ಬೆಂಗಳೂರು,ಆ.13:
ವಿದೇಶ ವ್ಯಾಸಂಗ ಕೇವಲ ಶ್ರೀಮಂತರಿಗೆ ಮಾತ್ರವಲ್ಲ ಈಗ ಎಲ್ಲರಿಗೂ ಕೈಗೆಟುಕಲಿದೆ. ವಿದೇಶದಲ್ಲಿ ಅಧ್ಯಯನ ಮಾಡಬೇಕೆಂಬ ಕನಸು ಕಂಡಿರುವವರಿಗೆ ಅದು ನನಸಾಗುವ ಕಾಲ ಬಂದಿದೆ.
ಇದೆಲ್ಲಾ ಸಾಧ್ಯವಾಗುತ್ತಿರುವುದು ಕರ್ನಾಟಕ ಸರ್ಕಾರದ ಹೊಸ ಯೋಜನೆಯಿಂದ. ಆರ್ಥಿಕವಾಗಿ ದುರ್ಬಲವಾಗಿರುವ, ಮಧ್ಯಮವರ್ಗದ ಹಿನ್ನೆಲೆಯ ವಿದ್ಯಾರ್ಥಿಗಳು ಸಹ ಈಗ ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಯಾವುದೇ ತೊಂದರೆಯಿಲ್ಲದೇ ಪಡೆಯಬಹುದಾಗಿದೆ.
ಕೌಶಲ್ಯ ಅಭಿವೃದ್ಧಿ ಇಲಾಖೆ ಅಡಿಯ ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ಆಗಸ್ಟ್ 17 ರ ಭಾನುವಾರ ಹೋಟೆಲ್ ಲಲಿತ್ ಅಶೋಕ್‌ನಲ್ಲಿ ಅಂತಾರಾಷ್ಟ್ರೀಯ ವಿದೇಶದಲ್ಲಿ ಅಧ್ಯಯನ ಮೇಳ – 2025 ಅನ್ನು ಆಯೋಜಿಸಿದೆ.
ಈ ವಿಶೇಷ ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಪ್ರಮುಖ ಜಾಗತಿಕ ವಿಶ್ವವಿದ್ಯಾಲಯಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಸಂಸ್ಥೆಗಳು ವಿಶ್ವದ ಟಾಪ್ 500 ರಲ್ಲಿ ಸ್ಥಾನ ಪಡೆದಿವೆ.
ಈ ಕುರಿತು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ ಪ್ರಕಾಶ್ ಆರ್. ಪಾಟೀಲ್ ಹೆಚ್ಚಿನ ಮಾಹಿತಿ ನೀಡಿದರು.
ಸಮಾಜದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮಾಡುವ ಅವಕಾಶವನ್ನು ಒದಗಿಸಲಾಗುವುದು. ಇದೇ ಮೊದಲ ಬಾರಿಗೆ ಈ ರೀತಿಯ ಯೋಜನೆಯನ್ನು ದೇಶದಲ್ಲಿ ಜಾರಿಗೆ ತರಲಾಗುತ್ತಿದೆ” ಎಂದು ತಿಳಿಸಿದರು.
ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಇದು “ಜಾಗತಿಕ ಶಿಕ್ಷಣದ ಹೆಬ್ಬಾಗಿಲು” ಎಂದು ಸಚಿವರು ತಿಳಿಸಿದರು.
ವಿದ್ಯಾರ್ಥಿಗಳು ವಿದೇಶದಲ್ಲಿ ವ್ಯಾಸಂಗ ಮಾಡಲು ಭಾರತದಿಂದ ತೆರಳಿದ ನಂತರ ಅವರಿಗೆ ಎಲ್ಲ ರೀತಿಯ ಬೆಂಬಲ ಒದಗಿಸುವುದು ನಮ್ಮ ಗುರಿಯಾಗಿದೆ. ಈ ಸರ್ಕಾರಿ ಬೆಂಬಲಿತ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಹೆಚ್ಚು ಆಪ್ತವಾಗಿರಲಿದೆ. ಶೈಕ್ಷಣಿಕ ಪ್ರಗತಿ ಮತ್ತು ಕಾನೂನು ನೆರವು ಎಲ್ಲವೂ ದೊರೆಯಲಿದೆ ಎಂದು ಸಚಿವರು ವಿವರಿಸಿದರು.
