ಬೆಂಗಳೂರು:
ಮದರಸಾಗಳಲ್ಲಿ ಭಾರತದ ವಿರೋಧಿ ಪಾಠ ಹೇಳಿ ಕೊಡಲಾಗುತ್ತಿದೆ ಎಂದು ಬಿಜೆಪಿಯ ಹಿರಿಯ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸಭೆಯಲ್ಲಿ ನೀಡಿದ ಹೇಳಿಕೆ ಆಡಳಿತ ಮತ್ತು ಪ್ರತಿ ಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ಗದ್ದಲ ಕೋಲಾಹಲಕ್ಕೆ ಕಾರಣವಾಯಿತು.
ಯತ್ನಾಳ್ ಮಾತಿನಿಂದ ಕೆಂಡಾಮಂಡಲರಾದ ಕಾಂಗ್ರೆಸ್ ಸದಸ್ಯ ರಿಜ್ವಾನ್ ಅರ್ಷದ್, ಅವರು ಯತ್ನಾಳ್ ಅವರನ್ನು ಕುರಿತು ದೇಶದ್ರೋಹಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮದರಸಾಗಳಲ್ಲಿ ಭಾರತ ವಿರೋಧಿ ಪಾಠ ಮಾಡಲಾಗುತ್ತಿದೆ ಎಂದು ಹೇಳಿರುವ ಯತ್ನಾಳ್ ಕ್ಷಮೆ ಕೇಳಬೇಕು ಹಾಗೂ ಕಡತದಿಂದ ಅವರ ಹೇಳಿಕೆಯನ್ನು ತೆಗೆಯಬೇಕು ಎಂದು ಆಗ್ರಹಿಸಿದರು.
ಬಜೆಟ್ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಯತ್ನಾಳ್, ಈ ‘ಬಜೆಟ್ ನಲ್ಲಿ 9 ಪೇಜ್ ಅಲ್ಪಸಂಖ್ಯಾತರಿಗೆ ಇದೆ. ನೂರು ಉರ್ದು ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲಾಗಿದೆ. ಹಿಂದಿ ಬೋರ್ಡ್ ಬರೆದರೆ ಕನ್ನಡ ಸಂಘಟನೆಗಳು ಅಳಿಸುತ್ತಾರೆ. ಕನ್ನಡ ಕಲಿಯಬೇಕಲ್ವಾ? ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣ ಜೊತೆ ಔಪಚಾರಿಕ ಶಿಕ್ಷಣಕ್ಕೆ ಒತ್ತು ಕೊಡಲು ಅನುದಾನ ಕೊಡಲಾಗಿದೆ. ಆದರೆ, ಮದರಸಾಗಳಲ್ಲಿ ಭಾರತದ ವಿರುದ್ಧ ಕಲಿಸಲಾಗುತ್ತಿದೆ’ ಎಂದು ಆರೋಪಿಸಿದರು.
ಇದಕ್ಕೆ ರಿಜ್ವಾನ್ ಅರ್ಷದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಏನ್ರೀ ಮಾತನಾಡ್ತಿದ್ದೀರಿ, ಭಾರತದ ವಿರುದ್ಧ ಅಂದರೆ ಏನು. ಬಾಯಿಗೆ ಬಂದ ಹಾಗೆ ಮಾತನಾಡ್ತೀರಾ? ಸುಮ್ಮನೆ ಇರ್ರೀ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜಕ್ಕೆ ಬೆಂಕಿ ಹಚ್ಚುತ್ತೀರಾ, ನೀವು ಭಾರತದ ವಿರೋಧಿಗಳು,ಹಿರಿಯರು ಎಂದು ಮರ್ಯಾದೆ ಕೊಟ್ಟರೆ ನಿಮಗೆ ಮಾನ ಮರ್ಯಾದೆ ಇಲ್ವಾ? ಯಾವ ಮದಸರಾದಲ್ಲಿ ಭಾರತ ವಿರೋಧಿ ಚಟುವಟಿಕೆ ಕಲಿಸ್ತಾರೆ ಎಂದು ಹೇಳಿ ಸಮಾಜಕ್ಕೆ ಬೆಂಕಿ ಹಚ್ಚುತ್ತೀರಾ, ನೀವು ಭಾರತದ ವಿರೋಧಿಗಳು. ಯತ್ನಾಳ್ ದೇಶದ್ರೋಹಿ ಎಂದು ರಿಜ್ವಾನ್ ಎರಿದ ಧ್ವನಿಯಲ್ಲಿ ದೂರಿದರು.
ದೇಶದ ಸಾಮರಸ್ಯವನ್ನು ಹಾಳು ಮಾಡುತ್ತಿದ್ದೀರಿ. ದೇಶ ದ್ರೋಹಿಗೆ ಮಾತನಾಡಲು ಏಕೆ ಅವಕಾಶ ಕೊಡ್ತೀರಿ ಎಂದು ಕಿಡಿಕಾರಿ ಕಡತದಿಂದ ತೆಗೆಯುವಂತೆ ಆಗ್ರಹ ಅಲ್ಲದೆ ಅಮಾನತು ಮಾಡುವಂತೆ ಆಗ್ರಹಿಸಿದರು.
ಜನತಾ ದಳದಲ್ಲಿ ಇದ್ದಾಗ ಯತ್ನಾಳ್ ಟಿಪ್ಪು ಸುಲ್ತಾನ್ ಜಯಂತಿ ಮಾಡಿದ್ದಾರೆ ಎಂದು ಎಂಬಿ ಪಾಟೀಲ್ ಆರೋಪಿಸಿದರು. ಯತ್ನಾಳ್ ಮಾತಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಪದ ಇದ್ದರೆ ಕಡತದಿಂದ ತೆಗೆಯುವುದಾಗಿ ಸ್ವೀಕರ್ ತಿಳಿಸಿ ವಿಷಯಕ್ಕೆ ತೆರೆ ಏಳೆದರು.
Previous Articleಬಿರಿಯಾನಿ ತಿಂದವರು ಕೊಟ್ಟಿದ್ದೇನು..?
Next Article ಮಂತ್ರಿಗಳ ಹನಿ ಟ್ರ್ಯಾಪ್ ಬಗ್ಗೆ ಉನ್ನತ ತನಿಖೆ