ಲ್ಯಾಟ್ವಿಯ ದೇಶ ತನ್ನ ರಾಜಧಾನಿಯಲ್ಲಿ ಸೋವಿಯತ್ ಯುಗದ ವಿವಾದಾತ್ಮಕ ಸ್ಮಾರಕವನ್ನು ಧ್ವಂಸ ಗೊಳಿಸಿದೆ.
ಆ ದೇಶದ ರಾಜಧಾನಿಯಲ್ಲಿ ಸ್ಥಾಪಿಸಲಾಗಿದ್ದ 260-ಅಡಿ ಎತ್ತರದ ಒಬೆಲಿಸ್ಕ್ ಸ್ಮಾರಕವನ್ನು ಅದು ಸೋವಿಯತ್ ಯುಗದ ಚಿಹ್ನೆ ಎನ್ನುವ ಕಾರಣಕ್ಕಾಗಿ ತೆಗೆದುಹಾಕಲಾಗಿದೆ. ಲಾತ್ವಿಯಾ ದೇಶ ಉಕ್ರೇನ್ ದೇಶದೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಈ ರಷ್ಯಾದ ಕುರುಹು ಇರುವ ಸ್ಮಾರಕವನ್ನು ನಾಶಪಡಿಸಿದೆ. ಸೋವಿಯತ್ ಆಳ್ವಿಕೆಯಲ್ಲಿ ಸ್ಥಾಪಿಸಲಾದ ಸುಮಾರು 260 ಅಡಿ ಎತ್ತರದ ಒಬೆಲಿಸ್ಕ್, ಸುಮಾರು ನಾಲ್ಕು ದಶಕಗಳ ಕಾಲ ಬಾಲ್ಟಿಕ್ ರಾಷ್ಟ್ರದ ರಾಜಧಾನಿಯ ಉದ್ಯಾನವನದಲ್ಲಿ ಗೋಪುರವಾಗಿತ್ತು.
ಐದು ಗೋಪುರಗಳು ಮತ್ತು ಐದು-ಬಿಂದುಗಳ ನಕ್ಷತ್ರಗಳನ್ನು ಒಳಗೊಂಡಿರುವ ಈ ಸ್ಮಾರಕವನ್ನು 1985 ರಲ್ಲಿ ಲ್ಯಾಟ್ವಿಯಾದ ರಾಜಧಾನಿ ರಿಗಾದಲ್ಲಿ ಎರಡನೇ ಮಹಾಯುದ್ಧದಲ್ಲಿ ಕೊಲ್ಲಲ್ಪಟ್ಟ ಸೋವಿಯತ್ ಸೈನಿಕರ ಸ್ಮಾರಕವಾಗಿ ನಿರ್ಮಿಸಲಾಗಿತ್ತು. ಲ್ಯಾಟ್ವಿಯವನ್ನು ನಾಜಿ ಜರ್ಮನಿಯು 1941 ರಲ್ಲಿ ವಶಪಡಿಸಿಕೊಂಡಿತು. ಸೋವಿಯತ್ ಪಡೆಗಳು 1944 ರಲ್ಲಿ ನಾಜಿಗಳನ್ನು ಹೊರಹಾಕಿದವು ಮತ್ತು ಸೋವಿಯತ್ ಒಕ್ಕೂಟವು ವಿಸರ್ಜನೆಯಾಗಿ 1991 ರಲ್ಲಿ ತನ್ನ ಸ್ವಾತಂತ್ರ್ಯವನ್ನು ಮರಳಿ ಪಡೆಯುವವರೆಗೂ ಲ್ಯಾಟ್ವಿಯ ಸೋವಿಯತ್ ಆಳ್ವಿಕೆಯಲ್ಲಿ ಉಳಿಯಿತು.
