಈವರೆಗೆ ಹೇಳಿಕೊಳ್ಳುವಂಥ ಆರೋಪಗಳು ಇರಲಿಲ್ಲ. ಸ್ವಾಮೀಜಿ ಆಪ್ತರಾಗಿದ್ದ ಬಸವರಾಜನ್ ಈ ಹಿಂದೆಯೂ ಹಲವು ಆರೋಪಗಳನ್ನು ಮಾಡಿದ್ದರಾದರೂ, ಪರಿಸ್ಥಿತಿ ವಿಕೋಪಕ್ಕೆ ಹೋಗಿರಲಿಲ್ಲ. ಆದರೆ ಇದೀಗ ಮಠದ ಆಶ್ರಯದಲ್ಲಿದ್ದ ಮಕ್ಕಳೇ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡುವುದರೊಂದಿಗೆ ಅವರ ಘನತೆಗೆ ಧಕ್ಕೆ ಬಂದಿದೆ.
    ‘ಇದು ನಂಬಿಕೆದ್ರೋಹ. ನಿರಪರಾಧಿ ಎಂದು ಸಾಬೀತಾಗುವವರೆಗೆ ಅವರು ಪೀಠದಿಂದ ಕೆಳಗಿಳಿದು ತನಿಖೆ ಎದುರಿಸಬೇಕು’ ಎಂದು ರಾಜ್ಯದ ಹಲವೆಡೆ ಭಕ್ತರು ಒತ್ತಾಯ ಮಾಡುತ್ತಿರುವುದು ಸಹಜ ಕೂಡ.
    ಸ್ವಾಮೀಜಿಗೆ ಈ ಪರಿಸ್ಥಿತಿ ಬರಲು ಹಿಂದೊಮ್ಮೆ ಅವರ ಆಪ್ತರಾಗಿದ್ದ ಬಸವರಾಜನ್ ಅವರೇ ಮುಖ್ಯ ಕಾರಣ ಎಂದು ದೂರಲಾಗುತ್ತಿದೆ. ಈ ಹಿಂದೆ ಮಠದ ಆಡಳಿತಾಧಿಕಾರಿಯಾಗಿದ್ದ ಬಸವರಾಜನ್ ಮೇಲೆಯೂ ಅತ್ಯಾಚಾರದ ದೂರು ದಾಖಲಾಗಿದೆ. ಧಾರ್ಮಿಕ ಮನೋಭಾವದ ಭಕ್ತರಿಗೆ ಈ ದೂರು-ಪ್ರತಿದೂರುಗಳು ಅಸಹ್ಯ ಹುಟ್ಟಿಸಿವೆ.
    ಒಲಿದು ಬಂದ ಪೀಠ:
    ಚಿತ್ರದುರ್ಗ ತಾಲೂಕಿನ ಗೊಡಬನಾಳ್ ಗ್ರಾಮದಲ್ಲಿ ನವೆಂಬರ್ 4, 1958ರಂದು ಗುರುಮೂರ್ತೆಪ್ಪ – ಮುರುಗೆಮ್ಮ ದಂಪತಿಯ ಮಗನಾಗಿ ಜನಿಸಿದ ಶಿವಮೂರ್ತಿ ಮುರುಘಾ ಶರಣರ ಪೋಷಕರು ಮುರುಘಾ ಮಠದ ಭಕ್ತರಾಗಿದ್ದರು.
    ಬಾಲ್ಯದಲ್ಲೇ ಶಿಕ್ಷಣಕ್ಕಾಗಿ ಮಠದ ಆಶ್ರಯ ದೊರೆತು ಮುರುಘಾಮಠದ ಅಂದಿನ ಪೀಠಾಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿಗೆ ಇವರ ನಡವಳಿಕೆ ಮತ್ತು ಬುದ್ಧಿವಂತಿಕೆ ಇಷ್ಟವಾಯಿತು.
    ಹೀಗಾಗಿ ಮಠದ ಅಧಿಕಾರ ವಲಯದಲ್ಲಿ ಶಿವಮೂರ್ತಿ ಮುರುಘಾ ಶರಣರು ಹಂತಹಂತವಾಗಿ ಮೇಲೇರುತ್ತಾ ಬಂದರು. 1978ರಲ್ಲಿ ಶಿರಸಿ ರುದ್ರದೇವರ ಮಠದ ಮರಿದೇವರು, 1982ರಲ್ಲಿ ಶಿರಸಿ ರುದ್ರದೇವರ ಮಠದ ಪಟ್ಟಾಧಿಕಾರಿ, 1984ರಲ್ಲಿ ಹಾವೇರಿ ಮಠದ ಪೀಠಾದ್ಯಕ್ಷರಾದರು. ಚಿತ್ರದುರ್ಗ ಮುರುಘಾಮಠದ ಪೀಠಾಧ್ಯಕ್ಷರಾಗಿ ಜನವರಿ 31, 1991ರಲ್ಲಿ ಅಧಿಕಾರ ಸ್ವೀಕರಿಸಿದರು.
