50 ವರ್ಷದೊಳಗಿನ ವ್ಯಕ್ತಿಗಳು ಜಿಮ್‌ಗೆ ಹೋದಾಗ ಅಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಆತಂಕಕಾರಿಯಾಗಿದೆ. ಆರೋಗ್ಯ ತಜ್ಞರು ಜಿಮ್‌ಗೆ ಹೋಗುವ ಮೊದಲು ಅನುಸರಿಸಬೇಕಾದ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಮಧುಮೇಹ, ಅಧಿಕ ರಕ್ತದೊತ್ತಡ, ಧೂಮಪಾನದ ಅಭ್ಯಾಸ, ಕುಟುಂಬದಲ್ಲಿ ಹೃದಯ ಸಂಬಂಧಿತ ಕಾಯಿಲೆಗಳು ಇವುದರಲ್ಲಿ ಯಾವುದಿದ್ದರೂ ಆ ವ್ಯಕ್ತಿಗಳು ವ್ಯಾಯಾಮ ಮಾಡುವಾಗ ಜಾಗರೂಕರಾಗಿರಬೇಕು ಎನ್ನುತ್ತಾರೆ. ಪ್ರಸ್ತುತ ಭಾರತದಲ್ಲಿ ಜಿಮ್‌ಗೆ ಹೋಗುವವರಲ್ಲಿ ಹೃದಯಾಘಾತವು ಆತಂಕಕಾರಿ ಸಂಖ್ಯೆಯನ್ನು ತಲುಪಿದೆ. ಸೆಲೆಬ್ರಿಟಿಗಳಾದ ಸಿದ್ದಾಂತ್ ಸೂರ್ಯವಂಶಿ ಮತ್ತು ರಾಜು ಶ್ರೀವಾಸ್ತವ್ ಅವರು ವ್ಯಾಯಾಮ ಮಾಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದರು, ಯುವಕರು ಹೃದಯಾಘಾತಕ್ಕೆ ಏಕೆ ಒಳಗಾಗುತ್ತಾರೆ ಎಂದು ಜನರು ಆಶ್ಚರ್ಯ ಪಡುವಂತೆ ಮಾಡಿದೆ. 50 ವರ್ಷದೊಳಗಿನ ವ್ಯಕ್ತಿಗಳು ಜಿಮ್ ನಲ್ಲಿ ವ್ಯಾಯಾಮ ಮಾಡಿದ ನಂತರ ಹೃದಯಾಘಾತಕ್ಕೆ ಒಳಗಾಗುತ್ತಿರುವುದರಿಂದ ಅವರು ಜಿಮ್‌ಗೆ ಹೋಗುವ ಮೊದಲು ಅನುಸರಿಸಬೇಕಾದ ಕೆಲವು ಪ್ರಮುಖ ಸೂಚನೆಗಳನ್ನು ಆರೋಗ್ಯ ತಜ್ಞರು ಮುಂದಿಟ್ಟಿದ್ದಾರೆ. ಮೊದಲೇ ಇರುವ ಮಧುಮೇಹ, ಅಧಿಕ ರಕ್ತದೊತ್ತಡ, ಧೂಮಪಾನದ ಇತಿಹಾಸ, ಹೃದ್ರೋಗದ ಕುಟುಂಬದ ಇತಿಹಾಸ ಹೊಂದಿರುವವರು ಜಿಮ್‌ನಲ್ಲಿ ಅತಿಯಾದ ವ್ಯಾಯಾಮ ಮಾಡದಂತೆ ಜಾಗರೂಕರಾಗಿರಬೇಕು. ವ್ಯಾಯಾಮ ಮಾಡುವಾಗ ಆ ವ್ಯಕ್ತಿಯು ಹೆಚ್ಚು ಅಥವಾ ವೇಗವಾಗಿ ವ್ಯಾಯಾಮ ಮಾಡದಿರುವುದು ಅತ್ಯಗತ್ಯ. ಅಚಾತುರ್ಯದ ವ್ಯಾಯಾಮವು ಹೃದಯದ ಮೇಲೆ ಒತ್ತಡವನ್ನು ಉಂಟುಮಾಡಬಹುದು. ಆದ್ದರಿಂದ, ಹೆಚ್ಚು ಮಾಡಿದ ವ್ಯಾಯಾಮವನ್ನೇ ಮಾಡುವುದು ಬೊಜ್ಜಿನ ದೇಹ ಹೊಂದಿರುವುದು, ಯಾವುದೇ ವಿರಾಮವಿಲ್ಲದೆ ಓಡುವುದು ಮತ್ತು ಹೆಚ್ಚು ಆಯಾಸ ಮಾಡುವ ವ್ಯಾಯಾಮ ಮಾಡುವುದು ಇಂಥಾ ಯಾವುದೇ ಚಟುವಟಿಕೆ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಇದಲ್ಲದೆ ಓರ್ವ ವ್ಯಕ್ತಿ ಬಾಲ್ಯದಿಂದಲೂ ವ್ಯಾಯಾಮ ಮಾಡದೇ ಇದ್ದಾರೆ ಆತನ ಫಿಟ್ನೆಸ್ ಮಟ್ಟವನ್ನು ತಿಳಿಯದೆಯೆ ಇದ್ದಕ್ಕಿದ್ದಂತೆ ವ್ಯಾಯಾಮ ಚಟುವಟಿಕೆಯನ್ನು ಕೈಗೊಂಡಾಗ ಕೂಡ ಈ ದುರಂತ ಸಂಭವಿಸುತ್ತದೆ.
Previous Articleಗುರಪ್ಪ ನಾಯ್ಡುಗೆ ಕೆಪಿಸಿಸಿ ಗೇಟ್ ಪಾಸ್.
Next Article ಕರ್ನಾಟಕದಲ್ಲಿ ಮಾನವ ಹಾಲಿನ ಮಾರಾಟ ಮಾಡುವಂತಿಲ್ಲ