ಬಿಜೆಪಿಗೂ ಸಿನಿ ತಾರೆಯರಿಗೂ ಬಿಟ್ಟಿರಲಾರದ ನಂಟಿದೆ. ಹೇಮಾಮಾಲಿನಿ, ಸುರೇಶ್ ಗೋಪಿ, ಕಂಗನಾ ರಣಾವತ್ ಈಗಾಗಲೇ ಬಿಜೆಪಿ ಸಂಸದರಾಗಿದ್ದಾರೆ. ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಕಿಚ್ಚ ಸುದೀಪ್ ಇನ್ನೇನು ಬಿಜೆಪಿ ಸೇರೇಬಿಟ್ರು ಅನ್ನೋ ಸುದ್ದಿ ಬಂದಿತ್ತು. ಇದೀಗ ಆಂಧ್ರದಲ್ಲಿ ದೊಡ್ಡ ಸಂಚಲನ ಸೃಷ್ಟಿಸೋಕೆ ಬಿಜೆಪಿ ತಯಾರಾಗಿದೆ.
ಚಿರಂಜೀವಿ.. ಈ ಹೆಸರು ಕೇಳದವ್ರೇ ಇಲ್ಲ.. ಸಾಲು ಸಾಲು ಹಿಟ್ ಕೊಟ್ಟು ದಕ್ಷಿಣ ಭಾರತ ಮಾತ್ರವಲ್ಲ ಇಡೀ ಭಾರತದಲ್ಲಿ ಚಿರು ಚಿರಪರಿಚಿತರಾಗಿದ್ದಾರೆ.. ಇದೀಗ ಅದೇ ಚಿರಂಜೀವಿ ಮೇಲೆ ಬಿಜೆಪಿ ಬಿದ್ದಿದೆ.
ರಾಜಕೀಯದಲ್ಲಿ ಯಾವಾಗ ಏನಾಗುತ್ತದೆ ಎಂದು ಯಾರಿಗೂ ಊಹಿಸಲು ಸಾಧ್ಯವಿಲ್ಲ. ರಾತ್ರಿ ಕಳೆದು ಬೆಳಗಾಗುವುದರಲ್ಲಿ ಸರ್ಕಾರಗಳೇ ಬದಲಾಗುತ್ತವೆ. ಆಂತಹ ಸಂದರ್ಭದಲ್ಲಿ ರಾಜಕೀಯ ನಾಯಕರು ಪಕ್ಷ ಬದಲಾಯಿಸುವುದರಲ್ಲಿ ನಿಸ್ಸಿಮರು. ಈ ಪಟ್ಟಿಗೆ ತೆಲಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ ಹೊಸ ಎಂಟ್ರಿಯಾಗುವ ಸಾಧ್ಯತೆ ಇದೆ. ಕೆಲ ದಿನಗಳ ಹಿಂದೆ ಚಿರಂಜೀವಿ, ಕೇಂದ್ರ ಸಚಿವ, ಕಿಶನ್ ರೆಡ್ಡಿ ನಿವಾಸದಲ್ಲಿ ನಡೆದ ಸಂಕ್ರಾಂತಿ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆ ಭಾಗವಹಿಸಿದ್ದರು. ಇದಾದ ನಂತರ ಚಿರಂಜೀವಿ ಬಿಜೆಪಿ ಸರ್ಪಡೆಯಾಗುತ್ತಾರೆ ಎಂಬ ಗುಸುಗುಸು ಜೋರಾಗಿ ಕೇಳಿ ಬರುತ್ತಿದೆ.
ಇದೇ ಮೆಗಾ ಸ್ಟಾರ್ ಕೆಲ ವರ್ಷಗಳ ಹಿಂದೆ ಪ್ರಜಾರಾಜ್ಯಂ ಎಂಬ ಪ್ರಾದೇಶಿಕ ಪಕ್ಷ ಪ್ರಾರಂಭಿಸಿದ್ದರು. ಆದರೆ, ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ನಂತರ ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸೇರ್ಪಡೆಯಾಗಿ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು. ಆದರೆ ಸದ್ಯ ಚಿರಂಜೀವಿ ಸಕ್ರಿಯ ರಾಜಕೀಯದಿಂದ ದೂರ ಸರಿದ್ದಾರೆ.
ಮೆಗಾ ಸ್ಟಾರ್ ಚಿರಂಜೀವಿ, ಸಹೋದರ ಪವರ್ ಸ್ಟಾರ್ ಪವನ್ ಕಲ್ಯಾಣ್ ಜನಸೇನಾ ಪಕ್ಷದ ನಾಯಕರಾಗಿ, ಬಿಜೆಪಿಯ ಎನ್ಡಿಎಯ ಅಂಗ ಪಕ್ಷವಾದ ಟಿಡಿಪಿ ನೇತೃತ್ವದ ಆಂಧ್ರ ಪ್ರದೇಶದ ಸರ್ಕಾರದಲ್ಲಿ ಡಿಸಿಎಂ ಆಗಿಸೇವೆ ಸಲ್ಲಿಸುತ್ತಿದ್ದಾರೆ. ಆದರೂ ಬಿಜೆಪಿಗೆ ಆಂಧ್ರದ ಪಕ್ಕದಲ್ಲಿನ, ಮತ್ತೊಂದು ತೆಲುಗು ರಾಜ್ಯ ತೆಲಂಗಾಣದಲ್ಲಿ ಪಕ್ಷ ಮುನ್ನಡೆಸಲು ಸೂಕ್ತ ನಾಯಕರ ಕೊರತೆ ಇದೆ. ಇದೇ ಕಾರಣಕ್ಕೆ ಪ್ರಧಾನಿ ಮೋದಿ ಜತೆ ಉತ್ತಮ ಒಡನಾಟ ಹೊಂದಿರುವ ಮೆಗಾ ಸ್ಟಾರ್ ಚಿರಂಜೀವಿಯನ್ನು ಬಿಜೆಪಿಗೆ ಕರೆತಂದು ತೆಲಂಗಾಣದಲ್ಲಿಯೂ ಸರ್ಕಾರ ರಚನೆ ಮಾಡಲು ಮೋದಿ ಪ್ಲಾನ್ ಮಾಡಿದ್ದಾರೆ.
ಎಲ್ಲಾ ಊಹಾಪೊಹಗಳ ನಡುವೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಒಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸದ್ಯಕ್ಕಂತೂ ಚಿರಂಜೀವಿ ಬಿಜೆಪಿ ಸೇರಲ್ಲ ಎಂದಿದ್ದಾರೆ. ಆದರೆ ಬಿಜೆಪಿ ಮೆಗಾಸ್ಟಾರ್ ಚಿರಂಜೀವಿಗೆ ಗಾಳ ಹಾಕಿರೋದು ಸುಳ್ಳಲ್ಲ.
ನಿಮ್ಗೆ ಏನ್ ಅನ್ಸುತ್ತೆ.. ಚಿರಂಜೀವಿ ಬಿಜೆಪಿ ಸೇರಬಹುದಾ? ಸೇರಿದ್ರೆ ಬಿಜೆಪಿಗೆ ಲಾಭ ಆಗುತ್ತಾ? ಕಮೆಂಟ್ ಮಾಡಿ, ನಮ್ಮ ಚಾನೆಲ್ ಸಬ್ಸ್ರೈಬ್ ಮಾಡೋದನ್ನ ಮರೆಯಬೇಡಿ.