ಈ ಎಕ್ಸ್‌ಪೋದಲ್ಲಿ ಹೆಚ್ಚು ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆ ನೀಡುತ್ತದೆ. ವಿಶ್ವವಿದ್ಯಾಲಯದ ಆಯ್ಕೆ, ಏಜೆನ್ಸಿ ಶುಲ್ಕವಿಲ್ಲದೆ ಉಚಿತ ಮಾರ್ಗದರ್ಶನವನ್ನು ನಾವು ನೀಡುತ್ತೇವೆ ಎಂದು ಡಾ. ಶರಣಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದರು.
ಎಕ್ಸ್‌ಪೋದ ಪ್ರಮುಖ ಅಂಶಗಳು:
ವಿಶ್ವವಿದ್ಯಾಲಯದ ಪ್ರತಿನಿಧಿಗಳೊಂದಿಗೆ ಒನ್-ಆನ್-ಒನ್ ಸೆಷನ್; ಸ್ಪಾಟ್ ವಿದ್ಯಾರ್ಥಿವೇತನಗಳು ಮತ್ತು ಅರ್ಹತಾ ಮೌಲ್ಯಮಾಪನಗಳು; ವೀಸಾ ಪ್ರಕ್ರಿಯೆ, ಹಣಕಾಸು ಯೋಜನೆ, ಆರೋಗ್ಯ ವಿಮೆ, ಭಾಷಾ ಪ್ರಾವೀಣ್ಯತೆ ಮತ್ತು ಇತರೆ ಮಾರ್ಗದರ್ಶನ.
ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‌ಡಮ್, ಅಮೆರಿಕ, ಐರ್ಲೆಂಡ್, ನ್ಯೂಜಿಲೆಂಡ್ ಮತ್ತು ಮಧ್ಯಪ್ರಾಚ್ಯ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಇರಲಿದ್ದಾರೆ.
ಎಕ್ಸ್‌ಪೋದಲ್ಲಿ ಭಾಗವಹಿಸಲು http://studyabroad.ksdckarnataka.com ನಲ್ಲಿ ನೋಂದಾಯಿಸಿಕೊಳ್ಳಬಹುದು
Previous Articleರಾಜಣ್ಣ ಬೆಂಬಲಕ್ಕೆ ನಿಂತ ಶಾಸಕ
Next Article ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಮತ್ತೇ ಜೈಲು !


8 ಪ್ರತಿಕ್ರಿಯೆಗಳು
ремонт ванной под ключ ремонт ванной комнаты под ключ
Читать больше на сайте: https://l-parfum.ru/catalog/lacoste/hot-play/
Полная версия статьи: https://domstav.ru
интерьер дизайн обои квартиры услуги дизайнера квартиры
спб дизайн интерьера дизайн проект ремонта квартиры
Старый паркет? шлифовка паркета в спб профессиональное восстановление деревянного пола без пыли и лишних затрат. Удаляем царапины, потемнения и старое покрытие, возвращаем гладкость и естественный цвет. Используем современное оборудование, выполняем циклевку, шлифовку и лакировку паркета под ключ с гарантией качества и точным соблюдением сроков.
Best selection of the day: https://thegreatmekongbikeride.com/popular-hot-gender-pornography-videos-of-xvideos/
Dive Deeper: https://thanhtrahuongvan.com/no-deposit-incentive-gambling-enterprises-2026-bitstarz-drops-fifty-totally-free-revolves-the-real-deal-currency-victories-no-deposit-expected/