ಬೆಂಗಳೂರು,ಆ.13
ಮತಗಳ್ಳತನ ಕುರಿತ ಮಾಜಿ ಸಚಿವ ಕೆ.ಎನ್.ರಾಜಣ್ಣ ಪ್ರತಿಕ್ರಿಯಿಗೆ ಕಾಂಗ್ರೆಸ್‌ನ ಮತ್ತೊಬ್ಬ ಶಾಸಕ ಧ್ವನಿಗೂಡಿಸಿದ್ದಾರೆ.
ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೊತ್ತನೂರು ಮಂಜು ಸುದ್ದಿಗಾರರೊಂದಿಗೆ ಮಾತನಾಡಿ, ರಾಜಣ್ಣ ಸತ್ಯವಾದ ಮಾತನ್ನೇ ಆಡಿದ್ದಾರೆ, ಆದರೆ, ಅವರು, ನಮ್ಮ ನಾಯಕರ ಹೇಳಿಕೆ ನಂತರ ಈ ರೀತಿ ಬಹಿರಂಗವಾಗಿ ಮಾತನಾಡಬಾರದಿತ್ತು ಎಂದು ಹೇಳಿದರು
ನಾಯಕರ ಹೇಳಿಕೆಗೆ ಬೆಂಬಲ ತೋರಬೇಕು, ಅದರ ಬಗ್ಗೆ ಪ್ರತಿಕ್ರಿಯಿಸಬಾರದಿತ್ತು, ಹಾಗೊಂದು ವೇಳೆ ಪ್ರತಿಕ್ರಿಯಿಸುವುದಾರೆ, ಆ ಪಕ್ಷದಲ್ಲಿ ಇದ್ದಕೊಂಡು ಮಾಡಬಾರದು ಎಂದರು.
ರಾಜಣ್ಣ ಅವರು ಹಿರಿಯರು,ಪರಿಶಿಷ್ಟ ಸಮಾಜಕ್ಕೆ ಸೇರಿದ ನಾಯಕ ಅಂತಹವರನ್ನು ಸಂಪುಟದಿಂದ ವಜಾಗೊಳಿಸಿದ್ದು ಸರಿಯಲ್ಲ. ಏನೇ ತಪ್ಪು ಮಾಡಿದ್ದರೂ ಕರೆಸಿ, ಚರ್ಚಿಸಬಹುದಿತ್ತು, ಮುಂದೆ ಈ ರೀತಿ ಮಾಡದಂತೆ ಬುದ್ಧವಾದ ಹೇಳಬಹುದಿತ್ತು.
ಅದನ್ನು ಹೊರತುಪಡಿಸಿ ವಜಾಗೊಳಿಸುವ ತೀರ್ಮಾನ ಕೈಗೊಳ್ಳಬಾರದಿತ್ತು, ಈ ಕ್ರಮ ನನಗೆ ಸರಿ ಕಾಣಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ
ರಾಜಣ್ಣ ಅವರು ಪರಿಶಿಷ್ಟ ಸಮಯದಾಯಕ್ಕೆ ಸೇರಿದವರಾದರೂ ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದಿದ್ದಾರೆ, ಇದು ಸುಲಭವಲ್ಲ, ನಾನೂ ಅದೇ ರೀತಿ ಜನಪ್ರತಿನಿಧಿಯಾಗಿದ್ದೇನೆ ಎಂದು ಹೇಳಿದರು
Previous Articleಮಾಜಿ ಮಂತ್ರಿ ರಾಜಣ್ಣ ಅವರ ಪ್ಲಾನ್ ಗೊತ್ತಾ ?
Next Article ವಿದೇಶ ವ್ಯಾಸಂಗಕ್ಕೆ ಸರ್ಕಾರದ ಹಸ್ತ