    ನೆಚ್ಚಿನ ಆಪ್ತ ಶಿಷ್ಯ:
    ಸ್ವಾಮೀಜಿ ವಿರುದ್ಧ ಹಲವು ಆರೋಪ ಮಾಡಿರುವ ಎಸ್​.ಕೆ.ಬಸವರಾಜನ್ ಸಹ ಹಿಂದಿನ ಪೀಠಾಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿಗೆ ನೆಚ್ಚಿನ ಆಪ್ತ ಶಿಷ್ಯರಾಗಿದ್ದವರು. ಬಸವರಾಜನ್ ಅವರನ್ನೇ ಪೀಠಾಧ್ಯಕ್ಷರನ್ನಾಗಿ ಘೋಷಿಸಲು ಮಲ್ಲಿಕಾರ್ಜುನ ಮುರುಘ ರಾಜೇಂದ್ರರು ಮನಸ್ಸು ಮಾಡಿದ್ದರು.
    ಆದರೆ ಪೀಠಾಧ್ಯಕ್ಷರಾಗಲು ಬಸವರಾಜನ್ ಒಪ್ಪದ ಹಿನ್ನೆಲೆಯಲ್ಲಿ ಅವರನ್ನು ಆಡಳಿತಾಧಿಕಾರಿಯನ್ನಾಗಿ ಘೋಷಿಸಿ, ಶಿವಮೂರ್ತಿ ಮುರುಘಾ ಶರಣನ್ನು ಪೀಠಾಧ್ಯಕ್ಷರನ್ನಾಗಿ ಮಾಡಲಾಯಿತು. ಚಿತ್ರದುರ್ಗ ತಾಲೂಕಿನ ಸೊಂಡೆಕೊಳ ಗ್ರಾಮದ ಎಸ್.ಕೆ.ಬಸವರಾಜನ್. ಈ ಗ್ರಾಮದ ಪಕ್ಕದಲ್ಲಿಯೇ ಶಿವಮೂರ್ತಿ ಮುರುಘಾ ಶರಣದ ಗೊಡಬನಾಳ್ ಗ್ರಾಮವಿದೆ.
    ಬಸವರಾಜನ್ ಸಹ 6 ವರ್ಷದ ಬಾಲಕನಾಗಿದ್ದಾಗಲೇ ಭಕ್ತರಾಗಿ ಮಠ ಸೇರಿದ್ದರು. ಚಿಕ್ಕಂದಿನಿಂದಲೇ ಬಸವರಾಜನ್, ಮುರುಘಾ ಶ್ರೀ ಪರಿಚಿತರಾಗಿದ್ದರು.
    ಪ್ರಥಮಗಳಿಗೆ ಶ್ರೀಕಾರ:
    ಗುರುಪೀಠಗಳು ಇಲ್ಲದಿದ್ದ ಕರ್ನಾಟಕದ ಹಲವು ಸಮುದಾಯಗಳಿಗೆ ಗುರುಪೀಠಗಳನ್ನು ಆರಂಭಿಸುವ ಮೂಲಕ ಸಾಮಾಜಿಕ ಕ್ರಾಂತಿಗೆ ಶಿವಮೂರ್ತಿ ಮುರುಘಾ ಶರಣರು ಮುನ್ನುಡಿ ಬರೆದರು. 17ನೇ ಶತಮಾನದಲ್ಲಿ ರಾಜಮನೆತನದ ಆಶ್ರಯದಲ್ಲಿ ಪ್ರವರ್ಧಮಾನಕ್ಕೆ ಬಂದ ಮಠದ ಪರಂಪರೆಯಂತೆ ಇವರು ತಮ್ಮನ್ನು ತಾವು ಜಗದ್ಗುರುಗಳು ಎಂದು ಕರೆಸಿಕೊಳ್ಳಲಿಲ್ಲ.
    ಶರಣ ಸಂಸ್ಕೃತಿಯ ಪ್ರತೀಕವಾಗಿ ತಮ್ಮನ್ನು ತಾವು ‘ಶರಣ’ ಎಂದೇ ಕರೆದುಕೊಂಡರು. ಬೆಳ್ಳಿಸಿಂಹಾಸನ ಹಾಗೂ ಅಡ್ಡಪಲ್ಲಕ್ಕಿಗಳನ್ನು ತಿರಸ್ಕರಿಸಿ ‘ನಾನು ಸಾಮಾನ್ಯರಲ್ಲಿ ಸಾಮಾನ್ಯ, ಬಸವ ಧರ್ಮದ ಅನುಯಾಯಿ’ ಎಂದು ಘೋಷಿಸಿಕೊಂಡರು.
