ಬೆಂಗಳೂರು,ಜ.16-
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕುಖ್ಯಾತ ರೌಡಿ ಗಣಿ ಅಲಿಯಾಸ್ ಜಲಕ್ ನನ್ನು ಬಾಗಲೂರು ಬಳಿಯ ಅಪಾರ್ಟ್‌ಮೆಂಟ್ ನಲ್ಲಿ ಗುಂಡು ಹಾರಿಸಿ ಕೊಲೆ ಮಾಡಿ ಶವವನ್ನು ತಮಿಳುನಾಡಿನಲ್ಲಿ ಸುಟ್ಟು ಹಾಕಿರುವ ಭಯಾನಕ ಘಟನೆ ನಡೆದಿದೆ.
ವೃತ್ತಿ ವೈಷಮ್ಯ, ವೈಯಕ್ತಿಕ ದ್ವೇಷ ಸೇರಿದಂತೆ ಹಲವಾರು ಕಾರಣಗಳಿಂದ ಗಣಿ ಅಲಿಯಾಸ್ ಜಲಕ್ ನನ್ನು ಎದುರಾಳಿ ರೌಡಿ ಬ್ರಿಜೇಶ್ ಎಂಬಾತ ಗುಂಡು ಹಾರಿಸಿ ಕೊಲೆ ಮಾಡಿ ಶವ ಸುಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಬಾಗಲೂರಿನ ಅಪಾರ್ಟ್ ಮೆಂಟ್ ನಲ್ಲಿ ಗಣಿ ಅಲಿಯಾಸ್ ಜಲಕ್ ನೆಲೆಸಿರುವುದನ್ನು ಪತ್ತೆ ಹಚ್ಚಿದ
ರೌಡಿ ಬ್ರಿಜೇಶ್ ಆತನ ಮೇಲೆ ಕಂಟ್ರಿಮೇಟ್ ಪಿಸ್ತೂಲ್ ನಿಂದ 2 ಸುತ್ತು ಗುಂಡು ಹಾರಿಸಿದ್ದಾನೆ. ಇದರಿಂದ ಆತ ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾನೆ. ಇದಾದ ಬಳಿಕ ಮೃತದೇಹ ವಿಲೇವಾರಿ ಮಾಡಲು ತಂತ್ರ ರೂಪಿಸಿದ ಆತ ತನ್ನ ಸಹಚರರನ್ನು ಸ್ಥಳಕ್ಕೆ ಕರೆಸಿಕೊಂಡು ಶವ ಸಾಗಿಸಿ ತಮಿಳುನಾಡಿನ ನಿರ್ಜನ ಪ್ರದೇಶದಲ್ಲಿ ಶವ ಸುಟ್ಟುಹಾಕಿದ್ದ.
ಈ ನಡುವೆ ಸಂಪಿಗೆಯಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿ ಗಣಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ದಾಖಲಿಸಿಕೊಂಡು ಎಲ್ಲಾ ಆಯಾಮಗಳಿಂದಷತನಿಖೆ ಕೈಗೊಂಡ ಪೊಲೀಸರಿಗೆ ಪ್ರಕರಣ ಬೆಳಕಿಗೆ ಬಂದಿದೆ.,ಈ ಸಂಬಂಧ ಕೆಲವರನ್ನು ಬಂಧಿಸಿದ್ದು ಕೃತ್ಯ ನಡೆಸಿದ ರೌಡಿ ಬ್ರಿಜೇಶ್ ಪತ್ತೆಗೆ ಶೋಧ ಕೈಗೊಂಡಿದ್ದಾರೆ.