ಬೆಂಗಳೂರು.
ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಪ್ರಕರಣ ಪರಸ್ಪರ ರಾಜಿ ಸಂಧಾನ ದೊಂದಿಗೆ ಇತ್ಯರ್ಥಗೊಂಡಿದೆ
ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರು ದೈವಾಧೀನರಾದ ವೇಳೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಭಕ್ತಾಧಿಗಳು ಆಗಮಿಸುತ್ತಿದ್ದಾಗ ನಡೆದ ಅಹಿತಕರ ಘಟನೆ ಸಂಬಂಧ ಪ್ರಕರಣ ನ್ಯಾಯಾಲದಲ್ಲಿ ಇಂದು ಕಕ್ಷಿದಾರರ ಮಧ್ಯೆ ರಾಜಿಸಂಧಾನದೊಂದಿಗೆ ಇತ್ಯರ್ಥವಾಗಿದೆ.
ನೈಸ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಅವರು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬಂದಿದ್ದ ವೇಳೆ ಕೆಲವರು ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿತ್ತು ಇದೀಗ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಲಾಗಿದೆ.
ಜನಪ್ರತಿನಿಧಿಗಳ ವಿಶೇಷನ್ಯಾಯಾಲಯದ ಮುಂದೆ ಕಕ್ಷಿದಾರರಾದ ನೈಸ್ ಸಂಸ್ಥೆ ಮುಖ್ಯಸ್ಥ ಆಶೋಕ್ ಖೇಣಿ, ಈ ಸಂಜೆ ಪತ್ರಿಕೆ ಸಂಪಾದಕ ಟಿ.ವೆಂಕಟೇಶ್, ವಕೀಲ ದೊರೆರಾಜು ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಡಾ.ಎಚ್.ಎಂ.ಕೃಷ್ಣ, ಮಂಡ್ಯ ಶಾಸಕ ರವಿ ಗಣಿಗ ಸೇರಿದಂತೆ ಇತರರು ಹಾಜರಾಗಿದ್ದರು.
ರಾಜಿಸಂಧಾನಕ್ಕೆ ಎರಡು ಕಡೆಯವರ ಸಮ್ಮತಿ ಇದೆ ಎಂಬುದಾಗಿ ನ್ಯಾಯಾಲಯದ ಗಮನಕ್ಕೆ ತಂದಾಗ, ಜನಪ್ರತಿನಿಧಿ ನ್ಯಾಯಾಲಯದ ನ್ಯಾಯಾಧೀಶರು ಒಪ್ಪಿಗೆ ಸೂಚಿಸಿ ಪ್ರಕರಣ ಇತ್ಯರ್ಥಗೊಳಿಸಿದರು.
ಬಳಿಕ ಎಲ್ಲಾ ಕಕ್ಷಿದಾರರು ನ್ಯಾಯಾಲಯದ ಹೊರಗೆ ನಗುಮುಖದಿಂದ ಹಸ್ತಲಾಘವ ಮಾಡಿದರು.
ಕಳೆದ 2013 ಫೆಬ್ರವರಿ 14ರಂದು ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರು ನಿಧನರಾದಾಗ ಆಸ್ಪತ್ರೆಗೆ ಅಶೋಕ್ ಖೇಣಿ ಭೇಟಿ ನೀಡಿದ್ದ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೂ ಆಸ್ಪತ್ರೆಯಲ್ಲಿದ್ದರು
Previous Articleದಿವಾಕರ್ ಬಾಬು ಕೊಲೆಗೆ ಶ್ರೀ ರಾಮುಲು ಸ್ಕೆಚ್ ಹಾಕಿದ್ದರಾ.?
Next Article ಕಿಚ್ಚ ಸುದೀಪ್ ಗೆ ಪ್ರಶಸ್ತಿ ಬೇಡವಂತೆ

