ಬೆಂಗಳೂರು, ಮಾ.19 –
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ರಾಜ್ಯ ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿ ಆದರೆ ಇಂತಹ ವ್ಯಕ್ತಿಯೇ ತಮ್ಮ ತವರು ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಲಂಚದ ಹಾವಳಿ ಬಗ್ಗೆ ಪ್ರಸ್ತಾಪಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮೈಸೂರಿನಲ್ಲಿ ಬಗರ್ ಹುಕುಂ ಸಾಗುವಳಿ ಚೀಟಿ ಪಡೆದಿರುವ ಫಲಾನುಭವಿ ರೈತರುಗಳಿಗೆ ತಮ್ಮ ಜಮೀನಿನ ಖಾತೆ ಮಾಡಿಕೊಡಲು ಅಧಿಕಾರಿಗಳು ಲಂಚ್ ಪಡೆಯುತ್ತಿದ್ದಾರೆ ಎಂದು ವಿಧಾನ ಪರಿಷತ್ತಿನಲ್ಲಿ ಆಪಾದಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ಮತ್ತು ಇತರೆ ದಾಖಲಾತಿ ಮಾಡಿಕೊಡುವ ಸಂಬಂಧ ಪ್ರಶ್ನೆ ಕೇಳಿದ ಯತೀಂದ್ರ ಸಿದ್ದರಾಮಯ್ಯ ಅವರು, ಮೈಸೂರಿನಲ್ಲಿ ಸಾಗುವಳಿ ಚೀಟಿ ಇರುವವರಿಗೆ ದಾಖಲಾತಿ ಮಾಡಿಕೊಡುತ್ತಿಲ್ಲ ಎಂದು ಆಪಾದಿಸಿದರು
ಫಲಾನುಭವಿಗಳು ಖಾತೆ ಮಾಡಿ ಕೊಡುವಂತೆ ಕೋರಿ ಅರ್ಜಿ ಹಾಕಿ, ಹಣ ಕಟ್ಟಿದ ಮೇಲೆಯೂ ಖಾತೆ ಮಾಡಿಕೊಡುತ್ತಿಲ್ಲ. ಮೈಸೂರಿನಲ್ಲಿ ಈ ವಿಚಾರವಾಗಿ ಅಕ್ರಮಗಳು ನಡೆಯುತ್ತಿವೆ ಎಂದು ತಮ್ಮ ಸರ್ಕಾರದ ವಿರುದ್ಧವೇ ಮಾತನಾಡಿದರು
ಫಲಾನುಭವಿ ರೈತರು ತಮ್ಮ ಜಮೀನಿನ ಖಾತೆ ಮಾಡಿಸಲು ಲಂಚ ಕೊಡುವ ಪರಿಸ್ಥಿತಿ ಬಂದಿದೆ. 30-35 ವರ್ಷಗಳಿಂದ ಖಾತೆ ಆಗಿಲ್ಲ. ಎಂದು ಅಳಲು ತೋಡಿಕೊಂಡ ಅವರು ಸಾಗುವಳಿ ಚೀಟಿ ಕೊಟ್ಟವರಿಗೆ ಕೂಡಲೇ ಖಾತೆ ಮಾಡಿಕೊಡಬೇಕು. ಖಾತೆ ಮಾಡಿ ಕೊಡುವುದಕ್ಕೆ ಒಂದು ಕಾಲ ಮಿತಿಯನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣಭೈರೇಗೌಡ, ಖಾತೆ ಮಾಡಿಕೊಡಲು ಲಂಚ ಕೇಳಿದ ದೂರು ಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು.
ಸಾಗುವಳಿ ಚೀಟಿ ಕೊಟ್ಟವರಿಗೆ ಇನ್ನೂ ಖಾತೆ ಆಗಿಲ್ಲ ಅನ್ನೋದು ಸತ್ಯ. 20-30 ವರ್ಷಗಳಿಂದ ಸಾಗುವಳಿ ಚೀಟಿ ಇದ್ದರೂ ಖಾತೆ ಮಾಡಿಕೊಡಲು ಆಗಿಲ್ಲ. ನೈಜವಾಗಿ ಇರುವ ಕೇಸಲ್ಲಿ ಆದಷ್ಟು ಬೇಗ ಖಾತೆ ಮಾಡಿಕೊಡುತ್ತೇವೆ. ಅಧಿಕಾರಿಗಳಿಗೂ ಖಾತೆ ಮಾಡಲು ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು
Previous Articleಬಿಜೆಪಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಜನಾರ್ದನ ರೆಡ್ಡಿ?
Next Article ಬಿರಿಯಾನಿ ತಿಂದವರು ಕೊಟ್ಟಿದ್ದೇನು..?

