ರೇಣುಕಾಸ್ವಾಮಿ ಕೊಲೆ ಬಳಿಕ ಮನೆಯ ಸೂತಕ ಕಳೆದು, ನಗವಿನ ಹೊಳೆ ಹರಿಸೋಕೆ ಮರಿ ರೇಣುಕಾಸ್ವಾಮಿ ಬಂದಿದ್ದಾನೆ. ಹೌದು 8 ತಿಂಗಳ ಹಿಂದೆ ರೇಣುಕಾಸ್ವಾಮಿ ಹತ್ಯೆಯಾದಾಗ ಪತ್ನಿ ಸಹನಾ ಗರ್ಭಿಣಿಯಾಗಿದ್ರು. 5 ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ರು. ಇಂದು ಮಗುವಿನ ಜೊತೆ ರೇಣುಕಾಸ್ವಾಮಿ ಸತಿ ಗಂಡನ ಮನೆಗೆ ಬಂದ್ರು. ಮಾವ ಸಾಗರ್ ಅಳಿಯನ ತೊಟ್ಟಿಲು ಹೊತ್ತು ತಂದ್ರು. ಸಹನಾ ಜತೆ ಬಂದ ಮೊಮ್ಮಗನಿಗೆ ಅತ್ತೆ ಸುಚೇತಾ ಆರತಿ ಎತ್ತಿ, ತೊಟ್ಟಿಲು ತೂಗಿ ಗ್ರ್ಯಾಂಡ್ ವೆಲ್ ಕಂ ಮಾಡಿದ್ರು.
ಮನೆಯಲ್ಲಿ ತೊಟ್ಟಿಲಿಗೆ ಹೂಗಳಿಂದ ಸಿಂಗಾರ ಮಾಡಿ, ಸಂಪ್ರದಾಯದಂತೆ ತೊಟ್ಟಿಲಿಗೆ ಪೂಜೆ ಸಲ್ಲಿಸಲಾಯ್ತು. ರೇಣುಕಾಸ್ವಾಮಿ ತಂಗಿ ಸುಚೇ ಅಳಿಯನ ಕಿವಿಯಲ್ಲಿ ಶಶಿಧರ್ ಸ್ವಾಮಿ ಅಂತ ಹೇಳುವ ಮೂಲಕ ನಾಮಕರಣ ಮಾಡಿದ್ರು. ರೇಣುಕಾಸ್ವಾಮಿ ತಂದೆ ಶಿವನಗೌಡರ್ ಹಾಗೂ ತಾಯಿ ರತ್ನಪ್ರಭಾ ಭಾವುಕರಾದ್ರು. ಪುತ್ರನ ಸಾವು ನೆನೆದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ರು
Previous Articleರಾಜ್ಯ ಕಾಂಗ್ರೆಸ್ ನಾಯಕರಿಗೆ ಜಯಚಂದ್ರ ಕಿವಿಮಾತು
Next Article ಮಗ್ಗಿ ಬಾರದ ಬಿಜೆಪಿ ನಾಯಕರು