ಮುಳಬಾಗಿಲು,ನ.29:
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಸಮರ ಸಾರಿರುವ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತವರ ತಂಡದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪಕ್ಷ ನಿಷ್ಠರ ಬಣ ಹೋರಾಟ ತೀವ್ರಗೊಳಿಸಿದೆ.
ವಕ್ಫ್ ಒತ್ತುವರಿ ತೆರವು ವಿರುದ್ಧ ಹೋರಾಟದ ಹೆಸರಿನಲ್ಲಿ ಬಿಜೆಪಿ ನಾಯಕತ್ವದ ವಿರುದ್ಧ ಬಂಡಾಯ ಸರಿರುವ ಯತ್ನಾಳ್ ರಮೇಶ ಜಾರಕಿಹೊಳಿ, ಅರವಿಂದ ಲಿಂಬಾವಳಿ ಸೇರಿದಂತೆ ಎಲ್ಲ ನಾಯಕರು ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಕಾರ್ಯಕರ್ತರ ಜೊತೆಗೆ ಸಭೆ ನಡೆಸಲು ಮುಂದಾಗಿದೆ.
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ನಿವಾಸದಲ್ಲಿ ಉಪಹಾರ ಸಭೆಯಲ್ಲಿ ಪಾಲ್ಗೊಂಡ ಮಾಜಿ ಸಚಿವರಾದ ರೇಣುಕಾಚಾರ್ಯ, ಬಿ.ಸಿ. ಪಾಟೀಲ್, ಎಸ್.ಎ.ರವೀಂದ್ರನಾಥ್ ನೇತೃತ್ವದಲ್ಲಿ ಮಾಜಿ ಶಾಸಕರನ್ನೊಳಗೊಂಡ ಮೂವತ್ತು ಜನರ ಮುಳುಬಾಗಿಲಿನ ಕುರುಡುಮಲೆ ಗಣೇಶ ದೇವಾಲಯಕ್ಕೆ ಕರಡಿ ವಿಶೇಷ ಪೂಜೆ ಸಲ್ಲಿಸಿತು.
ನಂತರ ಮಾಜಿ ಶಾಸಕ ವೆಂಕಟ ಮುನಿಯಪ್ಪ ಅವರ ನಿವಾಸದಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಈ ನಿಯೋಗ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿ ಇರಬೇಕಾಗುತ್ತದೆ ಆದರೆ ಹಿರಿಯ ನಾಯಕರಾದ ಯತ್ನಾಳ್ ರಮೇಶ ಜಾರಕಿಹೊಳಿ ಮೊದಲಾದವರು ಇದನ್ನು ಬದಿಗೊತ್ತಿ ಗೊಂದಲ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಆಪಾದಿಸಿದರು.
ವಕ್ಫ್ ಒತ್ತುವರಿ ತೆರವು ವಿರುದ್ಧ ಜನಾಂದೋಲನ ಮೂಡಿಸಲು ಪಕ್ಷದ ಅಧ್ಯಕ್ಷ ವಿಜಯೇಂದ್ರ ಪ್ರತಿಪಕ್ಷ ನಾಯಕರಾದ ಆರ್ ಅಶೋಕ್ ಮತ್ತು ಚಲವಾದಿ ನಾರಾಯಣ ಸ್ವಾಮಿ ನೇತೃತ್ವದಲ್ಲಿ ಮೂರು ತಂಡಗಳು ಡಿಸೆಂಬರ್ 4 ರಿಂದ ರಾಜ್ಯದ್ಯಂತ ಪ್ರವಾಸ ನಡೆಸಲಿವೆ ಇದರಲ್ಲಿ ಎಲ್ಲ ಕಾರ್ಯಕರ್ತರು ಪಾಲ್ಗೊಳ್ಳಬೇಕು ಆದರೆ ಯತ್ನಾಳ್ ನೇತೃತ್ವದ ತಂಡ ಪರ್ಯಾಯವಾಗಿ ಯಾತ್ರೆ ಆರಂಭಿಸಿದ್ದು ಗೊಂದಲ ಸೃಷ್ಟಿಯಾಗಿದೆ ಎಂದು ಹೇಳಿದರು.
ಈ ಗೊಂದಲ ನಿವಾರಿಸುವ ದೃಷ್ಟಿಯಿಂದ ಯತ್ನಾಳ ನಡೆಸುತ್ತಿರುವ ಯಾತ್ರೆ ಗೆ ತಕ್ಷಣವೇ ಬ್ರೇಕ್ ಹಾಕಬೇಕು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಈ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೈಕಮಾಂಡ್ ಒತ್ತಡ ಹೇರಲಾಗುವುದು ಪಕ್ಷದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಈ ವಿದ್ಯಮಾನ ಗೊಂದಲಕ್ಕೆ ಕಾರಣವಾಗಿದೆ ಆದರೆ ಕಾರ್ಯಕರ್ತರು ಈ ಗೊಂದಲ ದಲ್ಲಿ ಸಿಲುಕದೆ ಪಕ್ಷದ ಅಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಮುನ್ನಡೆಯಬೇಕು ಎಂದು ಮನವಿ ಮಾಡಿದರು.
ಆನಂತರ ಈ ತಂಡ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದು ಅಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಗೆ ಪೂಜೆ ಸಲ್ಲಿಸಲಿದೆ ನಾಳೆ ಬೆಳಗ್ಗೆ ಮೈಸೂರಿನಲ್ಲಿ ಕಾರ್ಯಕರ್ತರ ಸಭೆ ನಡೆಸಲಿದ್ದು ನಂತರ ಮುರುಡೇಶ್ವರಕ್ಕೆ ತೆರಳಲಿದೆ
Previous Articleಪಣಿ ಸಿನಿಮಾ ಗೆ ಸಿಗುತ್ತಿದೆ ಭರ್ಜರಿ ರೆಸ್ಪಾನ್ಸ್
Next Article ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ ನಕಾರ