ಬೆಂಗಳೂರು,ಜು.15-
ಮಂತ್ರಿಯೊಬ್ಬರ ರಾಜೀನಾಮೆ ಹಾಗೂ ಹಲವರ ಬಂಧನದ ಮೂಲಕರಾಜ್ಯ ರಾಜಕಾರಣದಲ್ಲಿ ಕೋಲಾಹವನ್ನೇ ಸೃಷ್ಟಿಸಿರುವ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿ ಲೂಟಿ ಮಾಡಲು ನಕಲಿ ಹುದ್ದೆಯನ್ನೇ ಸೃಷ್ಟಿಸಲಾಗಿದೆ.
ಹಣಕಾಸಿನ ಅಕ್ರಮ ವಹಿವಾಟಿನ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಸ್ತಿತ್ವದಲ್ಲಿಲ್ಲದೇ ಇರುವ ವ್ಯಕ್ತಿಯನ್ನು ನೇಮಕ ಮಾಡಿರುವ ಅಂಶಗಳನ್ನು ಪತ್ತೆ ಹಚ್ವಿದ್ದಾರೆ
ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಬಗೆದಷ್ಟು ಬಯಲಾಗುತ್ತಿದ್ದು,ಕೋಟ್ಯಾಂತರ ರೂಪಾಯಿ ಲೂಟಿ ಮಾಡಲು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪದ್ಮನಾಭ ಅವರು ನಕಲಿ ವ್ಯಕ್ತಿಯನ್ನೇ ಸೃಷ್ಟಿಸಿ ನಿಗಮದಲ್ಲಿ ಹುದ್ದೆ ಸಹ ನೀಡಿರುವುದು ಬೆಳಕಿಗೆ ಬಂದಿದೆ.ಈ ನಕಲಿ ವ್ಯಕ್ತಿಯ ಹೆಸರಿನಲ್ಲಿ 45 ಕೋಟಿ ರೂ ಹಣ ವ್ಯವಹಾರ ಮಾಡಲಾಗಿದೆ. ಈ ವಿಚಾರ ಪತ್ತೆಯಾಗುತ್ತಿದ್ದಂತೆ ಇಡಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ
ಲೂಟಿಗಾಗಿ ನಕಲಿ ಹುದ್ದೆ:
ಕೋಟ್ಯಾಂತರ ಹಣ ಲೂಟಿ ಹೊಡೆಯಲು ಪದ್ಮನಾಭ್ ಜ್ಯೂನಿಯರ್ ಅಕೌಂಟೆಂಟ್ ಎಂಬ ಹುದ್ದೆಯನ್ನು ಸೃಷ್ಟಿಸಿ ಆ ಹುದ್ದೆಗೆ ಶಿವಕುಮಾರ್ ಎಂಬ ಹೆಸರಿನಲ್ಲಿ ಉದ್ಯೋಗಿಯನ್ನು ನೇಮಕ ಮಾಡಿದ್ದಾರೆ.
ಈ ರೀತಿಯಲ್ಲಿ ನೇಮಕಗೊಂಡ ವ್ಯಕ್ತಿಗೆ ಜ್ಯೂನಿಯರ್ ಅಕೌಂಟೆಂಟ್ ಎಂದು ಗುರುತಿನ ಪತ್ರ ನೀಡಿ ಹಣಕಾಸು ವ್ಯವಹಾರ ನೋಡಿಕೊಳ್ಳುವ ಅಧಿಕಾರ ನೀಡಲಾಗಿತ್ತು. ಅಸಲಿಗೆ ಶಿವಕುಮಾರ್ ಹೆಸರಿನ ವ್ಯಕ್ತಿಯೇ ಇರಲಿಲ್ಲ.
ಹಣಕ್ಕೆ ಕನ್ನ ಹಾಕಲು ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್‌ನಲ್ಲಿ ಫೆ. 21ರಂದು 034123030001619 ಖಾತೆ ತೆರೆಯಲಾಗುತ್ತದೆ.ಈ ಶಿವಕುಮಾರ್ ಖಾತೆಗೆ ನಿಗಮದಿಂದ 187 ಕೋಟಿ ರೂ. ವರ್ಗಾವಣೆಗೆ ಮನವಿ ಹೋಗುತ್ತದೆ.
ಮನವಿ ಮೇರೆಗೆ ನಿಗಮದಿಂದ ಮಾ 5ರಿಂದ ಮೇ 6 ರವರೆಗೆ 187 ಕೋಟಿ ರೂ. ಹಣ ವರ್ಗಾವಣೆಯಾಗುತ್ತದೆ. ಶಿವಕುಮಾರ್ ಖಾತೆಯಿಂದ ಹೈದರಾಬಾದ್‌ನ ಆರ್‌ಬಿಎಲ್ ಬ್ಯಾಂಕ್‌ಗೆ ಹಣ ವರ್ಗಾವಣೆ ಆಗುತ್ತದೆ. ಪದ್ಮನಾಭ್ ಕೃತ್ಯಕ್ಕೆ ಯೂನಿಯನ್ ಬ್ಯಾಂಕ್ ಸಿಬ್ಬಂದಿ ಸಾಥ್ ನೀಡಿದ್ದರಿಂದ ಇಷ್ಟೊಂದು ಹಣವನ್ನು ಲೂಟಿ ಮಾಡಲಾಗಿದೆ.
ವಾಲ್ಮೀಕಿ ನಿಗಮದಲ್ಲಿ ಇಲ್ಲದ ವ್ಯಕ್ತಿ ಹೆಸರಲ್ಲಿ ನಡೆದಿದ್ದಾದರೂ ಏನು..?
Previous ArticleD.K.ಶಿವಕುಮಾರ್ Shoes ಎಗರಿಸಿದ ಕಳ್ಳರು.
Next Article ನಾನೇಕೆ ರಾಜೀನಾಮೆ ಕೋಡಬೇಕೆಂದ ಸಿಎಂ ಸಿದ್ದರಾಮಯ್ಯ.