    ಜಾತಿ ಭೇದ ಮಾಡದೆ ಸಮಾಜದ ಎಲ್ಲಾ ವರ್ಗದ ಜನರನ್ನು ಮಠದೊಳಗೆ ಕರೆತಂದರು. ಹಲವು ಸಮುದಾಯಗಳಿಗೆ ರಾಜಕೀಯ ಶಕ್ತಿಯನ್ನೂ ತುಂಬಿದರು. ಇವರ ಆಡಳಿತ ಅವಧಿಯಲ್ಲಿ ಮುರುಘಾ ಮಠದ ಪ್ರಭಾವ ಮತ್ತು ಚಟುವಟಿಕೆಗಳು ದೊಡ್ಡಮಟ್ಟದಲ್ಲಿ ಬೆಳೆದವು. ಈ ಬೆಳವಣಿಗೆಯ ಹಿಂದೆ ಬಸವರಾಜನ್ ಅವರ ಪರಿಶ್ರಮ ಮತ್ತು ಆಲೋಚನೆಗಳೂ ಕೆಲಸ ಮಾಡಿದ್ದವು.
    ಭಿನ್ನಾಭಿಪ್ರಾಯ:
    ಬಹುಕಾಲದ ಒಡನಾಡಿಗಳಾಗಿದ್ದ ಬಸವರಾಜನ್ ಹಾಗೂ ಶಿವಮೂರ್ತಿ ಮುರುಘಾ ಶರಣರ ನಡುವೆ 2007ರಲ್ಲಿ ಮೊದಲ ಬಾರಿಗೆ ಭಿನ್ನಾಭಿಪ್ರಾಯ ತಾರಕಕ್ಕೇರಿತ್ತು. ಮಠದ ಹಣ, ಆಸ್ತಿ ಕಬಳಿಕೆ, ವೆಚ್ಚಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಒಬ್ಬರು ಇನ್ನೊಬ್ಬರ ಮಾತು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.
    ತೀವ್ರ ಅಸಮಾಧಾನದಿಂದ 2007ರಲ್ಲಿ ಬಸವರಾಜನ್ ಮಠದಿಂದ ಹೊರ ನಡೆದಿದ್ದರು. ಬಳಿಕ ಮುರುಘಾಶ್ರೀ, ಬಸವರಾಜನ್ ನಡುವೆ ವಿವಿಧ ಆಸ್ತಿಗಳ ಬಗ್ಗೆ ಕೋರ್ಟು, ಕಚೇರಿಗಳಲ್ಲಿ ನಿರಂತರ ವ್ಯಾಜ್ಯಗಳು ನಡೆದಿದ್ದವು.
    2008ರಲ್ಲಿ ಬಸವರಾಜನ್ ಚಿತ್ರದುರ್ಗ ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿ ಆಯ್ಕೆಯಾದರು. ನಂತರ ಕಳೆದ ಮಾರ್ಚ್ 7ರಂದು ಬಸವರಾಜನ್ ದಿಢೀರ್ ಮಠಕ್ಕೆ ಮರುಪ್ರವೇಶ ಮಾಡಿದರು. ಮತ್ತೆ ಅವರಿಗೆ ಮಠದ ಆಡಳಿತಾಧಿಕಾರಿ ಹುದ್ದೆ ನೀಡಲಾಯಿತು. ಇಬ್ಬರೂ ಒಗ್ಗೂಡಿ ಮಠದ ಅಭಿವೃದ್ಧಿಗೆ ಶ್ರಮಿಸುವುದಾಗಿ ಘೋಷಿಸಿದರು. ಮಠದ ವಿರುದ್ಧ ಷಡ್ಯಂತ್ರ ಮಾಡಕೂಡದು, ಆಸ್ತಿ ವ್ಯಾಜ್ಯಗಳಲ್ಲಿ ರಾಜಿ ಮಾಡಿಕೊಳ್ಳಬೇಕು ಎನ್ನುವುದೂ ಸೇರಿದಂತೆ ಹಲವು ಷರತ್ತುಗಳನ್ನು ಈ ವೇಳೆ ಸ್ವಾಮೀಜಿ ವಿಧಿಸಿದ್ದರು. ಎಸ್​ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಹುದ್ದೆಯನ್ನೂ ಬಸವರಾಜನ್ ಅವರಿಗೆ ನೀಡಲಾಗಿತ್ತು.

