ನವದೆಹಲಿ.
ಹಿಂದಿ ಸಿನಿಮಾ ರಂಗದಲ್ಲಿ ನಟ ಧರ್ಮೇಂದ್ರ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಸದ್ಯ ಸಕ್ರಿಯ ರಾಜ ಕಾರಣದಲ್ಲಿ ಬ್ಯುಸಿಯಾಗಿರುವ ಇವರ ಕುಟುಂಬ ಬಾಲಿವುಡ್ ನೊಂದಿಗೆ ಬಿಡಿಸಲಾರದ ನಂಟು ಹೊಂದಿದೆ.
ಪತ್ನಿ ಹೇಮಮಾಲಿನಿ ಪುತ್ರರಾದ ಸನ್ನಿ ಡಿಯೋಲ್, ಬಾಬ್ಬಿ ಡಿಯೋಲ್ ಎಲ್ಲರೂ ಕೂಡ ಹಿಂದಿ ಸಿನಿಮಾ ರಂಗದಲ್ಲಿ ಸಾಕಷ್ಟು ಸಕ್ರಿಯವಾಗಿದ್ದು ಅಪಾರ ಗೌರವ ಪ್ರೀತಿ ಆದರಗಳಿಗೆ ಪಾತ್ರರಾಗಿದ್ದಾರೆ.
ಆದರೆ ಇಂತಹ ಹಿರಿಯ ನಟ ಇದೀಗ ವಂಚನೆ ಆರೋಪದಲ್ಲಿ ಸಿಲುಕಿದ್ದಾರೆ.
ಡಾಬಾ ಪ್ರಾಂಚೈಸಿವೊಂದಕ್ಕೆ ಸಂಬಂಧಿಸಿದಂತೆ ಉದ್ಯಮಿ ಸುಶೀಲ್ ಕುಮಾರ್ ಎಂಬುವರು ದಾಖಲಿಸಿದ್ದ ದೂರಿನ ಅನ್ವಯ ಸ್ಥಳೀಯ ನ್ಯಾಯಾಲಯ ಧರ್ಮೇಂದ್ರ ಅವರಿಗೆ ಸಮನ್ಸ್ ಜಾರಿ ಮಾಡಿದೆ.
ಉತ್ತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಡಾಬಾ ತೆರೆಯಲು ಧರ್ಮೇಂದ್ರ ಮತ್ತವರ ಸಹಚರರಿಗೆ 2018ರಲ್ಲಿ 17.70 ಲಕ್ಷದ ಚೆಕ್ ಹಸ್ತಾಂತರಿಸಲಾಗಿತ್ತು ಎಂದು ಸುಶೀಲ್ ಕುಮಾರ್ ದೂರಿದ್ದಾರೆ.
Previous Articleಭ್ರಷ್ಟ ಅಧಿಕಾರಿಗಳ ಬೆವರು ಹರಿಸಿದ ಲೋಕಾಯುಕ್ತ.
Next Article ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗೆ ಚಪ್ಪಲಿ ಸೇವೆ.