ಬೆಂಗಳೂರು,ಡಿ. 30:
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಮಾತಿಗೆ ಅವರದೇ ಪಕ್ಷದಲ್ಲಿ ಕವಡೆ ಕಾಸಿನ ಕಿಮತ್ತಿಲ್ಲ. ಹೀಗಾಗಿ ಕಾಂಗ್ರೆಸ್ಸಿನ ನಾಯಕರನ್ನು ಟೀಕೆ ಮಾಡಿ ತಮ್ಮ ಹುದ್ದೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮಂತ್ರಿ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ
ಬೀದರ್ ನ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ರಾಜೀನಾಮೆಗೆ ಒತ್ತಾಯಿಸುತ್ತಿರುವ ವಿಜಯೇಂದ್ರ ಅವರ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ ಖರ್ಗೆ, ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ ಎಂದು ಹೇಳಲಾಗುತ್ತಿರುವ ವ್ಯಕ್ತಿ ನಮ್ಮ ಪಕ್ಷದವರು ಎಂದು ನಾನು ಮೊದಲಿನಿಂದಲೇ ಹೇಳುತ್ತಿದ್ದೇನೆ. ನಾನು ಯಾವುದನ್ನೂ ಅಲ್ಲಗಳೆಯುತ್ತಿಲ್ಲ ಹೀಗಾಗಿ ಸಿಐಡಿ ತನಿಖೆ ಕೋರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ಯಾವುದೋ ಟೆಂಡರ್ ಕಾರಣಕ್ಕಾಗಿ ಹಣದ ವರ್ಗಾವಣೆಯಾಗಿದೆ ಎಂದು ಆರೋಪಿ ಸ್ಥಾನದಲ್ಲಿರುವವರು ಹೇಳುತ್ತಿದ್ದಾರೆ. ಇಲ್ಲಿ ಆರೋಪ-ಪ್ರತ್ಯಾರೋಪಗಳಿವೆ. ಸತ್ಯಾಂಶ ಹೊರಬರಬೇಕಾದರೆ ತನಿಖೆಯಾಗಬೇಕು ಎಂದು ನಾನೇ ಹೇಳುತ್ತಿದ್ದೇನೆ. ಇದರಲ್ಲಿ ಮುಚ್ಚಿಡುವಂತದ್ದು ಏನಿದೆ ಎಂದರು.
ಆರೋಪಿ ರಾಜು ಕಪನೂರು ಕಾಂಗ್ರೆಸ್ ಗೆ ಬರುವ ಮುನ್ನ ಬಿಜೆಪಿ ಪರಿಶಿಷ್ಟ ಜಾತಿಯ ಮೋರ್ಚಾದ ಅಧ್ಯಕ್ಷರಾಗಿದ್ದರು. ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಎರಡು ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಚಂದು ಪಾಟೀಲ್ ಅವರ ಜೊತೆ ಇರುವ ಫೋಟೊಗಳು ವೈರಲ್ ಆಗುತ್ತಿವೆ. ಹಾಗೆಂದ ಮಾತ್ರಕ್ಕೆ ಈ ಪ್ರಕರಣದಲ್ಲಿ ಛಲವಾದಿ ನಾರಾಯಣಸ್ವಾಮಿ, ಆರ್.ಅಶೋಕ್, ವಿಜಯೇಂದ್ರ ಅವರ ಕೈವಾಡವಿದೆ ಎಂದು ನಾವು ಹೇಳಬಹುದೇ? ಎಂದು ಪ್ರಶ್ನಿಸಿದರು.
