ಲಂಡನ್ ಸೆ. 5 : ಜಗತ್ತಿನಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಬ್ರಿಟನ್ ಪ್ರಧಾನಿ ಹುದ್ದೆಯ ಚುನಾವಣೆ ಪ್ರಕ್ರಿಯೆಗೆ ತೆರೆ ಬಿದ್ದಿದೆ.ಭಾರತೀಯ ಸಂಜಾತರೊಬ್ಬರು ಈ ಉನ್ನತ ಹುದ್ದೆಗೇರಬಹುದೆಂಬ ನಿರೀಕ್ಷೆ ಹುಸಿಯಾಗಿದೆ.
ಬ್ರಿಟನ್ ನ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ ಆಗಿದ್ದಾರೆ.ಇಲ್ಲಿಯವರೆಗೆ ಬ್ರಿಟನ್ ನ ವಿದೇಶಾಂಗ ಸಚಿವರಾಗಿದ್ದ ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಜ್ ಟ್ರಸ್ ತಮ್ಮ ಪ್ರತಿಸ್ಪರ್ಧಿ ರಿಷಿ ಸುನಕ್ ಅವರನ್ನು ಸೋಲಿಸಿ ನೂತನ ಪ್ರಧಾನಿ ಆಗುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ಫೊಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿಯ ಪತಿ, ಬ್ರಿಟನ್ನ ಸಂಸದ ರಿಷಿ ಸುನಕ್ ಮತ್ತು ಲಿಜ್ ಟ್ರಸ್ ಮಧ್ಯೆ ತೀವ್ರ ಪೈಪೋಟಿ ಇದ್ದು, ಕಳೆದ ಕೆಲವು ವಾರಗಳಿಂದ ಹಣಾಹಣಿ ನಡೆಯುತ್ತಿತ್ತು. ಪ್ರಧಾನಿಯಾಗುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ನಡೆಸಿದ್ದರೂ ಅದು ಸಫಲವಾಗದ್ದರಿಂದ ರಿಷಿ ಪರಾಭವಗೊಂಡಿದ್ದಾರೆ.
ಈ ಕುರಿತು ಅಧಿಕೃತ ಘೋಷಣೆ ಇನ್ನೇನು ಆಗಲಿದ್ದು, 47 ವರ್ಷದ ಲಿಜ್ ಟ್ರಸ್ ಬ್ರಿಟನ್ನ ಮೂರನೇ ಮಹಿಳಾ ಪ್ರಧಾನಿ ಎನಿಸಿಕೊಂಡಿದ್ದಾರೆ.