    Verbattle
    Verbattle
    Verbattle
    ಧರ್ಮ ಧಾರ್ಮಿಕ ರಾಜಕೀಯ ಶಿಕ್ಷಣ ಹಾಸನ
    Share. Facebook Twitter Pinterest LinkedIn Tumblr Email WhatsApp
    Previous ArticleGang rape ಪಾತಕಿಗಳು ಅರೆಸ್ಟ್
    Next Article ಅಶೋಕ್ ವಿಷಾದ
    vartha chakra
    • Website

    Related Posts

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    ಫೆಬ್ರವರಿ 12, 2026

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    ಫೆಬ್ರವರಿ 11, 2026

    ಭೂಸ್ವಾಧೀನ ಪ್ರಕರಣ: ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ಗೆಲುವು

    ಫೆಬ್ರವರಿ 11, 2026

    Comments are closed.

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    ಡೆಡ್ಲಿ ಡೀಲ್: ಅಮೆರಿಕಾದ ಮುಂದೆ ಮಂಡಿ ಊರಲಿದೆಯೇ ಭಾರತ..?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Glennhof ರಲ್ಲಿ ಎದೆ ನಡುಗಿಸಿದ ಭೀಕರ ಹತ್ಯೆ.
    • LinwoodGah ರಲ್ಲಿ ಬಹಿರಂಗಗೊಳ್ಳಲಿದೆ ಮತ್ತೊಂದು ಲೈಂಗಿಕ ಕರ್ಮ ಕಾಂಡ.
    • pas88 ರಲ್ಲಿ Boeing – ದೋಷಯುಕ್ತ ವಿಮಾನಗಳಿಂದಾಗಿ ಕುಖ್ಯಾತಿ!
    Latest Kannada News

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    ಫೆಬ್ರವರಿ 12, 2026

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    ಫೆಬ್ರವರಿ 12, 2026

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    ಫೆಬ್ರವರಿ 11, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.