ಬೆಂಗಳೂರು.
ವಕೀಲ್ ಸಾಬ್ ಎಂದೆ ಪರಿಚಯಿಸಲ್ಪಡುವ ಬಿಗ್ ಬಾಸ್ ರಿಯಾಲಿಟಿ ಶೋ ನ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಅವರನ್ನು ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ರಾತ್ರಿ ಫೇಸ್ ಬುಕ್ ಲೈವ್ ನಲ್ಲಿ ಬಂದಿದ್ದ ಲಾಯರ್ ಜಗದೀಶ್ ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ಆಪಾದಿಸಿದ್ದರು.
ಮಾದಕ ವ್ಯಸನಿಗಳ ಗುಂಪೊಂದು ತಮ್ಮ ಮೇಲೆ ದಾಳಿ ನಡೆಸಿದೆ ಈ ರಾಜ್ಯದಲ್ಲಿ ಏನು ನಡೆಯುತ್ತಿದೆ. ಕರ್ನಾಟಕ ಗುಂಡಾ ರಾಜ್ಯವಾಗುತ್ತಿದೆ ದುಷ್ಕರ್ಮಿಗಳು ನನ್ನ ಮೇಲೆ ಮಾತ್ರವಲ್ಲ ನನ್ನ ಮಗನ ಮೇಲೂ ಹಲ್ಲೆ ಮಾಡಿದ್ದಾರೆ. ನಮ್ಮ ಕುಟುಂಬಕ್ಕೆ ಅಪಾಯವಿದೆ ಎಂದು ಹೇಳಿ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದರು.
ಆದರೆ ಇದೀಗ ಪೊಲೀಸರು ಅವರನ್ನೇ ಬಂಧಿಸಿದ್ದಾರೆ ಜೊತೆಗೆ ಅವರ ಗನ್ ಮ್ಯಾನ್ ನನ್ನು ಕೂಡ ವಶಕ್ಕೆ ಪಡೆದಿದ್ದಾರೆ.
ಕೊಡಿಗೇಹಳ್ಳಿಯಲ್ಲಿ ಜಗದೀಶ್ ಅವರಿಗೆ ಸೇರಿದ ಕಾಂಪ್ಲೆಕ್ಸ್ ಇದೆ. ಇದೇ ರಸ್ತೆಯಲ್ಲಿ ಸ್ಥಳೀಯರು ಮತ್ತು ನಟ ದರ್ಶನ್ ಅಭಿಮಾನಿಗಳು ಅಣ್ಣಮ್ಮ ದೇವಿಯನ್ನು ಕೂರಿಸಿ ಊರ ಹಬ್ಬ ಮಾಡುತ್ತಿದ್ದರು.
ಊರ ಹಬ್ಬ ಮಾಡಲು ರಸ್ತೆಗೆ ಅಡ್ಡಲಾಗಿ ಪೆಂಡಾಲ್ ಹಾಕಲಾಗಿದೆ ಇದರಿಂದ ಜನಸಾಮಾನ್ಯರ ಓಡಾಟಕ್ಕೆ ತೊಂದರೆಯಾಗಿದೆ ಎಂದು ಹೇಳಿದ ಜಗದೀಶ್ ಈ ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಇದಾದ ನಂತರ ಅಣ್ಣಮ್ಮ ಕೂರಿಸಿದ ಸಂಘಟಕರು ಲಾಯರ್ ಜಗದೀಶ್ ಅವರ ಬಳಿ ತೆರಳಿ ಪೊಲೀಸರಿಗೆ ದೂರು ನೀಡಿದ ಕುರಿತಂತೆ ಪ್ರಶ್ನೆ ಮಾಡಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದಿತ್ತು.
ಇದಾದ ನಂತರ ಜಗದೀಶ್ ರವರು ಜಾಲತಾಣದಲ್ಲಿ ತಮಗಾದ ಅನುಭವವನ್ನು ವಿವರಿಸಿ ದರ್ಶನ್ ಅಭಿಮಾನಿಗಳ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು ಇದರಿಂದ ಕೆರಳಿದ ಕೆಲವು ಕಳೆದ ರಾತ್ರಿ ಜಗದೀಶ್ ಅವರ ಮನೆಗೆ ತೆರಳಿ, ಈ ಕುರಿತಂತೆ ಪ್ರಶ್ನೆ ಮಾಡಿದ್ದಾರೆ ಆಗ ಜಗದೀಶ್ ಮತ್ತು ಗುಂಪಿನ ನಡುವೆ ಘರ್ಷಣೆ ನಡೆದಿದೆ. ಅದನ್ನು ತಡೆಯಲು ಬಂದ ಜಗದೀಶ್ ಅವರ ಗನ್ ಮ್ಯಾನ್ ಕೆಲವರ ಮೇಲೆ ಹಲ್ಲೆ ಮಾಡಿದ್ದಾರೆ, ಇದರಿಂದ ಕೆರಳಿದ ಉದ್ರಿಕ್ತರು ಜಗದೀಶ್ ಅವರಿಗೆ ಸೇರಿದ ಕಾರನ್ನು ಧ್ವಂಸಗೊಳಿಸಿದ್ದಾರೆ.
ಆ ಬಳಿಕ ಜಗದೀಶ್ ಅವರ ಗನ್ ಮ್ಯಾನ್ ತಮ್ಮ ಬಳಿ ಇದ್ದ ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಈ ಸಂಬಂಧ ಕೊಡಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಉತ್ತರ ಪ್ರದೇಶದಲ್ಲಿ ಬಳಸಲು ಲೈಸೆನ್ಸ್ ಪಡೆದಿರುವ ಗನ್ ನಿಂದ ಬೆಂಗಳೂರಿನಲ್ಲಿ ಗುಂಡು ಹಾರಿಸಲಾಗಿದೆ ಎಂಬ ಆರೋಪದಲ್ಲಿ ಪೊಲೀಸರು ಇವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ
Previous Articleಮೈಕ್ರೋ ಫೈನಾನ್ಸ್ ಗಳಿಗೆ ಮೂಗುದಾರ
Next Article ಆಟೋ ಚಾಲಕ ಅರೆಸ್ಟ್ ಯಾಕೆ ಗೊತ್ತಾ