ಬೆಂಗಳೂರು,ಜ.7-ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸಹೋದರಿ ಹೆಸರಲ್ಲಿ ಹಲವು ವಂಚನೆ ನಡೆಸಿರುವ ಐಶ್ವರ್ಯ ಗೌಡ
ಹೆಸರಿನಲ್ಲಿ ನೋಂದಣಿಯಾಗಿರುವ ಐಷಾರಾಮಿ ಬೆನ್ಜ್ ಕಾರನ್ನು ಶಾಸಕ ವಿನಯ್ ಕುಲಕರ್ಣಿ ಬಳಕೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ.
ಐಶ್ವರ್ಯ ಗೌಡ ಹೆಸರಿನಲ್ಲಿ ನೋಂದಣಿಯಾಗಿರುವ ಐಷಾರಾಮಿ ಬೆನ್ಜ್ ಕಾರನ್ನು ಬಳಸಿದ ವಿಚಾರವು ತನಿಖೆಯಲ್ಲಿ ಬೆಳಕಿಗೆ ಬರುತ್ತಿದ್ದಂತೆ ಶಾಸಕ ವಿನಯ್ ಕುಲಕರ್ಣಿ ಅವರಿಗೆ ನೋಟಿಸ್ ನೀಡಿ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಈಗಾಗಲೇ ಒಂದು ಬಿಎಂಡಬ್ಲ್ಯೂ , ಆಡಿ ಹಾಗೂ ಫಾರ್ಚೂನರ್ ಕಾರನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ಐಶ್ವರ್ಯ ಬಳಿ ಇನ್ನೂ ಎರಡು ಬೆನ್ಜ್ ಕಾರುಗಳಿದ್ದವು. ಈ ಎರಡು ಬೆನ್ಜ್ ಕಾರುಗಳ ಬಗ್ಗೆ ಐಶ್ವರ್ಯ ಇನ್ನೂ ಬಾಯಿಬಿಟ್ಟಿಲ್ಲ.
ವಿಚಾರಣೆಯಲ್ಲಿ ನನಗೆ ಗೊತ್ತಿಲ್ಲ ಎಂದು ಐಶ್ವರ್ಯ ಹೇಳುತ್ತಿರುವುದರಿಂದ ಎರಡು ಬೆನ್ಜ್ ಕಾರುಗಳ ಮೂಲದ ಬಗ್ಗೆ ಪೊಲೀಸರು ತನಿಖೆಯನ್ನು ಕೈಗೊಂಡಾಗ ಎರಡರಲ್ಲಿ ಒಂದು ಬೆನ್ಜ್ ಕಾರನ್ನು ವಿನಯ್ ಕುಲಕರ್ಣಿ ಬಳಸುತ್ತಿರುವುದು ಗೊತ್ತಾಗಿದೆ.
ಐಶ್ವರ್ಯ ಗೌಡ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಶ್ವಥ್ ಗೌಡ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ 5ನೇ ಆರೋಪಿಯಾಗಿದ್ದಾನೆ. ವಿನಯ್ ಕುಲಕರ್ಣಿಯ ಆಪ್ತನಾಗಿದ್ದ ಅಶ್ವಥ್ ಗೌಡ ಐಶ್ವರ್ಯಗೆ ಚಾಲಕನಾಗಿದ್ದು ಹೇಗೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.
ಈ ಕಾರಣಕ್ಕಾಗಿ ಐಶ್ವರ್ಯ ಗೌಡ ದಂಪತಿಯೊಂದಿಗೆ ಸಂಬಂಧ, ವ್ಯವಹಾರ ಕುರಿತು ಪೊಲೀಸರು ವಿನಯ್ ಕುಲಕರ್ಣಿ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇಬ್ಬರಿಗೂ ಪರಿಚಯ:
ವಂಚನೆ ಪ್ರಕರಣದ ಆರೋಪಿಗಳಾಗಿರುವ ಐಶ್ವರ್ಯ ಗೌಡ ದಂಪತಿ ಹಾಗೂ ದೂರುದಾರೆ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿ ಮಾಲಕಿ ವನಿತಾ ಐತಾಳ್‌ಗೆ ವಿನಯ್ ಕುಲಕರ್ಣಿ ಚಿರಪರಿತರಾಗಿದ್ದಾರೆ. ವಂಚನೆ ಪ್ರಕರಣ ದಾಖಲಾಗುವ ಮುನ್ನ ಐಶ್ವರ್ಯ ಗೌಡ ಮತ್ತು ದೂರುದಾರೆ ವನಿತಾ ಐತಾಳ್ ಅವರನ್ನು ವಿನಯ್ ಕುಲಕರ್ಣಿ ಯಶವಂತಪುರದಲ್ಲಿರುವ ಖಾಸಗಿ ಹೊಟೇಲೊಂದರಲ್ಲಿ ಭೇಟಿ ಮಾಡಿ ಸಂಧಾನ ನಡೆಸಲು ಯತ್ನಿಸಿದ್ದರು.
ಐಶ್ವರ್ಯ ಗೌಡ ಮತ್ತು ವನಿತಾ ಐತಾಳ್ ಸಹ ಮಾಧ್ಯಮಗಳ ಜೊತೆ ಮಾತನಾಡುವಾಗ ವಿನಯ್ ಕುಲಕರ್ಣಿ ನಮಗೆ ಪರಿಚಯ ಇರುವುದಾಗಿ ಹೇಳಿಕೊಂಡಿದ್ದರು. ಯಶವಂತಪುರದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿ ಇಬ್ಬರನ್ನೂ ಕೂರಿಸಿ ಬುದ್ದಿವಾದ ಹೇಳಿದ್ದಾಗಿಯೂ ಐಶ್ವರ್ಯ ಗೌಡ ಹಾಗೂ ವನಿತಾ ಐತಾಳ್ ತಿಳಿಸಿದ್ದರು.
ವಂಚಕಿ ಐಶ್ವರ್ಯಾ ಗೌಡನಿಗೂ ವಿನಯ್ ಕುಲಕರ್ಣಿ ಗೂ ಏನು ನಂಟು
Previous Articleಡಿ.ಕೆ.ಸುರೇಶ್ ಸೋದರಿ ಎಂದು ಸ್ತ್ರೀ ರೋಗ ತಜ್ಞರಿಗೂ ವಂಚನೆ
Next Article ನಕ್ಸಲ್ ಮುಕ್ತವಾಗಲಿದೆ ಕರ್ನಾಟಕ