ಬೆಂಗಳೂರು,ಏ.30- ಬಿಗ್ಬಾಸ್ ಸ್ಪರ್ಧಿ, ವಕೀಲ ಜಗದೀಶ್ 93 ದಿನಗಳ ಜೈಲು ಶಿಕ್ಷೆ ಅನುಭವದ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಜಗದೀಶ್, ತಮ್ಮ ಬಂಧನಕ್ಕೆ ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆಯನ್ನು ನೇರ ಹೊಣೆ ಮಾಡಿದ್ದಾರೆ.
ಕಳೆದ ಜನವರಿ 24ರಂದು ಬಂಧನವಾದ ದಿನ ಜಗದೀಶ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅನ್ನು ಸಹ ಹಂಚಿಕೊಂಡಿದ್ದರು. ಇದೀಗ 93 ದಿನಗಳ ಬಳಿಕ ಅವರು ಜೈಲಿಂದ ಹೊರಬಂದಿದ್ದಾರೆ.
ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜಗದೀಶ್, ಹಲವು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಧೀರ ಹೋರಾಟ ನಡೆಸುತ್ತಿರುವ ಹೋರಾಟಗಾರ ನಾನು.
ಪಿಎಸ್ ಐ ಹಗರಣವನ್ನು ಬಯಲು ಮಾಡಿ ಎಡಿಜಿಪಿ ಅಮೃತಪಾಲ್ ಅವರನ್ನು ಜೈಲಿಗೆ ಕಳಿಸಿದ್ದು ನಮ್ಮ ತಂಡ, ದೊಡ್ಡ ರಾಜಕಾರಣಿಗಳ ರಾಸಲೀಲೆ ಬಹಿರಂಗಪಡಿಸಿದ್ದು , ರವಿ ಚೆನ್ನಣ್ಣನವರ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದು , ಟ್ರಾಫಿಕ್ ಟೋವಿಂಗ್ ಸಿಸ್ಟಂ ಅನ್ನು ನಿಲ್ಲಿಸಿದ್ದು , ಕೊಡಿಗೇಹಳ್ಳಿ ಸುತ್ತಮುತ್ತ ಡ್ರಗ್ಸ್ ವಿರುದ್ಧ ಹೋರಾಟ ನಡೆಸಿದ್ಧು , ಇವೆಲ್ಲವೂ ನನ್ನ ಹೋರಾಟದ ಭಾಗ’ ಎಂದಿದ್ದಾರೆ ಜಗದೀಶ್.
ಈ ಧೈರ್ಯದ ಹೋರಾಟವನ್ನು ಸಹಿಸದ ಭ್ರಷ್ಟ ರಾಜಕೀಯ ಮತ್ತು ಪೊಲೀಸ್ ವ್ಯವಸ್ಥೆ, ನನ್ನ ಮತ್ತು ನನ್ನ ಮಗನ ವಿರುದ್ಧ ಸಂಚು ರೂಪಿಸಿ, ಜ.25 ರಂದು ಸ್ಥಳಿಯ ಪುಂಡರಿಂದ ನನಗೆ ಮಾರಣಾಂತಿಕ ಹಲ್ಲೆ ನಡೆಸಿ, ಅಕ್ರಮವಾಗಿ ಜೈಲಿಗೆ ಕಳುಹಿಸಲಾಗಿತ್ತು. ಇವತ್ತಿಗೆ 93 ದಿನಗಳ ನಂತರ ನನಗೆ ನ್ಯಾಯ ಸಿಕ್ಕಿದೆ. ಜಾಮೀನು ಲಭಿಸಿದೆ. ನ್ಯಾಯಕ್ಕಾಗಿ ನನ್ನ ಹೋರಾಟ ಇನ್ನೂ ಜೀವಂತವಿದೆ, ನಾನು ಶರಣಾಗುವುದಿಲ್ಲ’ ಎಂದಿದ್ದಾರೆ
Previous ArticleCM ವಿರುದ್ಧ ರೌಡಿ ಶೀಟ್ ತೆರೆಯಬೇಕಾ.?
Next Article ಪಾಕಿಸ್ತಾನ್ ಜಿಂದಾಬಾದ್ ಎಂದವನಿಗೆ ಏನಾಯ್ತು ಗೊತ್ತಾ ?

2 ಪ್ರತಿಕ್ರಿಯೆಗಳು
DГ©bloquez des possibilitГ©s infinies au Betano Casino https://betanogame.org/fr/. Profitez d’un gГ©nГ©reux bonus de 500 € et faites tourner les rouleaux des derniers succГЁs. DГ©pГґts rapides, retraits instantanГ©s et sГ©curitГ© de premier ordre – Betano a tout.
Entre agora no Mostbet e comece com 125% a mais + 200 rodadas de presente – https://mostbetpt.pro/ , Jogue no Mostbet e descubra por que tantos brasileiros escolhem este cassino .