ಪ್ರತಿನಿತ್ಯ ಸಾಕ್ಷಿ ,ಆಧಾರ, ಪುರಾವೆಗಳಿಲ್ಲದೆ ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಾ ಹೋದರೆ ಅದಕ್ಕೆಲ್ಲಾ ಉತ್ತರ ಕೊಡುತ್ತಾ ಕುಳಿತುಕೊಳ್ಳಲಾಗುವುದಿಲ್ಲ. ಆತ್ಮಹತ್ಯೆ ಪ್ರಕರಣದಲ್ಲಿ ವಾಸ್ತವಾಂಶಗಳು ಮುನ್ನೆಲೆಗೆ ಬರಬೇಕು ಮತ್ತು ಕುಟುಂಬದ ಸದಸ್ಯರಿಗೆ ನ್ಯಾಯ ಸಿಗಬೇಕು. ಅದನ್ನು ಬಿಟ್ಟು ಬರೀ ರಾಜಕೀಯವೇ ಹೆಚ್ಚಾಗುತ್ತಿದೆ. ಕಾನೂನು ರೀತಿ ತನಿಖೆ ನಡೆದರೆ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂದರು.
ಕುಟುಂಬದ ಸದಸ್ಯರು ಈಗ ದುಃಖದಲ್ಲಿ ಮತ್ತು ಸಿಟ್ಟಿನಲ್ಲಿದ್ದಾರೆ. ಪೊಲೀಸರು ಸಮಯಕ್ಕೆ ಸರಿಯಾಗಿ ಸ್ಪಂದಿಸಿಲ್ಲ ಎಂಬ ಆರೋಪ ಮಾಡಿದ್ದಾರೆ. ಅದಕ್ಕಾಗಿ ಹೆಡ್ ಕಾನ್ ಸ್ಟೇಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ಅವರು ಸಮಾಧಾನಗೊಂಡ ಬಳಿಕ ಕುಟುಂಬದ ಸದಸ್ಯರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗುವುದು. ನಿನ್ನೆ ಬಿಜೆಪಿ ಆಯೋಗ ಸಚಿನ್ ಅವರ ಮನೆಗೆ ಭೇಟಿ ನೀಡಿ 5 ಲಕ್ಷ ರೂ. ನೀಡಲು ಹೋದಾಗ ಸ್ವಾಭಿಮಾನ ಪ್ರದರ್ಶಿಸಿದ್ದಾರೆ. ನ್ಯಾಯ ಕೊಡಿಸಿ ಎಂದಿದ್ದಾರೆ
ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಕೊಡಿಸಿ ಎಂದು ಬಿಜೆಪಿಯವರು ಒತ್ತಾಯ ಮಾಡುವುದು ಬೇಕಿಲ್ಲ. ಒಂದು ವೇಳೆ ಆ ರೀತಿ ಹೇಳುವುದಾದರೆ ಕೇಂದ್ರ ಸರ್ಕಾರದಿಂದಲೇ ಬಿಜೆಪಿಯವರು ನೌಕರಿ ಕೊಡಿಸಲಿ ಎಂದು ಸವಾಲು ಹಾಕಿದರು.
ವಿಜಯೇಂದ್ರ ಯಾಕೆ ಹೀಗೆ ಮಾಡುತ್ತಿದ್ದಾರೆ ಗೊತ್ತಾ.
Previous Articleಪೊಲೀಸರಿಗೆ ದೂರು ಕೊಟ್ಟ ಡಿ.ಕೆ.ಸುರೇಶ್.
Next Article ಲಕ್ಷ್ಮೀ ಹೆಬ್ಬಾಳ್ಕರ್ -ಸಿ.ಟಿ.ರವಿ ನಡುವೆ ಸಂಧಾನಕ್ಕೆ ಯತ್ನ.

2 ಪ್ರತಿಕ್ರಿಯೆಗಳು
Нужен трафик и лиды? яндекс реклама казань SEO-оптимизация, продвижение сайтов и реклама в Яндекс Директ: приводим целевой трафик и заявки. Аудит, семантика, контент, техническое SEO, настройка и ведение рекламы. Работаем на результат — рост лидов, продаж и позиций.
Гродно — уникальный город с сильной локальной идентичностью. Успешное продвижение здесь строится не на шаблонах, а на глубоком знании seo гродно его жителей, бизнес-среды и цифровых привычек. Доверьте продвижение вашего сайта тем, кто знает Гродно изнутри.