ಬೆಲ್ಜಿಯಂನಲ್ಲಿ ಲೈಂಗಿಕ ಕಾರ್ಯಕರ್ತರು ಈಗ ಬೇರೆ ನೌಕರರಂತೆ ಉದ್ಯೋಗ ಒಪ್ಪಂದಗಳಿಗೆ ಅರ್ಹರಾಗಿದ್ದಾರೆ. ಇದು ಅನಾರೋಗ್ಯದ ಸಂದರ್ಭದಲ್ಲಿ ವೇತನ ಮತ್ತು ಹೆರಿಗೆ ರಜೆಯನ್ನು ಒಳಗೊಂಡಿರುತ್ತದೆ. ಇದು ಈ ತಿಂಗಳು ಜಾರಿಗೆ ಬಂದ ದೊಡ್ಡ ಕಾನೂನಾಗಿದೆ.
ಬೆಲ್ಜಿಯನ್ ಶಾಸಕರು ಮೇ ತಿಂಗಳಲ್ಲಿ ಅಂಗೀಕರಿಸಿದ ಕಾನೂನಿನಡಿಯಲ್ಲಿ, ಅಂತಹ ಒಪ್ಪಂದಕ್ಕೆ ಸಹಿ ಹಾಕುವ ಲೈಂಗಿಕ ಕಾರ್ಯಕರ್ತರು ಇತರ ಉದ್ಯಮಗಳಲ್ಲಿ ಉದ್ಯೋಗದಲ್ಲಿರುವ ಕಾರ್ಮಿಕರಿಗೆ ಸಾಮಾನ್ಯವಾಗಿ ಅನ್ವಯಿಸುವ ಆರೋಗ್ಯ ವಿಮೆ ಮತ್ತು ನಿರುದ್ಯೋಗ ಪ್ರಯೋಜನಗಳಂತಹ ಇತರ ಹಕ್ಕುಗಳು ಮತ್ತು ರಕ್ಷಣೆಗಳನ್ನು ಪಡೆಯಲು ಅರ್ಹರಾಗುತ್ತಾರೆ.
“ಇದು ಲೈಂಗಿಕ ಕಾರ್ಯಕರ್ತರಿಗೆ (ಇತರ ಉದ್ಯೋಗಿಗಳೊಂದಿಗೆ) ಸಮಾನ ಹಕ್ಕುಗಳನ್ನು ನೀಡುವ ಮತ್ತು ಅವರ ಉದ್ಯೋಗದಲ್ಲಿ ಅಂತರ್ಗತವಾಗಿರುವ ಅಪಾಯಗಳಿಂದ ಅವರನ್ನು ರಕ್ಷಿಸುವ ಮೊದಲ ಸಮಗ್ರ ಶಾಸನದ ಚೌಕಟ್ಟಾಗಿದೆ ಮತ್ತು ಇದು ವಿಶ್ವದಲ್ಲಿಯೇ ಮೊದಲನೆಯದು” ಎಂದು ಬೆಲ್ಜಿಯನ್ ಸೆಕ್ಸ್ ವರ್ಕರ್ಸ್ ಒಕ್ಕೂಟದ ನಿರ್ದೇಶಕ ಡಾನ್ ಬೌವೆನ್ಸ್ ಹೇಳಿದ್ದಾರೆ. ಲೈಂಗಿಕ ವೃತ್ತಿಯಲ್ಲಿರುವ ವ್ಯಕ್ತಿಗಳ ಬಗ್ಗೆ ಈ ಮಟ್ಟದ ಕಾಳಜಿ ವಹಿಸಿದ ಪ್ರಥಮ ದೇಶವಾಗಿ ಯೂರೋಪಿನ ಬೆಲ್ಜಿಯಂ ಹೊರಹೊಮ್ಮಿದೆ.