ಲ್ಯಾಟ್ವಿಯದ ಎರಡು ಮಿಲಿಯನ್ ನಿವಾಸಿಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಜನರು ರಷ್ಯನ್ ಭಾಷೆಯನ್ನು ಮಾತ್ರ ಮಾತನಾಡುತ್ತಾರೆ. ಸೋವಿಯತ್ ಆಳ್ವಿಕೆಯ ದಶಕಗಳಲ್ಲಿ ಅನೇಕರು ಆಗಮಿಸಿದರು, ಇತ್ತೀಚಿನ ವರ್ಷಗಳಲ್ಲಿ, ಲ್ಯಾಟ್ವಿಯನ್ ಸರ್ಕಾರವು ಲ್ಯಾಟ್ವಿಯದಲ್ಲಿ ರಷ್ಯನ್ ಭಾಷೆಯ ಪ್ರಸರಣವನ್ನು ಮಿತಿಗೊಳಿಸಲು ಪ್ರಯತ್ನಿಸಿದೆ, ಇತರ ವಿಷಯಗಳ ಜೊತೆಗೆ, ದೇಶದ ಶಾಲೆಗಳಲ್ಲಿ ರಷ್ಯನ್ ಭಾಷೆಯ ಸೂಚನೆಯನ್ನು ಸೀಮಿತಗೊಳಿದೆ.
ನಾಜಿ ಆಳ್ವಿಕೆಯನ್ನು ಸೋವಿಯತ್ ಹೊರಹಾಕಿದ ನೆನಪಿಗಾಗಿ ರಷ್ಯಾದ ಭಾಷಿಕರು ಪ್ರತಿ ಮೇ 9 ರಂದು ಒಬೆಲಿಸ್ಕ್ ಎದುರು ಸೇರುತ್ತಿದ್ದರು. ಇದು ನಗರದಲ್ಲಿ ವಿವಾದಾಸ್ಪದ ಸ್ಥಳವಾಗಿ ಮಾರ್ಪಟ್ಟಿತ್ತು.
ಲ್ಯಾಟ್ವಿಯನ್ ಸಂಸತ್ತು ಒಬೆಲಿಸ್ಕ್ ಅನ್ನು ತೆಗೆದುಹಾಕಲು ಮತ ಚಲಾಯಿಸಿದ ನಂತರ ರಿಗಾದಲ್ಲಿನ ಅಧಿಕಾರಿಗಳು ಮೇ ತಿಂಗಳಲ್ಲಿ ಒಬೆಲಿಸ್ಕ್ ಅನ್ನು ಕೆಡವಲು ಅನುಮೋದನೆ ನೀಡಿದರು.
ಬುಧವಾರ, ರಿಗಾ ಸಿಟಿ ಕೌನ್ಸಿಲ್ ಈ ಸ್ಮಾರಕವು “ಸೋವಿಯತ್ ಒಕ್ಕೂಟ ಮತ್ತು ಸೋವಿಯತ್ ಸೈನ್ಯದ ನಿರಂಕುಶ ಆಡಳಿತದ ಸೈದ್ಧಾಂತಿಕವಾಗಿ ಆವೇಶದ ಸಂಕೇತವಾಗಿದೆ” ಎಂದು ಗಮನಿಸಿದೆ.
“ಸೋವಿಯತ್ ಒಕ್ಕೂಟದ ಉತ್ತರಾಧಿಕಾರಿಯಾಗಿ ರಷ್ಯಾ, ಉಕ್ರೇನ್‌ನಲ್ಲಿ ಮಾನವೀಯತೆಯ ವಿರುದ್ಧ ಅಪರಾಧಗಳನ್ನು ಮಾಡುತ್ತಿರುವ ಸಮಯದಲ್ಲಿ, ಸ್ಮಾರಕದ ಅಸ್ತಿತ್ವವು ಸಮಾಜವನ್ನು ಧ್ರುವೀಕರಣಗೊಳಿಸುವ ಅಪಾಯವನ್ನುಂಟುಮಾಡುತ್ತದೆ” ಎಂದು ಹೇಳಿಕೆಯೊಂದರಲ್ಲಿ ಲ್ಯಾಟ್ವಿಯ ಹೇಳಿದೆ, “ಉಕ್ರೇನ್ ಮೇಲಿನ ದಾಳಿಯನ್ನು ಸಮರ್ಥಿಸುವ ಜನ ಮತ್ತು ಚಿಹ್ನೆಗಳನ್ನು ಲ್ಯಾಟ್ವಿಯ ಅನುಮತಿಸುವುದಿಲ್ಲ ಎಂದು ಹೇಳಲಾಗಿದೆ.