ಬೆಂಗಳೂರು,ಆ.6:
ವಾಲ್ಮೀಕಿ ಅಭಿವೃದ್ಧಿ ನಿಗಮದ 89.62 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ನೆಕ್ಕಂಟಿ ನಾಗರಾಜ್ ಮಾತ್ರವಲ್ಲದೆ ಅವರ ಸಂಬಂಧಿಕರಿಗೂ ಇದೀಗ ಸಂಕಷ್ಟ ಎದುರಾಗಿದೆ.
ನೆಕ್ಕಂಟಿ ನಾಗರಾಜ್ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳ ವ್ಯವಹಾರಗಳನ್ನು ಕಲೆ ಹಾಕಿರುವ
ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಇದೀಗ ಅವರಿಗೆಲ್ಲಾ ನೋಟಿಸ್ ನೀಡಿದ್ದಾರೆ.
ಮೂರು ದಿನಗಳ ಹಿಂದೆ ಬಳ್ಳಾರಿ ತಾಲೂಕಿನ ಕೃಷ್ಣಾನಗರದ ಕ್ಯಾಂಪ್ಗೆ ಬಂದಿದ್ದ ಇಡಿ ಅಧಿಕಾರಿಗಳು, ನೆಕ್ಕಂಟಿ ನಾಗರಾಜ್ ಅವರ ಮಾವ ವೆಂಕಟೇಶ್ವರ ರಾವ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬೆನ್ನಲ್ಲೇ ಕೃಷ್ಣಾನಗರ ಕ್ಯಾಂಪ್ನ ಕೆಲವರಿಗೆ ನೋಟಿಸ್ ನೀಡಿ ಹಣ ವಾಪಾಸ್ ನೀಡುವಂತೆ ತಾಕೀತು ಮಾಡಿದ್ದಾರೆ.
ಕೃಷ್ಣಾನಗರದ ಕ್ಯಾಂಪ್ನಲ್ಲಿರುವ ಸಂಬಂಧಿಕರಿಗೆ ವೆಂಕಟೇಶ್ವರ ರಾವ್ ಹಣ ವರ್ಗಾವಣೆ ಮಾಡಿಸಿದ್ದರು. ಎನ್ನಲಾಗಿದೆ.ಇದರಲ್ಲಿ ಶ್ರೀನಿವಾಸ ಎನ್ನುವವರು ಎಸ್ಐಟಿ ವಿಚಾರಣೆ ಹೋಗಿದ್ದು, ಹಣ ವಾಪಸ್ ನೀಡುವುದಾಗಿ ಹೇಳಿದ್ದರು. ಇದೀಗ ನಿನ್ನೆ ಮತ್ತೊಮ್ಮೆ ಇಡಿ ಅಧಿಕಾರಿಗಳು ಕೃಷ್ಣಾನಗರದ ಕ್ಯಾಂಪ್ಗೆ ಭೇಟಿ ನೀಡಿ ನೋಟಿಸ್ ನೀಡಿದ್ದಾರೆ. ಹಣ ಹಿಂದಿರುಗಿಸದ ಬಗ್ಗೆ ಕಾರಣ ನೀಡುವಂತೆ ಇಡಿ ಮತ್ತೆ ನೋಟಿಸ್ ನೀಡಿದೆ.
ವಾಲ್ಮೀಕಿ ಹಗರಣ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಎಸ್‌ಐಟಿ, ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭ ಸೇರಿ 12 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಪ್ರಾಥಮಿಕ ಆರೋಪ ಪಟ್ಟಿ ಸಲ್ಲಿಸಿದೆ.
Previous Articleಎರಡನೇ ವಿಮಾನ ನಿಲ್ದಾಣದ ಜಾಗ ಪೈನಲ್.
Next Article Bankಗೆ ವಂಚಿಸಿದವ 20 ವರ್ಷದ ನಂತರ ಸಿಕ್ಕಿ ಬಿದ್ದ