ಯುಐ’ ಸಿನಿಮಾ ಡಿಸೆಂಬರ್ 20 ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರದಲ್ಲಿ ಉಪೇಂದ್ರ ತೊಡಗಿಕೊಂಡಿದ್ದಾರೆ. ಇಂದು ಧಾರವಾಡಕ್ಕೆ ಭೇಟಿ ನೀಡಿದ್ದ ಉಪೇಂದ್ರ ಜೋರಾಗಿ ಸಿನಿಮಾ ಪ್ರಚಾರ ಮಾಡಿದ್ದಾರೆ. ಅಭಿಮಾನಿಗಳೊಟ್ಟಿಗೆ ಮಾತನಾಡಿದ್ದಾರೆ.ಧಾರವಾಡದಲ್ಲಿ ನಡೆದ ಮಾದಕ ವಸ್ತು ವಿರೋಧಿ ಅಭಿಯಾನದಲ್ಲಿ ಮಾತನಾಡಿದ ಉಪೇಂದ್ರ, ತಮ್ಮ ಕಾಲೇಜು ದಿನಗಳ ಮೆಲುಕು ಹಾಕಿದ ಉಪೇಂದ್ರ, ನಮಗೆ ಏನು ಖುಷಿ ಕೊಡುತ್ತದೆಯೋ ಅದನ್ನು ಮಾಡಬೇಕು, ನಾನೂ ಸಹ ನನಗೆ ಏನು ಖುಷಿ ಕೊಡುತ್ತೋ ಅದನ್ನೇ ಮಾಡಿದ್ದೇನೆ’ ಎಂದರು.‘ನನಗೆ ಎಜ್ಯುಕೇಷನ್ ಖುಷಿ ಕೊಡಲಿಲ್ಲ, ಸಿನಿಮಾಗೆ ಸೇರುವ ಮುಂಚೆ ಬೇರೆ ಕೆಲಸವೂ ಖುಷಿ ಕೊಡಲಿಲ್ಲ, ಹಾಗಂತ ಶಿಕ್ಷಣ ಮುಖ್ಯವಲ್ಲ ಅಂತ ಹೇಳೋಲ್ಲ, ಶಿಕ್ಷಣವೂ ಬೇಕು, ನಾನು ಬಿಕಾಂ ಪದವೀಧರ ಎಂದು ಉಪೇಂದ್ರ ಹೇಳಿದರು.ನಾನು ಕಾಲೇಜಿನಲ್ಲಿದ್ದಾಗ ಹುಡುಗಿಯರ ಬಗ್ಗೆ ಹಾಡು ಹೇಳುತ್ತಿದ್ದೆ, ಆಗ ಹುಡುಗಿಯರ ಬಯ್ಯುತ್ತಿದ್ದರು, ಈತ ಮಾನಸಿಕವಾಗಿ ವಿಚಲಿತ ಆಗಿದ್ದಾನೆ ಅನ್ನುತ್ತಿದ್ದರು, ತಮಾಷೆಗೆ ಆಗ ಹಾಡು ಹೇಳುತ್ತಿದ್ದೆ, ಆಗಲೇ ಲವ್ವು ಪುಸ್ತಕದ ಬದನೇಕಾಯಿ ಎಂದಿದ್ದೆ ಎಂದು ಹಳೆಯ ದಿನಗಳ ನೆನದರು ಉಪ್ಪಿ.
ಯುಐ’ ಸಿನಿಮಾ ಪ್ರಚಾರ: ಧಾರವಾಡದಲ್ಲಿ ಕಾಲೇಜು ದಿನಗಳ ನೆನಪು ಮಾಡಿಕೊಂಡ ಉಪ್ಪಿ
Previous Articleಬೆಂಗಳೂರಿನ ಜನರೇ ದರ ಹೆಚ್ಚಳಕ್ಕೆ ಸಜ್ಜಾಗಿ.
Next Article ಗಂಡಾಂತರಕ್ಕೆ ಸಿಲುಕಿದ ಸಿದ್ದರಾಮಯ್ಯ.